For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಚಿತ್ರ ಯಾವಾಗ?

  |

  ನಿಕ್ ಜೊನಾಸ್ ಜೊತೆ ವಿವಾಹ ಆದ್ಮೇಲೆ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಬಹಳ ಕಡಿಮೆ ಆಗಿದೆ. ಅಲ್ಲೊಂದು ಇಲ್ಲೊಂದು ಹಿಂದಿ ಚಿತ್ರದಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ.

  ಇದೀಗ, ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿನ ಹಿಂದಿ ಸಿನಿಮಾ ಯಾವಾಗ ಎಂದು ಬಹಿರಂಗಪಡಿಸಿದ್ದಾರೆ. #Ask me Anything ಎಂಬ ಟ್ವಿಟ್ಟರ್ ಅಭಿಯಾನಕ್ಕೆ ಕರೆ ನೀಡಿದ್ದ ಪ್ರಿಯಾಂಕಾಗೆ ಅಭಿಮಾನಿಯೊಬ್ಬ ''ನಿಮ್ಮ ಮುಂದಿನ ಬಾಲಿವುಡ್ ಸಿನಿಮಾ ಯಾವಾಗ?'' ಎಂದು ಪ್ರಶ್ನಿಸಿದ್ದಾರೆ.

  'ನಿಮ್ಮ ಮದುವೆಗೆ ಯಾಕೆ ಕರೆದಿಲ್ಲ' ಎಂದ ಅಭಿಮಾನಿಗೆ ಪ್ರಿಯಾಂಕಾ ಚೋಪ್ರಾ ಸಖತ್ ಪ್ರತಿಕ್ರಿಯೆ'ನಿಮ್ಮ ಮದುವೆಗೆ ಯಾಕೆ ಕರೆದಿಲ್ಲ' ಎಂದ ಅಭಿಮಾನಿಗೆ ಪ್ರಿಯಾಂಕಾ ಚೋಪ್ರಾ ಸಖತ್ ಪ್ರತಿಕ್ರಿಯೆ

  ಅಭಿಮಾನಿಯ ಈ ಪ್ರಶ್ನೆಗೆ ಉತ್ತರಿಸಿರುವ ಪ್ರಿಯಾಂಕಾ ''ಮುಂದಿನ ವರ್ಷ'' ಎಂದಿದ್ದಾರೆ.

  ಅಂದ್ಹಾಗೆ, ಪ್ರಿಯಾಂಕಾ ಚೋಪ್ರಾ ಕೊನೆಯದಾಗಿ 2019ರಲ್ಲಿ ಬಿಡುಗಡೆಯಾದ 'ದಿ ಸ್ಕೈ ಈಸ್ ಪಿಂಕ್' ಚಿತ್ರದಲ್ಲಿ ನಟಿಸಿದ್ದರು. ಫರಾನ್ ಖಾನ್, ಜೈರಾ ವಾಸೀಮ್ ಜೊತೆ ಪ್ರಿಯಾಂಕಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸೋನಾಲಿ ಬೋಸ್ ನಿರ್ದೇಶಿಸಿದ್ದರು.

  ಪ್ರಿಯಾಂಕಾ ಚೋಪ್ರಾ ಸದ್ಯ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಮೂಡಿಬರಲಿರುವ 'ಸಿಟಾಡೆಲ್' ಕಾರ್ಯಕ್ರಮದಲ್ಲಿ ಬ್ಯುಸಿಯಿದ್ದಾರೆ. ಈ ಕಾರ್ಯಕ್ರಮದಲ್ಲಿ ರಿಚರ್ಡ್ ಮ್ಯಾಡಿನ್ ನಟಿಸುತ್ತಿದ್ದಾರೆ. ರಿಚರ್ಡ್ ಜೊತೆ ಪ್ರಿಯಾಂಕಾ ಅಭಿನಯಿಸಿದ್ದಾರೆ.

  ಪುನೀತ್ ದರ್ಶನ್ಗೆ ಎಚ್ಚರಿಕೆ ನೀಡಿದ್ರು ಸಚಿವ ಡಿ ಸುಧಾಕರ್ | Filmibeat Kannada

  ಇದರ ಜೊತೆ 'ಟೆಕ್ಸ್ಟ್ ಫಾರ್ ಯೂ' ಹಾಗೂ 'ಮ್ಯಾಟ್ರಿಕ್ಸ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 2018ರ ಡಿಸೆಂಬರ್ 1 ರಂದು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಮದುವೆ ನೆರವೇರಿತ್ತು.

  English summary
  Priyanka Chopra revealed about her next bollywood movie in ''Ask Me Anything'' session on twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X