For Quick Alerts
  ALLOW NOTIFICATIONS  
  For Daily Alerts

  ಆ ಜಾಹೀರಾತುಗಳಲ್ಲಿ ನಟಿಸಿದ್ದಕ್ಕೆ ಈಗಲೂ ಪಶ್ಚಾತ್ತಾಪ ಪಡುತ್ತಿರುವ ಪ್ರಿಯಾಂಕಾ ಚೋಪ್ರಾ

  |

  ಬಹುತೇಕ ಎಲ್ಲಾ ಸ್ಟಾರ್ ನಟರಿಗೂ ತಾವು ನಟಿಸಿದ ಅತ್ಯುತ್ತಮ ಪಾತ್ರದ ಬಗ್ಗೆ ಎಷ್ಟು ಹೆಮ್ಮೆ ಇರುತ್ತದೆಯೋ, ಕೆಲವು ಪಾತ್ರ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಕ್ಕೆ ಅಷ್ಟೆ ಪಶ್ಚಾತ್ತಾಪವೂ ಇರುತ್ತದೆ. ಹಲವಾರು ನಟ-ನಟಿಯರು ಈ ಬಗ್ಗೆ ಮಾತನಾಡಿದ್ದಾರೆ.

  ಕೇವಲ ಹಣಕ್ಕಾಗಿ ಸಿನಿಮಾಗಳಲ್ಲಿ ನಟಿಸಿದ್ದಾಗಿ ಹಲವು ನಟ-ನಟಿಯರು ಒಪ್ಪಿಕೊಂಡಿದ್ದಾರೆ. ಅದರಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಒಬ್ಬರು. ತಾವು ನಟಿಸಿದ ಕೆಲವು ಜಾಹೀರಾತುಗಳ ಬಗ್ಗೆ ನಟಿ ಪ್ರಿಯಾಂಕಾ ಚೋಪ್ರಾ ಗೆ ತೀವ್ರ ಪಶ್ಚಾತ್ತಾಪವಿದೆಯಂತೆ.

  ನಟಿಯರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಸೌಂದರ್ಯವರ್ಧಕ ಉತ್ಪನ್ನಗಳ ಜಾಹೀರಾತುಗಳಲ್ಲಿ ನಟಿಯರದ್ದೇ ಪಾರುಪತ್ಯ. ನಟಿ ಪ್ರಿಯಾಂಕಾ ಚೋಪ್ರಾ ಸಹ ಸೌಂದರ್ಯ ವರ್ಧಕ ಜಾಹೀರಾತುಗಳಲ್ಲಿ ನಟಿಸಿದ್ದರು. ಆದರೆ ಆ ಜಾಹೀರಾತುಗಳಲ್ಲಿ ತಾವು ನಟಿಸಬಾರದಿತ್ತು ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

  ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ನಟಿಸಿ ತಪ್ಪು ಮಾಡಿದೆ: ಪ್ರಿಯಾಂಕಾ

  ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ನಟಿಸಿ ತಪ್ಪು ಮಾಡಿದೆ: ಪ್ರಿಯಾಂಕಾ

  ಈ ಬಗ್ಗೆ ಹಾಲಿವುಡ್ ಮ್ಯಾಗಜಿನ್ 'ಮೇರಿ ಕ್ಲೈರಿ' ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, 'ನಾನು ಸೌಂದರ್ಯವರ್ಧಕ ಜಾಹೀರಾತಿನಲ್ಲಿ ನಟಿಸಬಾರದಿತ್ತು. ದಕ್ಷಿಣ ಏಷ್ಯಾದಲ್ಲಿ ಸೌಂದರ್ಯ ವರ್ಧಕ ಜಾಹೀರಾತು ಈಗಲೂ ಸಾಮಾನ್ಯ ವಿಷಯ' ಎಂದಿದ್ದಾರೆ.

