For Quick Alerts
  ALLOW NOTIFICATIONS  
  For Daily Alerts

  ಮುಂಬೈ ಲೋಕಲ್ ಟ್ರೇನಿನಲ್ಲಿ ಶಾಹಿದ್-ಪ್ರಿಯಾಂಕಾ

  |

  ಪ್ರಿಯಾಂಕಾ ಚೋಪ್ರಾ ಹಾಗೂ ಶಾಹಿದ್ ಕಪೂರ್ ನಟಿ ವಿದ್ಯಾ ಬಾಲನ್ ಅವರ ದಾರಿಯನ್ನು ಅನುಸರಿಸುತ್ತಿದ್ದಾರೆ ಎನ್ನಬಹುದು. ಈ ಜೋಡಿ ತಮ್ಮ ಬರಲಿರುವ 'ತೇರಿ ಮೇರಿ ಕಹಾನಿ' ಚಿತ್ರದ ಪ್ರಚಾರಕ್ಕೆ ಲೋಕಲ್ ಟ್ರೇನುಗಳಲ್ಲಿ ಸಂಚರಿಸುತ್ತಿದ್ದಾರೆ. ಇದೇ ರೀತಿಯಲ್ಲಿ ತಮ್ಮ 'ಕಹಾನಿ' ಚಿತ್ರದ ಪ್ರಚಾರವನ್ನು ವಿದ್ಯಾ ಬಾಲನ್ ಮಾಡಿದ್ದರು.

  ಈ ಹಿಂದೆಯೇ ವಿದ್ಯಾ ಬಾಲನ್, ಇವರಿಬ್ಬರಿಗಿಂತಲೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದರು. ಅವರು ಕೇವಲ ಲೋಕಲ್ ಟ್ರೇನುಗಳಲ್ಲಿ ಮಾತ್ರವಲ್ಲದೇ ಮುಂಬೈನ ಬಸ್ಸುಗಳಲ್ಲಿ ಕೂಡ ಓಡಾಡಿದ್ದರು. ಆದರೆ ಶಾಹಿದ್-ಪ್ರಿಯಾಂಕ ಕೇವಲ ಟ್ರೇನ್ ಮಾತ್ರ ಹತ್ತಿಳಿದಿದ್ದಾರೆ. ಬಸ್ ಹತ್ತಲು ಇನ್ನೂ ಮನಸ್ಸು ಮಾಡಿಲ್ಲ, ಮುಂದಕ್ಕೇನೋ!

  ತೇರಿ ಮೇರಿ ಕಹಾನಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪ್ರಿಯಾಂಕ ಹಾಗೂ ಶಾಹಿದ್ ಇಬ್ಬರಿಗೂ ಈ ಚಿತ್ರ ತುಂಬಾ ಇಷ್ಟವಾಗಿದೆ. ಅಷ್ಟೇ ಅಲ್ಲ, ಈ ಚಿತ್ರದ ಯಶಸ್ಸು ಇಬ್ಬರ ವೃತ್ತಿಜೀವನಕ್ಕೂ ಹೊಸ ತಿರುವು ತರುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಇಬ್ಬರೂ ತಮ್ಮ ಶಕ್ತಿ ಮೀರಿ ಪ್ರಚಾರಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ.

  ಪ್ರಿಯಾಂಕ ಚೋಪ್ರಾ ಬಹಳಷ್ಟು ಬುದ್ಧಿವಂತೆ ಎನ್ನಲಾಗುತ್ತಿದೆ. ಯಾವುದೇ ಕಾರಣವಿಲ್ಲದೇ ಈ ಪ್ರಿಯಾಂಕಾ ಏನನ್ನೂ ಮಾಡುವುದಿಲ್ಲ. ಚಿತ್ರದ ಯಶಸ್ಸಿನ ಮೇಲೆಯೇ ಮುಂದಿನ ಚಿತ್ರಗಳ ಸಂಭಾವನೆ ಹೆಚ್ಚಳ ನಿರ್ಧಾರವಾಗುವುದರಿಂದ ಅವರಿಗೀಗ ಅರ್ಜೆಂಟ್ ಸಕ್ಸಸ್ ಬೇಕಾಗಿದೆ ಎಂಬುದು ಬಾಲಿವುಡ್ ಪಂಡಿತರ ಮಾತು.

  ಪ್ರಚಾರ ಕಾರ್ಯದ ನಿಮಿತ್ತ ಪ್ರಿಯಾಂಕಾ, ಶಾಹಿದ್ ಹಾಗೂ ನಿರ್ದೇಶಕ ಕುನಾಲ್ ಕೊಹ್ಲಿ ಈ ಮೂವರೂ ಮುಂಬೈ ಲೋಕಲ್ ಟ್ರೇನುಗಳಲ್ಲಿ ಮರಿನ್ ಲೈನ್ಸ್ ಹಾಗೂ ಚರ್ಚ್ ಗೇಟ್ ಮಧ್ಯೆ ಸಂಚರಿಸಿದ್ದಾರೆ. ಚಿತ್ರದ ಬಿಡುಗಡೆ ಇದೇ ತಿಂಗಳು 22 ಕ್ಕೆ (ಜೂನ್ 22, 2012) ನಿಗದಿಯಾಗಿದೆ. ಚಿತ್ರದ ಬಗ್ಗೆ ಚಿತ್ರತಂಡ ಹಾಗೂ ಬಾಲಿವುಡ್ ಪ್ರೇಕ್ಷಕರಿಗೆ ಭಾರೀ ನಿರೀಕ್ಷೆಯಿದೆ. (ಏಜೆನ್ಸೀಸ್)

  English summary
  Priyanka Chopra and Shahid Kapoor Spotted Mumbai Local Train for their upcoming movie Teri Meri Kahaani. Director Kunal Kohli also spotted there. A few months back, Vidya Balan too did a similar thing to promote her film Kahaani. Vidya had gone in a bus also. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X