For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ-ನಿಕ್ ಜೊನಾಸ್ ನಿಶ್ಚಿತಾರ್ಥ: ಅಪ್ ಸೆಟ್ ಆದ್ರಾ ಕಂಗನಾ.?

  By Harshitha
  |

  'ಬಾಕ್ಸ್ ಆಫೀಸ್ ಟೈಗರ್' ಸಲ್ಮಾನ್ ಖಾನ್ ಜೊತೆಗೆ ಪ್ರಿಯಾಂಕಾ ಛೋಪ್ರಾ 'ಭಾರತ್' ಸಿನಿಮಾದಲ್ಲಿ ಅಭಿನಯಿಸಬೇಕಿತ್ತು. ಆದ್ರೀಗ, 'ಭಾರತ್' ಸಿನಿಮಾದಿಂದ ಪ್ರಿಯಾಂಕಾ ಛೋಪ್ರಾ ಹಿಂದೆ ಸರಿದಿದ್ದಾರೆ. ಅದಕ್ಕೆ ಕಾರಣ, ಮದುವೆ ತಯಾರಿ ಎನ್ನಲಾಗಿದೆ.

  ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ಈಗಾಗಲೇ ಎಂಗೇಜ್ ಆಗಿದ್ದಾರೆ. ಪ್ರಿಯಾಂಕಾ ಜನ್ಮದಿನ (ಜುಲೈ 18) ದಂದೇ ನಿಕ್ ಜೊನಾಸ್ ಆಕೆಗೆ ಉಂಗುರ ತೊಡಿಸಿದ್ದಾರೆ ಎಂದು ವರದಿ ಆಗಿದೆ.

  ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಪ್ರಿಯಾಂಕಾ ಛೋಪ್ರಾ ವಿವಾಹ ನಡೆಯಲಿದೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಮದುವೆಗಾಗಿ ಪ್ರಿಯಾಂಕಾ ಈಗಾಗಲೇ ಗೌನ್ ಕೂಡ ಫೈನಲೈಸ್ ಮಾಡಿದ್ದಾರಂತೆ.

  ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.! ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.!

  ಇಷ್ಟೆಲ್ಲಾ ಗಾಸಿಪ್ ಕೇಳಿಬರುತ್ತಿರುವಾಗಲೇ, ಪ್ರಿಯಾಂಕಾ ಛೋಪ್ರಾ ಕ್ಲೋಸ್ ಫ್ರೆಂಡ್ ಕಂಗನಾ ರಣೌತ್ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಪ್ರಿಯಾಂಕಾ ಛೋಪ್ರಾ ನಿಶ್ಚಿತಾರ್ಥದ ಬಗ್ಗೆ ಕಂಗನಾ ಬಳಿ ಮಾಧ್ಯಮದವರು ಪ್ರಶ್ನೆ ಮಾಡಿದಾಗ, ''ಒಂದು ವೇಳೆ ಈ ಸುದ್ದಿ ನಿಜ ಆಗಿದ್ದರೆ, ನನಗೆ ಅಪ್ ಸೆಟ್ ಆಗುತ್ತೆ. ಯಾಕಂದ್ರೆ, ಪ್ರಿಯಾಂಕಾ ನನ್ನ ಬಳಿ ಏನ್ನನ್ನೂ ಹೇಳಿಲ್ಲ'' ಎಂದಿದ್ದಾರೆ ನಟಿ ಕಂಗನಾ.

  ಅಂದ್ಹಾಗೆ, ಪ್ರಿಯಾಂಕಾ ಛೋಪ್ರಾ ಹಾಗೂ ಕಂಗನಾ ರಣೌತ್ 'ಫ್ಯಾಶನ್', 'ಕ್ರಿಶ್-3' ಸಿನಿಮಾಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ.

  English summary
  Priyanka Chopra and Nick Jonas are engaged: 'I'm upset says Kangana Ranaut.
  Monday, July 30, 2018, 10:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X