For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ-ನಿಕ್ ಮದುವೆ: ವಿಶೇಷ ಕಾರ್ಯಕ್ರಮಗಳ ದಿನ ಮತ್ತು ಸ್ಥಳ ನಿಗದಿ

  |

  ಬಾಲಿವುಡ್ ನಲ್ಲಿ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಮದುವೆ ಸಂಭ್ರಮವೇ ಇನ್ನು ಮುಗಿದಿಲ್ಲ. ಇಟಲಿಯಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆ ಮುಗಿಸಿರುವ ದೀಪ್-ವೀರ್ ಜೋಡಿ ನವೆಂಬರ್ 29 ರಂದು ಮುಂಬೈನಲ್ಲಿ ಎರಡನೇ ಆರತಕ್ಷತೆ ಮಾಡಿಕೊಳ್ಳುತ್ತಿದೆ.

  ಈ ಸಂಭ್ರಮ ಹಿಂದೆಯೇ ಇನ್ನೊಂದು ಜೋಡಿಯ ಮದುವೆ ಸಮಾರಂಭಕ್ಕೆ ಬಾಲಿವುಡ್ ಸಿದ್ಧವಾಗ್ತಿದೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಜೋಡಿಯ ವಿವಾಹ ಮಹೋತ್ಸವದ ದಿನಾಂಕ ನಿಗದಿಯಾಗಿದ್ದು, ಮದುವೆ ಸಂಪ್ರದಾಯ ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ದಿನಾಂಕ ಮತ್ತು ಸ್ಥಳವನ್ನ ಫಿಕ್ಸ್ ಮಾಡಲಾಗಿದೆ.

  ಪ್ರಿಯಾಂಕಾ-ನಿಕ್ ಮದುವೆ ದಿನಾಂಕ ನಿಗದಿ ಆಯ್ತು: ವಿವಾಹ ಎಲ್ಲಿ, ಯಾವಾಗ.?

  ಕಳೆದ ಅಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪಿಗ್ಗಿ ಮತ್ತು ನಿಕ್ ಜೋಡಿ ಈಗ ಸಪ್ತಪದಿ ತುಳಿಯಲು ಸಜ್ಜಾಗಿದೆ. ಸದ್ಯಕ್ಕೆ ಅಧಿಕೃತವಾಗಿ ಮದುವೆ ದಿನಾಂಕ ಬಹಿರಂಗಪಡಿಸಿದೇ ಹೋದರು, ಮೂಲಗಳ ಮಾಹಿತಿ ಪ್ರಕಾರ, ಮ್ಯಾರೇಜ್ ದಿನಾಂಕ ಪ್ರಕಟವಾಗಿದೆ. ಪ್ರಿಯಾಂಕಾ-ನಿಕ್ ಜೋಡಿಯ ವಿವಾಹ ಪೂರ್ವ ಕಾರ್ಯಕ್ರಮಗಳು ಏನಿರಲಿವೆ.? ಮುಂದೆ ಓದಿ...

  ಮೆಹಂದಿ-ಸಂಗೀತ್ ಕಾರ್ಯಕ್ರಮ

  ಮೆಹಂದಿ-ಸಂಗೀತ್ ಕಾರ್ಯಕ್ರಮ

  ಮದುವೆ ಮುಂಚೆ ಸಂಪ್ರದಾಯವಾಗಿ ನಡೆಯುವ ಮೊದಲ ಕಾರ್ಯಕ್ರಮ ಮೆಹಂದಿ ಮತ್ತು ಸಂಗೀತ್. ನವೆಂಬರ್ 29 ರಂದು ಪ್ರಿಯಾಂಕಾ ಮತ್ತು ನಿಕ್ ಕುಟುಂಬದ ಸದಸ್ಯರು ಮೆಹಂದಿ ಮತ್ತು ಸಂಗೀತಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ಕಾರ್ಯಕ್ರಮ ಮೆಹ್ರಾನ್ಗಡ್ ಕೋಟೆಯಲ್ಲಿ ನಡೆಯಲಿದೆ. ಅದೇ ದಿನ ಮುಂಬೈನಲ್ಲಿ ದೀಪ್ವೀರ್ ಜೋಡಿಯ ಆರತಕ್ಷತೆ ನಡೆಯಲಿದೆ.

  ಹವಾಯಿ ದ್ವೀಪದಲ್ಲಿ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಮದುವೆ.?

