»   » ಶಾರುಖ್ ಹೆಸರು ಕೇಳಿದರೆ ಪ್ರಿಯಾಂಕಾಗೆ ಭಾರೀ ನಡುಕ

ಶಾರುಖ್ ಹೆಸರು ಕೇಳಿದರೆ ಪ್ರಿಯಾಂಕಾಗೆ ಭಾರೀ ನಡುಕ

Posted By:
Subscribe to Filmibeat Kannada

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಕೊನೆಗೂ ಬಾಯಿ ಬಿಟ್ಟಿದ್ದಾರೆ. ತಮ್ಮ ಹಾಗೂ ಶಾರುಖ್ ನಡುವಿನ ಸಂಬಂಧದ ಬಗ್ಗೆ ಇಡೀ ಜಗತ್ತೇ ಮಾತನಾಡುತ್ತಿದ್ದರೂ ಪ್ರಿಯಾಂಕಾ ಚಕಾರವೆತ್ತಿರಲಿಲ್ಲ. ಮಾಧ್ಯಮದ ಮುಂದೆ ಈ ಕುರಿತು ಸಾಕಷ್ಟು ಬಾರಿ ಪ್ರಶ್ನೆ ಎದುರಾಗಿದ್ದರೂ ಪ್ರಿಯಾಂಕಾ ಅದಕ್ಕೆ ಉತ್ತರ ನೀಡಲು ನಿರಾಕರಿಸಿ ಸುಮ್ಮನಾಗುತ್ತಿದ್ದರು.

ಆದರೆ ಈಗ ಪ್ರಿಯಾಂಕಾ ಬಾಯಿಮುಚ್ಚಿಕೊಂಡಿರಲು ಸಾಧ್ಯವಿಲ್ಲದ ಹಂತ ತಲುಪಿದ್ದಾರೆ. ಎಲ್ಲಾ ಕಡೆ ಅದೇ ಸುದ್ದಿ ಕೇಳಿ ಕೇಳಿ ಬೇಸತ್ತಿರುವ ನಟಿ, ಇನ್ನು ಸುಮ್ಮನಿದ್ದದ್ದು ಸಾಕು ಎಂದು ನಿರ್ಧರಿಸಿದಂತಿದೆ. ಇತ್ತೀಚಿಗೆ ನಡೆದ 'ಫಿಲಂ ಫೇರ್' ಸಮಾರಂಬದಲ್ಲೂ ತೂರಿಬಂದ ಪ್ರಶ್ನೆಗೆ ಪ್ರಿಯಾಂಕಾ ಸರಿಯಾಗಿ ಉತ್ತರಿಸಿದ್ದಾರೆ.

ಯಾವಾಗ ಫಿಲಂ ಪೇರ್ ನಿರೂಪಕಿ ಈ ಬಗ್ಗೆ ಕೇಳಿದರೋ, ಆಗ ಪ್ರಿಯಾಂಕಾ, "ನಾನು ಶಾರುಖ್ ಬಗ್ಗೆ ಏನನ್ನೂ ಹೇಳುವುದಿಲ್ಲ. ನಾನು ಅವರನ್ನು ನನ್ನ ರೋಲ್ ಮಾಡೆಲ್ ಎಂದು ಗೌರವಿಸುತ್ತೇನೆ. ಅವರನ್ನು ಅನುಸರಿಸುತ್ತೇನೆ ಜೊತೆಗೆ ಅವರ ಬಗ್ಗೆ ನನಗೆ ತುಂಬಾ ಗೌರವವಿದೆ. ಆದರೆ ಇನ್ಮುಂದೆ ನಾನು ಶಾರುಖ್ ಬಗ್ಗೆ ಏನನ್ನೂ ಹೇಳುವುದೇ ಇಲ್ಲ" ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಕೆಲವರ ಪ್ರಕಾರ ಪ್ರಿಯಾಂಕಾ ಗೌರಿ ಖಾನ್ ಬಿಸಿಗೆ ಹೆದರಿದ್ದಾರೆ. ಇನ್ನೂ ಕೆಲವರ ಪ್ರಕಾರ, ಪ್ರಿಯಾಂಕಾ ಎಲ್ಲವನ್ನೂ ಕದ್ದುಮುಚ್ಚಿ ಮುಂದುವರಿಸಿದ್ದಾರೆ. ಅದೇನೇ ಇರಲಿ, ಶಾರುಖ್ ಮತ್ತು ಪ್ರಿಯಾಂಕಾ ಇಬ್ಬರೂ ಈ ಮೊದಲಿನಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಸಾಕಷ್ಟು ಕಡಿಮೆಯಾಗಿದೆ. ಗೌರಿ ಖಾನ್ ನೆಮ್ಮದಿ ಹೆಚ್ಚಾಗಿದೆ.

ಪ್ರಿಯಾಂಕಾರ ಈ ಉತ್ತರದಿಂದ ಒಂದು ಮಾತಂತೂ ಸ್ಪಷ್ಟವಾದಂತಾಯ್ತು. ಶಾರುಖ್ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದನ್ನು ಪ್ರಿಯಾಂಕಾ ಚೋಪ್ರಾ ಇಷ್ಟಪಡುವುದಿಲ್ಲ. ಜೊತೆಗೆ ಆಕೆಗೆ ಶಾರುಖ್ ಬಗ್ಗೆ ತೀರಾ ಗೌರವವಿದೆ. ಆದರೆ ಅದನ್ನು ಇನ್ನು ಮುಂದೆ ಸಾರ್ವಜನಿಕ ಪ್ರದರ್ಶನಕ್ಕೆ ಇಡುವುದಿಲ್ಲ. ಅಷ್ಟೇ ಅಲ್ಲ, ಯಾರೂ ಅವರನ್ನು ಶಾರುಖ್ ಬಗ್ಗೆ ಕೇಳುವ ಅಗತ್ಯವೂ ಇಲ್ಲ ಎಂಬುದು ಸ್ಪಷ್ಟವಾದಂತಾಗಿದೆ. (ಏಜೆನ್ಸೀಸ್)

English summary
Priyanka Chopra scared of taking Shahrukh Khan's name as she was having alleged affair with the actor.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada