For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಚಿತ್ರದಲ್ಲಿ ಪ್ರಿಯಾಮಣಿಗೆ ಭರ್ಜರಿ ಚಾನ್ಸ್

  By Rajendra
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ 'ಲಕ್ಷ್ಮಿ' ಚಿತ್ರದಲ್ಲಿ ಮಿಂಚಿರುವ ಬೆಡಗಿ ಪ್ರಿಯಾಮಣಿ ದಕ್ಷಿಣದಲ್ಲಿ ಯಾವುದೇ ಚಿತ್ರಕ್ಕೆ ಸಹಿಹಾಕಿಲ್ಲ. ಆದರೆ ಉತ್ತರ ಕಡೆಯಿಂದ ಭರ್ಜರಿ ಆಫರ್ ಬಂದಿದೆ. ಅದೂ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಚಿತ್ರದಲ್ಲಿ ಎಂಬುದು ವಿಶೇಷ.

  ಇನ್ನೊಂದು ವಿಶಷಯ ಏನೆಂದರೆ ಈ ಚಿತ್ರದಲ್ಲಿ ಪ್ರಿಯಾಮಣಿ ಅವರದು ನಾಯಕಿ ಪಾತ್ರ ಅಲ್ಲ. ಐಟಂ ಪಾತ್ರಕ್ಕೆ ಸಹಿ ಹಾಕಿದ್ದಾರೆ ಎಂಬುದು ಸದ್ಯದ ಬಾಲಿವುಡ್ ಬಾತ್. ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಮುಖ್ಯಭೂಮಿಕೆಯಲ್ಲಿರುವ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ಪ್ರಿಯಾಮಣಿ ಸೊಂಟ ಬಳುಕಿಸಲಿದ್ದಾರೆ.

  ಪ್ರಿಯಾಮಣಿ ಪಾತ್ರಕ್ಕೆ ನಯನತಾರಾ ಅವರನ್ನು ಸಂಪರ್ಕಿಸಲಾಗಿತ್ತಂತೆ. ಆದರೆ ನಯನಿ ಐಟಂ ಪಾತ್ರ ಒಲ್ಲೆ ಎಂದಿದ್ದರು. ಈಗ ಇದೇ ಪಾತ್ರ ಪ್ರಿಯಾಮಣಿ ಪಾಲಾಗಿದೆ. ಚೆನ್ನೈ ಎಕ್ಸ್ ಪ್ರೆಸ್ ಚಿತ್ರಕ್ಕೆ ರೋಹಿತ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಚಿತ್ರದ ಕಥಾ ಹಂದರದಲ್ಲಿ ದಕ್ಷಿಣ ಭಾರತದಕ್ಕೂ ಕೊಂಚ ಲಿಂಕ್ ಇದೆಯಂತೆ. ಹಾಗಾಗಿ ಚಿತ್ರದ ನಿರ್ದೇಶಕರು ದಕ್ಷಿಣದ ಬೆಡಗಿಯೊಬ್ಬರನ್ನು ಹುಡುಕಿದ್ದರು. ಅವರ ಕಣ್ಣಿಗೆ ಮೊದಲು ಬಿದ್ದವರೇ ನಯನತಾರಾ. ಆಕೆ ನೋ ಎಂಬ ಬಳಿಕ ಪ್ರಿಯಾಮಣಿಗೆ ಗಾಳ ಹಾಕಿದ್ದಾರೆ.

  ಪ್ರಿಯಾಮಣಿ ಈಗ ಸ್ಲಿಮ್ ಆಗಿದ್ದು ತಮ್ಮ ಸೊಂಟದ ಸುತ್ತಳತೆಯಲ್ಲಿ ಸಿಕ್ಕಾಪಟ್ಟೆ ಬದಲಾಯಿಸಿಕೊಂಡಿದ್ದಾರೆ. ಡುಮ್ಮಗಿದ್ದ ಮೈಯನ್ನು ಅಂಕುಡೊಂಕು ಮಾಡಿಕೊಂಡಿದ್ದಾರೆ. ಬಹುಶಃ ಪ್ರಿಯಾಮಣಿ ಬಾಲಿವುಡ್ ಮಂದಿಗೂ ಇಷ್ಟವಾಗಬಹುದೇನೋ. (ಏಜೆನ್ಸೀಸ್)

  English summary
  South Indian beauty Priyamani has grabbed a Bollywood offer that too opposite Shah Rukh Khan.According to sources she got an offer to play the item number in Shahrukh Khan’s forthcoming film titled "Chennai Express". ಶಾರುಖ್ ಚಿತ್ರದಲ್ಲಿ ಪ್ರಿಯಾಮಣಿಗೆ ಭರ್ಜರಿ ಚಾನ್ಸ್

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X