  ಕಾಕ್ ಟೈಲ್ ಪಾರ್ಟಿ

  ಕಾಕ್ ಟೈಲ್ ಪಾರ್ಟಿ

  ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮದ ನಂತರ ಜೋದ್ ಫುರ್ ನಲ್ಲಿ ಕಾಕ್ ಟೈಲ್ ಪಾರ್ಟಿ ಆಯೋಜನೆಯಾಗಿದೆ. ನವೆಂಬರ್ 30 ರಂದು ನಡೆಯುವ ಈ ಪಾರ್ಟಿಯಲ್ಲಿ ಪ್ರಿಯಾಂಕಾ ಮತ್ತು ನಿಕ್ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಭಾಗವಹಿಸಲಿದ್ದಾರೆ.

  ಫೋಟೋ ಆಲ್ಬಂ: ಗಾಯಕ ನಿಕ್ ಜೊನಾಸ್ ಜೊತೆಗೆ ಪ್ರಿಯಾಂಕಾ ನಿಶ್ಚಿತಾರ್ಥ

  ಅರಿಶಿಣ ಕಾರ್ಯಕ್ರಮ

  ಅರಿಶಿಣ ಕಾರ್ಯಕ್ರಮ

  ಮೆಹಂದಿ, ಸಂಗೀತ್ ಮತ್ತು ಕಾಕ್ ಟೈಲ್ ಪಾರ್ಟಿ ಬಳಿಕ ಮದುವೆ ಶಾಸ್ತ್ರ ಬಹುಮುಖ್ಯ ಕಾರ್ಯಕ್ರಮ ಅರಿಶಿಣ. ಡಿಸೆಂಬರ್ 1 ರಂದು ಈ ಕಾರ್ಯಕ್ರಮ ನಡೆಯಲಿದೆ.

  ಡಿಸೆಂಬರ್ 2ಕ್ಕೆ ವಿವಾಹ

  ಡಿಸೆಂಬರ್ 2ಕ್ಕೆ ವಿವಾಹ

  ಡಿಸೆಂಬರ್ 1 ರಂದು ಅರಿಶಿಣ ಕಾರ್ಯಕ್ರಮ ಮುಗಿದ ಬಳಿಕ, ಶಾಸ್ತ್ರೋಕ್ತವಾಗಿ ಹಾರಗಳನ್ನ ಬದಲಿಸಿಕೊಳ್ಳುವ ಪ್ರಿಯಾಂಕಾ ಮತ್ತು ನಿಕ್, ಡಿಸೆಂಬರ್ 2 ರಂದು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆಯಾಗಲಿದ್ದಾರೆ.

  'ಬ್ರೈಡಲ್ ಶವರ್'ನಲ್ಲಿ ಕುಣಿದು ಕುಪ್ಪಳಿಸಿದ ಮದುಮಗಳು ಪ್ರಿಯಾಂಕಾ ಛೋಪ್ರಾ

  ಅಂತಾರಾಷ್ಟ್ರೀಯ ವಿನ್ಯಾಸಕರು

  ಅಂತಾರಾಷ್ಟ್ರೀಯ ವಿನ್ಯಾಸಕರು

  ಸದ್ಯದ ಮಾಹಿತಿ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರ ಜೀವನದ ಬಹು ಮುಖ್ಯ ದಿನಕ್ಕಾಗಿ, ಅಂತಾರಾಷ್ಟ್ರೀಯ ವಿನ್ಯಾಸಕರು ಆಗಮಿಸಲಿದ್ದಾರಂತೆ. ಪ್ರಿಯಾಂಕಾ ಅವರ ಮದುವೆ ಕಾಸ್ಟ್ಯೂಮ್ ಕೋಟ್ಯಾಂತರ ರೂಪಾಯಿ ಮೌಲ್ಯದಲ್ಲಿ ಸಿದ್ಧ ಮಾಡಲಾಗಿದೆಯಂತೆ.

  ಬ್ರೈಡಲ್ ಶವರ್: ಪ್ರಿಯಾಂಕಾ ಛೋಪ್ರಾ ತೊಟ್ಟಿದ್ದ ಆಭರಣಗಳ ಬೆಲೆ ಎಷ್ಟು ಗೊತ್ತಾ.?

  English summary
  Bollywood actress Priyanka chopra and nick jonas Wedding: From Sangeet To Shaadi, Here Are The Dates Of All The Wedding Ceremonies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X