ಮಾಜಿ ವಿಶ್ವಸುಂದರಿ, ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಅವರಿಗೆ ಬೆರಲಿ ವಿಶ್ವವಿದ್ಯಾಲಯ (Bareilly university) ಗೌರವ ಡಾಕ್ಟರೇಟ್ ನೀಡಿ ಗೌರವಿಸಲು ಆಹ್ವಾನಿಸಿತ್ತು. ಆದ್ರೆ, ಪ್ರಿಯಾಂಕಾ ಚೋಪ್ರಾ ಬೆರಲಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಡಾಕ್ಟರೇಟ್ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಲಿಲ್ಲ.
ತಮ್ಮ ಸಾಧನೆಯನ್ನ ಗುರುತಿಸಿ ಗೌರವ ಡಾಕ್ಟರೇಟ್ ನೀಡುತ್ತಿರುವುದನ್ನ ಖುಷಿಯಿಂದ ಸಂಭ್ರಮಿಸಿದ್ದ ಪ್ರಿಯಾಂಕಾ, ಅಂತಿಮ ಕ್ಷಣದಲ್ಲಿ ಸಮಾರಂಭದಲ್ಲಿ ಭಾಗಿಯಾಗಲು ಆಗಲಿಲ್ಲ. ಈ ಬಗ್ಗೆ ಪ್ರಿಯಾಂಕಾ ಟ್ವೀಟ್ ಮಾಡಿದ್ದು, ಯಾಕೆ ಸಮಾರಂಭಕ್ಕೆ ಹೋಗಲು ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೇ, ಈ ಕಾರ್ಯಕ್ರಮವನ್ನ ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರವ್ಯಕ್ತಪಡಿಸಿದ್ದಾರೆ.
5ನೇ ಬಾರಿ 'ಸೆಕ್ಸಿಯೆಸ್ಟ್ ಏಷ್ಯನ್ ವುಮನ್' ಪಟ್ಟ ಗಿಟ್ಟಿಸಿಕೊಂಡ ಪ್ರಿಯಾಂಕಾ
ದೆಹಲಿ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆಯಿಂದ ವಿಮಾನ ಪ್ರಯಾಣ ಆರಂಭಿಸಲಿಲ್ಲವಂತೆ. ಬೆಳಿಗ್ಗೆಯಿಂದ ಸುಮಾರು ಗಂಟೆಗಳ ಕಾಲ ಕಾಯಬೇಕಾಯಿತ್ತಂತೆ. ಇದರಿಂದ ತಮ್ಮ ಜೀವನದ ಅತ್ಯಾಮೂಲ್ಯ ಕ್ಷಣವನ್ನ ಪ್ರಿಯಾಂಕಾ ಮಿಸ್ ಮಾಡಿಕೊಂಡರು ಎಂದು ಟ್ವೀಟ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರ ನ್ಯೂಯಾರ್ಕ್ ಮನೆ ಹೇಗಿದೆ ನೋಡಿ?
ಪ್ರಿಯಾಂಕ ಅವರ ತಂಡ ಕೂಡ ಸಾಕಷ್ಟು ಪ್ರಯತ್ನ ಪಟ್ಟರು, ಬೇರೆ ಯಾವ ಅನುಕೂಲವೂ ಆಗಲಿಲ್ಲ. ಮೊದಲೇ ಯೋಚನೆ ಮಾಡಿದ್ದ ಎಲ್ಲ ಪ್ಲಾನ್ ಗಳು ಇದರಿಂದ ನಾಶವಾಯಿತು ಎಂದು ಹತಾಶೆಯನ್ನ ಟ್ವೀಟ್ ಮೂಲಕ ವ್ಯಕ್ತಪಡಿಸಿದ್ದಾರೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.