For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2' ನಟಿ ರವೀನಾಗೆ ಪ್ರಧಾನಿ ಮೋದಿ ಪತ್ರ

  |

  'ಕೆಜಿಎಫ್ 2' ನಟಿ ರವೀನಾ ಟಂಡನ್‌ಗೆ ಇದು ನೋವಿನ ಸಮಯ. ರವೀನಾ ಟಂಡನ್‌ರ ತಂದೆ ಕೆಲ ದಿನಗಳ ಹಿಂದಷ್ಟೆ ನಿಧನರಾಗಿದ್ದಾರೆ. ತಂದೆಯ ನಿಧನಕ್ಕೆ, ನಟಿಗೆ ಚಿತ್ರರಂಗದ ಗಣ್ಯರು, ಆಪ್ತೇಷ್ಟರು ಸಂತಾಪ ವ್ಯಕ್ತಪಡಿಸಿದ್ದಾರೆ.

  ನಿನ್ನೆ (ಫೆಬ್ರವರಿ 24)ಕ್ಕೆ ರವೀನಾ ಟಂಡನ್‌ರ ತಂದೆ ರವಿ ಟಂಡನ್ ನಿಧನರಾಗಿ ಹದಿಮೂರು ದಿನಗಳಾದವು. ಈ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ರವೀನಾ ಟಂಡನ್ ಪ್ರಧಾನಿ ಮೋದಿಯವರು ತಮಗೆ ಬರೆದ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಹಿಂದು ಕಾರ್ಯಕರ್ತ ಹರ್ಷ ಪರ ದನಿ ಎತ್ತಿದ ಬಾಲಿವುಡ್ ಬೆಡಗಿಹಿಂದು ಕಾರ್ಯಕರ್ತ ಹರ್ಷ ಪರ ದನಿ ಎತ್ತಿದ ಬಾಲಿವುಡ್ ಬೆಡಗಿ

  ''ರವಿ ಟಂಡನ್, ತಮ್ಮ ಪ್ರತಿಭೆಯಿಂದ ಭಾರತೀಯ ಸಿನಿಮಾವನ್ನು ಎತ್ತರಕ್ಕೆ ಕೊಂಡೊಯ್ದರು. ಸಿನಿಮಾ ನಿರ್ದೇಶನದ ಸೂಕ್ಷ್ಮಗಳು ಅವರಿಗೆ ಚೆನ್ನಾಗಿ ಗೊತ್ತಿದ್ದವು. ಅವರು ಕೆಲವು ಮರೆಯಲಾಗದ ಸಿನಿಮಾಗಳನ್ನು ಭಾರತ ಸಿನಿಮಾ ರಂಗಕ್ಕೆ ನೀಡಿದ್ದಾರೆ. ಅವರ ಅಗಲಿಕೆ ಕಲಾ ಜಗತ್ತಿಗೆ ತುಂಬಲಾರದ ನಷ್ಟ'' ಎಂದು ಮೋದಿಯವರು ರವೀನಾ ಟಂಡನ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

  ರವೀನಾ ಟಂಡನ್‌ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿರುವ ಪ್ರಧಾನಿ ಮೋದಿ, ''ಸಿನಿಮಾ ರಂಗದಲ್ಲಿ ನಿಮ್ಮ ಯಶಸ್ಸು, ಸುದೀರ್ಘ ಪಯಣ ಹಾಗೂ ನಿಮ್ಮ ವ್ಯಕ್ತಿತ್ವ ಗಮನಿಸಿದರೆ ನಿಮ್ಮ ತಂದೆಯವರು ನಿಮಗೆ ನೀಡಿರುವ ಮಾರ್ಗದರ್ಶನ ಹಾಗೂ ನಿಮಗೆ ಅವರು ನೀಡಿರುವ ಜೀವನ ಮೌಲ್ಯದ ಪಾಠ ಗೊತ್ತಾಗುತ್ತದೆ'' ಎಂದಿದ್ದಾರೆ.

  ಮದುವೆಯಾಗದೇ ಮಕ್ಕಳನ್ನು ಪಡೆದಿದ್ದ ರವೀನಾ ಟಂಡನ್! ಸತ್ಯದ ಹಿಂದಿನ ಕತೆಮದುವೆಯಾಗದೇ ಮಕ್ಕಳನ್ನು ಪಡೆದಿದ್ದ ರವೀನಾ ಟಂಡನ್! ಸತ್ಯದ ಹಿಂದಿನ ಕತೆ

  ಮೋದಿ ಅವರ ಪತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ರವೀನಾ ಟಂಡನ್, ''ಅಪ್ಪ ಅಗಲಿ ಇಂದಿಗೆ ಹದಿಮೂರು ದಿನಗಳಾದವು. ನಂಬಿಕೆಯಂತೆ, ಇಂದು ಅವರ ಆತ್ಮ ಇಂದು ಎಲ್ಲ ಬಂಧನಗಳಿಂದ ಮುಕ್ತವಾಗುತ್ತದೆ. ಅವರ ಮೇಲಿನ ಪ್ರೀತಿಯಿಂದ ನಮಗೆ ಬೆಂಬಲ ಕೊಟ್ಟ ಎಲ್ಲರನ್ನೂ ಇಂದು ನಾನು ಸ್ಮರಿಸುತ್ತೇನೆ. ಎಲ್ಲರೂ ಹೇಳುತ್ತಿರುವಂತೆ ಅವರೊಬ್ಬ ಅದ್ಭುತ ವ್ಯಕ್ತಿಯಾಗಿದ್ದರು ಮತ್ತು ಅತ್ಯದ್ಭುತ ಸಿನಿಮಾಕರ್ಮಿಯಾಗಿದ್ದಾರೆ'' ಎಂದಿದ್ದಾರೆ.

  ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ರವೀನಾ ಟಂಡನ್: ಪಕ್ಷ ಯಾವುದು?ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ರವೀನಾ ಟಂಡನ್: ಪಕ್ಷ ಯಾವುದು?

  ರವಿ ಟಂಡನ್ ಅವರು ಬಾಲಿವುಡ್‌ನ ಹಿಟ್ ಸಿನಿಮಾಗಳಾದ 'ನಜರಾನಾ', ರಿಶಿ ಕಪೂರ್, ನೀತು ನಟನೆಯ 'ಖೇಲ್‌ ಖೇಲ್‌ ಮೇ', ಅಮಿತಾಬ್ ಬಚ್ಚನ್ ನಟನೆಯ 'ಮಜ್‌ಬೂರ್', ಸಂಜೀವ್ ಕಪೂರ್ ನಟನೆಯ 'ಅನ್ಹೋನೆ' ಇನ್ನೂ ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ರವಿ ಟಂಡನ್ ಅವರು ಫೆಬ್ರವರಿ 11 ರಂದು ನಿಧನ ಹೊಂದಿದರು.

  ರವೀನಾ ಟಂಡನ್ ಹಲವು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದು ರವೀನಾಗೆ ತಂದೆಯದ್ದೇ ಮಾರ್ಗದರ್ಶನ. ರವೀನಾ ಟಂಡನ್ ಕನ್ನಡದಲ್ಲಿ ನಟಿಸಿರುವ ಹೊಸ ಸಿನಿಮಾ 'ಕೆಜಿಎಫ್ 2' ಏಪ್ರಿಲ್ 14 ರಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ.

  English summary
  Prime minister Narendra Modi wrote letter to actress Raveena Tandon and express his condolence for Raveena's father Ravi Tandon's death.
  Friday, February 25, 2022, 9:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X