»   » ಪ್ಲಾಸ್ಟಿಕ್ ಸರ್ಜರಿ ಫಜೀತಿ: ಪ್ರಿಯಾಂಕ ಮೂಗಿನ ಬಗ್ಗೆ ಟ್ರೋಲ್!

ಪ್ಲಾಸ್ಟಿಕ್ ಸರ್ಜರಿ ಫಜೀತಿ: ಪ್ರಿಯಾಂಕ ಮೂಗಿನ ಬಗ್ಗೆ ಟ್ರೋಲ್!

Posted By:
Subscribe to Filmibeat Kannada

ಬಿ ಟೌನ್ ಹಾಟ್ ಬ್ಯೂಟಿ ಪ್ರಿಯಾಂಕ ಚೋಪ್ರಾ ತಮ್ಮ ಸಂಪಿಗೆ ತರಹದ ಮೂಗಿನ ಬಗ್ಗೆ ಸುದ್ದಿಯಾಗುವುದು ಹೊಸದೇನಲ್ಲ. ಯಾಕಂದ್ರೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅವರು ಫೋಟೋ ಅಪ್‌ಲೋಡ್ ಮಾಡಿದ ನಂತರ ಮೂಗಿನ ಬಗ್ಗೆ ಟ್ರೋಲ್ ಆಗುತ್ತಲೇ ಇರುತ್ತದೆ.

ಅಂದಹಾಗೆ ಪಿಗ್ಗಿ ತಮ್ಮ ಹಾಲಿವುಡ್ ಚೊಚ್ಚಲ ಚಿತ್ರ 'ಬೇವಾಚ್' ಪ್ರಮೋಷನ್ ಮುಗಿಸಿ ಮೊನ್ನೆಯಷ್ಟೇ ತಾಯ್ನಾಡಿಗೆ ವಾಪಸ್ಸ್ ಆಗುವ ವೇಳೆ ಇನ್‌ಸ್ಟಗ್ರಾಂನಲ್ಲಿ ಪ್ರೊಫೈಲ್ ಪಿಕ್ ಒಂದನ್ನು ಹಾಕಿದ್ದರು. ಆ ಫೋಟೋಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಶುರುವಾಗಿದೆ. ಹಲವರು ಆ ಫೋಟೋವನ್ನು ಹೇಟ್ ಮಾಡಿ, ಕಾಮೆಂಟ್ ಮಾಡಿದ್ದಾರೆ.

ಪ್ರಿಯಾಂಕ ಪೋಸ್ಟ್ ಮಾಡಿದ ಸೆಲ್ಫಿ

ಪ್ರಿಯಾಂಕ ಚೋಪ್ರಾ, "ಮನೆಗೆ ಹಿಂದಿರುಗುವ ವೇಳೆಗೆ ಈ ಸೂಪರ್ ಮತ್ತು ಕುತೂಹಲಕಾರಿ ಸೆಲ್ಫಿ ಓಕೆ ನಾ? #mumbaikar" ಎಂದು ಕ್ಯಾಪ್ಸನ್ ಕೊಟ್ಟು ಈ ಮೇಲಿನ ಸೆಲ್ಫಿ ಪೋಸ್ಟ್ ಮಾಡಿದ್ದರು.

ಪ್ರಿಯಾಂಕ ಮೂಗಿನ ಬಗ್ಗೆ ನೆಗೆಟಿವ್ ಕಾಮೆಂಟ್ಸ್

ಪಿಗ್ಗಿಯ ಆ ಸೆಲ್ಫಿಗೆ ಹಲವರು 'tedhii' ಎಂದು ಕರೆದು ಹಲವು ರೀತಿಯ ನೆಗೆಟಿವ್ ಕಾಮೆಂಟ್ಸ್ ಮಾಡಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ಭಯಾನಕವಾಗಿ ಕಾಣುತ್ತಿದ್ದೀರಿ. ಸರ್ಜನ್ ಮೀಟ್ ಮಾಡಿ ಮತ್ತೊಮ್ಮೆ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳಿ ಎಂದಿದ್ದಾರೆ.

ಟ್ರೋಲ್ ಮಾಡಿದವರಿಗೆ ಪಿಗ್ಗಿ ಉತ್ತರ

ಇನ್‌ಸ್ಟಗ್ರಾಂನಲ್ಲಿ ಟ್ರೋಲ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಪಿಗ್ಗಿ "ಪ್ರತಿಯೊಂದು ವಿಷಯವನ್ನು ನಾವು ಅತಿಯಾಗಿ ವರ್ಣಿಸಬಹುದಾದ ಪ್ರಪಂಚದಲ್ಲಿ ಇದ್ದೇವೆ ಎಂಬ ಫೀಲ್ ನನಗೆ ಈಗ ಆಗುತ್ತಿದೆ. ಹಲವರು ಇತರರ ಒಪಿನಿಯನ್ ಪಡೆಯುವುದಕ್ಕೇ ಹೆದರುತ್ತಾರೆ" ಎಂದು ಟಾಂಗ್ ಕೊಟ್ಟಿದ್ದಾರೆ.

ಪ್ರಿಯಾಂಕ ಟ್ರೋಲ್ ಗೆ ಹೆದರುವವರಲ್ಲ

"ಇಂಟರ್ನೆಟ್ ನಲ್ಲಿ ಪ್ರತಿಯೊಬ್ಬರು ತಮ್ಮ ಅಭಿಪ್ರಾಯ ತಿಳಿಸುವ ಸ್ವತಂತ್ರವಿದೆ. ಟ್ರೋಲ್ ಮಾಡುವುದೇ ಒಂದು ಇಂಟರ್‌ ನ್ಯಾಷನಲ್ ನ್ಯೂಸ್ ಆಗುತ್ತದೆ. ಅಲ್ಲದೇ ಅದಕ್ಕೆ ಒಂದು ಕಾರಣವು ಇರುತ್ತದೆ. ಸೋ ಐ ಡೋಂಟ್ ಕೇರ್. ನನ್ನನ್ನು ಪ್ರೀತಿಸುವ, ಗೌರವಿಸುವ ಜನರಿದ್ದಾರೆ. ಅವರ ಬಗ್ಗೆ ಮಾತ್ರ ನಾನು ಗಮನಹರಿಸುತ್ತೇನೆ" ಎಂದು ಪಿಗ್ಗಿ ಹೇಳಿದ್ದಾರೆ.

English summary
Priyanka Chopra has trolled for her nose job, when she posted her selfie on instagram before heading to Mumbai recently.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada