»   » ಆಸ್ಕರ್ ಗೆ 'ನ್ಯೂಟನ್' ಎಂಟ್ರಿ: ಮುನಿಸಿಕೊಂಡ ಪ್ರಿಯಾಂಕಾ ಚೋಪ್ರಾ.!

ಆಸ್ಕರ್ ಗೆ 'ನ್ಯೂಟನ್' ಎಂಟ್ರಿ: ಮುನಿಸಿಕೊಂಡ ಪ್ರಿಯಾಂಕಾ ಚೋಪ್ರಾ.!

Posted By:
Subscribe to Filmibeat Kannada

2018ನೇ ಸಾಲಿನ 90ನೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾರತದಿಂದ 'ನ್ಯೂಟನ್' ಚಿತ್ರ ಅಧಿಕೃತವಾಗಿ ಆಯ್ಕೆಯಾಗಿದೆ. ಇದರಿಂದ ಬಾಲಿವುಡ್ ಇಂಡಸ್ಟ್ರಿಗೆ ಫುಲ್ ಖುಷಿಯಾಗಿದೆ. ಆದ್ರೆ, ನಟಿ ಪ್ರಿಯಾಂಕಾ ಚೋಪ್ರಾ 'ನ್ಯೂಟನ್' ಚಿತ್ರವನ್ನ ಆಯ್ಕೆ ಮಾಡಿದ್ದಕ್ಕೆ ಮುನಿಸಿಕೊಂಡಿದ್ದಾರೆ.

ಮತ್ತೊಂದೆಡೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಕೂಡ ಆಸ್ಕರ್ ಆಯ್ಕೆ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಈಗ, ಕ್ವಾಂಟಿಕೋ ಸುಂದರಿ ಕೂಡ ಆಸ್ಕರ್ ಆಯ್ಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ, ಪ್ರಿಯಾಂಕಾ ಚೋಪ್ರಾ ಬೇಸರವಾಘಿರುವುದೇಕೆ? 'ನ್ಯೂಟನ್' ಚಿತ್ರದ ಮೇಲೆ ಪಿಗ್ಗಿಗೆ ಯಾಕೆ ಕೋಪ? ಮುಂದೆ ಓದಿ.....

ಪ್ರಿಯಾಂಕಾ ಚಿತ್ರವನ್ನ ಕಡೆಗಣಿಸಿರುವುದಕ್ಕೆ ಬೇಸರ

'ನ್ಯೂಟನ್ 'ಚಿತ್ರದ ಆಯ್ಕೆ ಮಾಡಿರುವ ಭಾರತೀಯ ಆಸ್ಕರ್ ಆಯ್ಕೆ ಸಮಿತಿ ಪ್ರಿಯಾಂಕಾ ಚೋಪ್ರಾ ನಿರ್ಮಾಣದ ಚಿತ್ರವನ್ನ ಕಡೆಗಣಿಸಿದೆ ಎಂಬ ಕಾರಣಕ್ಕೆ ಪ್ರಿಯಾಂಕಾ ಮುನಿಸಿಕೊಂಡಿದ್ದಾರೆ.

ಆಸ್ಕರ್ ಗೆ ಆಯ್ಕೆಯಾದ 'ನ್ಯೂಟನ್' ಚಿತ್ರದಲ್ಲಿ ಅಂತಹದ್ದೇನಿದೆ?

ಪ್ರಿಯಾಂಕಾ ನಿರ್ಮಾಣದ ಚಿತ್ರ ಯಾವುದು?

ಪ್ರಿಯಾಂಕಾ ಚೋಪ್ರಾ 'ವೆಂಟಿಲೇಟರ್‌' ಎಂಬ ಮರಾಠಿ ಚಿತ್ರವನ್ನ ನಿರ್ಮಾಣ ಮಾಡಿದ್ದರು. ಇದು ಬಾಕ್ಸ್‌ ಆಫೀಸ್‌ನಲ್ಲಿ ಸಕ್ಸಸ್ ಆಗುವುದರ ಜತೆಗೆ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಚಿತ್ರ 2018ರ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾಗಬಹುದು ಎನ್ನುವ ನಿರೀಕ್ಷೆ ಪ್ರಿಯಾಂಕಾ ಚೋಪ್ರಾಗಿತ್ತು.

ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತ್ತು

ಪ್ರಿಯಾಂಕಾ ಚೋಪ್ರಾ ನಿರ್ಮಾಣದ 'ವೆಂಟಿಲೇಟರ್‌' ಸಿನಿಮಾ ಅತ್ಯುತ್ತಮ ನಿರ್ದೇಶನ, ಸಂಕಲನ, ಮತ್ತು ಸೌಂಡ್ ಮಿಕ್ಸಿಂಗ್ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿತ್ತು. ಇದರ ಜೊತೆ ಪುಣೆ ಅಂತಾರಾಷ್ಟ್ರೀಯ ಚಿತ್ರೋತ್ಸವ, ದಾದಾ ಸಾಹೇಬ್ ಪಾಲ್ಕೆ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನ ಪಡೆದುಕೊಂಡಿತ್ತು.

'ಬಾಹುಬಲಿ-2' ಆಯ್ಕೆ ಆಗಬೇಕಿತ್ತಂತ್ತೆ

ಇನ್ನು ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಮೆಗಾಮೂವಿ ಬಾಹುಬಲಿ 2 ಚಿತ್ರವೂ ಆಸ್ಕರ್ ಗೆ ಆಯ್ಕೆಯಾಗಬಹುದು ಎಂಬ ನಿರೀಕ್ಷೆ ಹೆಚ್ಚಾಗಿತ್ತು. ಆದ್ರೆ, ಈ ಎಲ್ಲಾ ನಿರೀಕ್ಷೆ, ಕುತೂಹಲಗಳಿಗೆ ಬ್ರೇಕ್ ಹಾಕಿದ ಆಯ್ಕೆ ಸಮಿತಿ 'ನ್ಯೂಟನ್' ಎಂಬ ಚಿತ್ರವನ್ನ ಆಸ್ಕರ್ ರೇಸ್ ಗೆ ಕಳುಹಿಸಿದೆ.

ಆಸ್ಕರ್ ಗೆ 'ಬಾಹುಬಲಿ' ಆಯ್ಕೆಯಾಗದ ಬಗ್ಗೆ ರಾಜಮೌಳಿ ಹೇಳಿದ್ದೇ ಬೇರೆ.!

English summary
Priyanka Chopra disappointed with Newton's entry to Oscars. becuse of Priyanka Chopra's Marathi production Ventilator failed to make it to Oscars.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada