For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾದಲ್ಲಿ ಇಂಡಿಯನ್ ರೆಸ್ಟೋರೆಂಟ್ ಪ್ರಾರಂಭಿಸಿದ ಪ್ರಿಯಾಂಕಾ ಚೋಪ್ರಾ: ಪೂಜೆಯ ಫೋಟೋ ವೈರಲ್

  |

  ಭಾರತದ ಪ್ರಸಿದ್ಧ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ ನಿಕ್ ಜೋನಸ್ ಜೊತೆ ಅಮೆರಿಕದಲ್ಲಿ ನೆಲೆಸಿದ್ದಾರೆ. ಇತ್ತೀಚಿಗಷ್ಟೆ ಹೊಸ ಮನೆಯ ಗೃಹಪ್ರವೇಶ ಮಾಡಿದ್ದ ಪ್ರಿಯಾಂಕಾ ದಂಪತಿ ಇದೀಗ ರೆಸ್ಟೋರೆಂಟ್ ನ ಮಾಲಿಕರಾಗಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಅಮೆರಿಕ ಮನೆಯ ಗೃಹ ಪ್ರವೇಶ ಸಮಾರಂಭ ಮಾಡಿದ್ದ ಪ್ರಿಯಾಂಕಾ ಅವರಿಗೆ ಭಾರತೀಯರು ಫಿದಾ ಆಗಿದ್ದರು.

  ಇದೀಗ ಪ್ರಿಯಾಂಕಾ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ, ಅಮೆರಿಕಾದಲ್ಲಿ ಭಾರತದ ರೆಸ್ಟೋರೆಂಟ್ ತೆರೆದಿದ್ದಾರೆ. ಹೌದು, ನ್ಯೂ ಯಾರ್ಕ್ ನಲ್ಲಿ ಪ್ರಿಯಾಂಕಾ ದಂಪತಿ ಭಾರತದ ಶೈಲಿಯ ಆಹಾರ ಪದ್ದತಿಯ ರೆಸ್ಟೋರೆಂಟ್ ಪ್ರಾರಂಭಿಸಿದ್ದಾರೆ.

  ವಿಚಿತ್ರ ಬಟ್ಟೆ ಧರಿಸಿ ಟ್ರೋಲ್ ಆದ ಪ್ರಿಯಾಂಕಾ ಚೋಪ್ರಾ; ನೆಟ್ಟಿಗರಿಗೆ ನಟಿ ಹೇಳಿದ್ದೇನು?

  ರೆಸ್ಟೋರೆಂಟ್ ಗೆ ಸೋನಾ ಎಂದು ಹೆಸರಿಟ್ಟಿದ್ದಾರೆ. ಇತ್ತೀಚಿಗಷ್ಟೆ ಸೋನಾ ರೆಸ್ಟೋರೆಂಟ್ ನ ಉದ್ಘಾಟನೆ ಮಾಡಿದ್ದು, ಹಿಂದೂ ಸಂಪ್ರದಾಯದ ಪ್ರಕಾರ ಪೂಜೆ ಮಾಡಿ ಪ್ರಾರಂಭಿಸಿದ್ದಾರೆ. ಅಮೆರಿಕದ ಸೊಸೆಯಾದರೂ ಹಿಂದೂ ಸಂಪ್ರದಾಯ ಮರೆಯದ ಪ್ರಿಯಾಂಕಾಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ರೆಸ್ಟೋರೆಂಟ್ ಪೂಜೆಯ ಫೋಟೋಗಳನ್ನು ಶೇರ್ ಮಾಡಿ, 'ಸೋನಾ ರೆಸ್ಟೋರಂಟ್ ಬಗ್ಗೆ ರೋಮಾಂಚನಗೊಂಡಿದ್ದೇನೆ. ನ್ಯೂ ಯಾರ್ಕ್ ನಲ್ಲಿ ಭಾರತೀಯ ಅಹಾರ ಪದ್ದತಿಯ ರೆಸ್ಟೋರೆಂಟ್ ಓಪನ್ ಮಾಡಿರುವುದು ತುಂಬಾ ಹೆಮ್ಮೆಯಾಗುತ್ತಿದೆ. ಸೋನಾ ನನ್ನ ಕನಸು. ರೆಸ್ಟೋರೆಂಟ್ ಕಿಚನ್ ಪ್ರಮುಖ ಬಾಣಸಿಗ ಹರಿನಾಯಕ್ ಎನ್ನುವವರು ನೋಡಿಕೊಳ್ಳುತ್ತಿದ್ದಾರೆ. ಅತ್ಯಂತ ರುಚಿಕರವಾದ ಮತ್ತು ನವೀನ ಮೆನುವನ್ನು ರಚಿಸಲಾಗಿದೆ' ಎಂದು ಬರೆದುಕೊಂಡಿದ್ದಾರೆ.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada

  ಇತ್ತೀಚಿಗಷ್ಟೆ ಪ್ರಿಯಾಂಕಾ ದಂಪತಿ ಅಮೆರಿಕದಲ್ಲಿ ಹೊಸ ಮನೆಯ ಗೃಹಪ್ರವೇಶದ ಫೋಟೋಗಳು ವೈರಲ್ ಆಗಿತ್ತು. ಅಮೆರಿಕದಲ್ಲಿಕೊಂಡು ಭಾರತದ ಸಂಸ್ಕೃತಿ ಮರೆಯದ ಪ್ರಿಯಾಂಕಾ ಗುಣಕ್ಕೆ ಅಭಿಮಾನಿಗಳು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

  English summary
  Priyanka Chopra and Nick Jonas launches new indian restaurant in new york.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X