  ಹಲವು ನಟಿಯರು ಈಗಲೂ ನಟಿಸುತ್ತಾರೆ: ಪ್ರಿಯಾಂಕಾ

  ಹಲವು ನಟಿಯರು ಈಗಲೂ ನಟಿಸುತ್ತಾರೆ: ಪ್ರಿಯಾಂಕಾ

  'ತ್ವಚೆ ಬೆಳ್ಳಗೆ ಮಾಡುವ ಉತ್ಪನ್ನಗಳ ಮಾರಾಟ, ಪ್ರಚಾರ ದಕ್ಷಿಣ ಏಷ್ಯಾದಲ್ಲಿ ಬಹಳ ಸಾಮಾನ್ಯವಾದ ವಿಷಯ. ಸೌಂದರ್ಯವರ್ಧಕಕಗಳ ಉದ್ಯಮಗಳು ಕೋಟ್ಯಂತರ ಮೌಲ್ಯವನ್ನು ಅಲ್ಲಿ ಹೊಂದಿವೆ. ನಟಿಯರಿಗೆ ಸೌಂದರ್ಯವರ್ಧಕ ಜಾಹೀರಾತಿನಲ್ಲಿ ನಟಿಸುವುದು ವೃತ್ತಿಯ ಭಾಗ ಅಥವಾ ಪ್ರಮೋಶನ್‌ ಇದ್ದಂತೆ, ಆದರೆ ಅದು ಒಳ್ಳೆಯದಲ್ಲ' ಎಂದಿದ್ದಾರೆ ನಟಿ ಪ್ರಿಯಾಂಕ.

  ನನ್ನನ್ನು ತಮಾಷೆಗೆ 'ಕಾಲಿ' ಎಂದು ಕರೆಯುತ್ತಿದ್ದರು: ಪ್ರಿಯಾಂಕಾ

  ನನ್ನನ್ನು ತಮಾಷೆಗೆ 'ಕಾಲಿ' ಎಂದು ಕರೆಯುತ್ತಿದ್ದರು: ಪ್ರಿಯಾಂಕಾ

  'ನಾನು ಸಹ ಫೇರ್‌ನೆಸ್ ಕ್ರೀಂ ಬಳಸುತ್ತಿದ್ದೆ. ಕಪ್ಪು ಬಣ್ಣದ ಮುಖ ಸುಂದರವಲ್ಲ ಎಂದೇ ನಾನು ನಂಬಿದ್ದೆ. ನನ್ನ ಕುಟುಂಬದ ಹಲವರು ಬೆಳ್ಳಗೆ ಇದ್ದರೆ, ನಾನು ಕಪ್ಪಗಿದ್ದೆ. ನನ್ನ ಕುಟುಂಬದವರು ಸಹ ತಮಾಷೆಗೆ ನನ್ನನ್ನು ಕಾಲಿ ಎಂದು ಕರೆಯುತ್ತಿದ್ದರು, ಆದರೆ ನಂತರ ನನಗೆ ಅರ್ಥವಾಯಿತು. ಬಣ್ಣ ಸೌಂದರ್ಯದ ಮಾಪನವಲ್ಲವೆಂದು, ಹಾಗಾಗಿ ನಾನು ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ನಟಿಸುವುದು ನಿಲ್ಲಿಸಿದೆ' ಎಂದಿದ್ದಾರೆ ಪ್ರಿಯಾಂಕಾ.

  ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada
  ಹಲವು ನಟಿಯರು ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ನಟಿಸುವುದಿಲ್ಲ

  ಹಲವು ನಟಿಯರು ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ನಟಿಸುವುದಿಲ್ಲ

  ನಟಿ ಪ್ರಿಯಾಂಕಾ ಚೋಪ್ರಾ ಮಾತ್ರವೇ ಅಲ್ಲದೆ ಭಾರತದ ಹಲವರು ನಟಿಯರು ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ನಟಿಸುವುದು ನಿಲ್ಲಿಸಿದ್ದಾರೆ. ತಾಪ್ಸಿ ಪನ್ನು, ತಮನ್ನಾ ಭಾಟಿಯಾ, ದೀಪಿಕಾ ಪಡುಕೋಣೆ, ಸಾಯಿ ಪಲ್ಲವಿ ಇನ್ನೂ ಹಲವರು ನಟಿಯರು ಸೌಂದರ್ಯವರ್ಧಕ ಜಾಹೀರಾತುಗಳಲ್ಲಿ ನಟಿಸುವುದಿಲ್ಲವೆಂದು ಪ್ರಕಟಿಸಿದ್ದಾರೆ.

  English summary
  Priyanka Chopra regrets for acting in beauty related products advertisements.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X