For Quick Alerts
  ALLOW NOTIFICATIONS  
  For Daily Alerts

  ಕಾಲೇಜು ಬಿಡುವ ನಿರ್ಧಾರ ಮಾಡಿದ ಪ್ರಿಯಾ ವಾರಿಯರ್

  |

  ಕಣ್ಸನ್ನೆಯ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ದೊಡ್ಡ ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಪ್ರಿಯಾಗೆ ಕಾಲೇಜ್ ಗೆ ಹೋಗಬೇಕಾ ಅಥವಾ ಸಿನಿಮಾದಲ್ಲೆ ಮುಂದುವರೆಯ ಬೇಕಾ ಎನ್ನುವುದು ಗೊತ್ತಾಗುತ್ತಿಲ್ಲವಂತೆ.

  ಸದ್ಯ ಬಿ ಕಾಂ ಎರಡನೆ ವರ್ಷದಲ್ಲಿ ಓದುತ್ತಿದ್ದಾರೆ. ಈಗಾಗಲೆ ತರಗತಿಗೆ ಚಕ್ಕರ್ ಹಾಕುತ್ತಿರುವ ಪ್ರಿಯಾಗೆ ಓದು ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದು ಕಷ್ಟವಾಗುತ್ತಿದೆಯಂತೆ. ಹಾಗಾಗಿ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿ ಸಿನಿಮಾದಲ್ಲೆ ತೊಡಗಿಕೊಳ್ಳುವ ನಿರ್ಧಾರ ಮಾಡಿದ್ದಾರಂತೆ.

  ಕನ್ನಡಕ್ಕೆ ಬಂದ ಪ್ರಿಯಾ ವಾರಿಯರ್ ಗೆ ನಾಯಕ ಇವರೆ

  ಸದ್ಯ ಪ್ರಿಯಾ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯ ಚೊಚ್ಚಲ ಚಿತ್ರ 'ಶ್ರೀದೇವಿ ಬಂಗ್ಲೋ' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಅಲ್ಲದೆ ಮೊದಲ ಸಿನಿಮಾ ರಿಲೀಸ್ ಗು ಮೊದಲೆ 'ಲವ್ ಹ್ಯಾಕರ್ಸ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಚಿತ್ರರಂಗಕ್ಕೂ ಕರೆತರುವ ಪ್ಲಾನ್ ಮಾಡಲಾಗುತ್ತಿದೆ.

  ಸಾಕಷ್ಟು ಬ್ಯುಸಿ ಇರುವ ಪ್ರಿಯಾಗೆ ಓದಿನ ಕಡೆ ಗಮನ ಕೊಡುವುದು ಕಷ್ಟವಾಗುತ್ತಿದೆ. ಆದ್ರೆ ಅವರ ಪೊಷಕರಿಗೆ ಮತ್ತು ಶಿಕ್ಷಕರಿಗೆ ಪ್ರಿಯಾ ಕಾಲೇಜ್ ಬಿಡುವುದು ಸ್ವಲ್ಪವು ಇಷ್ಟವಿಲ್ಲವಂತೆ. "ಪ್ರಿಯಾ ಓದಿನಲ್ಲಿ ಜಾಣೆ ಇದ್ದಾರೆ. ಹಾಗಾಗಿ ನಟನೆ ಗಿಂತಲು ಓದಿನಲ್ಲಿಯೆ ಹೆಚ್ಚು ಸಾಧನೆ ಮಾಡಬಲ್ಲಳು" ಎಂಬುದು ಶಿಕ್ಷಕರ ಅಭಿಪ್ರಾಯವಂತೆ. ಹಾಗಾಗಿ ಪ್ರಿಯಾ ಏನು ಮಾಡಬೇಕು ಎಂದು ತಲೆಕೆಡಿಸಿಕೊಂಡಿದ್ದಾರಂತೆ.

  English summary
  Malayalam actress Priya Prakash Varrier revealed that her teachers want her to continue her studies. Priya is confused about whether she should continue her education or become fully involved in acting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X