»   » ಪಿಟಿ ಉ‍ಷಾ ಜೀವನಚರಿತ್ರೆಯ ಚಿತ್ರದಲ್ಲಿ ನಟಿಸಲಿದ್ದಾರೆ ಪ್ರಿಯಾಂಕಾ ಚೋಪ್ರಾ!

ಪಿಟಿ ಉ‍ಷಾ ಜೀವನಚರಿತ್ರೆಯ ಚಿತ್ರದಲ್ಲಿ ನಟಿಸಲಿದ್ದಾರೆ ಪ್ರಿಯಾಂಕಾ ಚೋಪ್ರಾ!

Posted By:
Subscribe to Filmibeat Kannada

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಬಯೋಪಿಕ್ ಸಿನಿಮಾ ಬಾಲಿವುಡ್ ನಲ್ಲಿ ಬರಲಿದೆ ಎಂಬ ಸುದ್ದಿ ಇತ್ತೀಚಿಗಷ್ಟೆ ಹೇಳಿ ಬಂದಿತ್ತು. ಅದರ ಹಿಂದೆಯೇ ಈಗ ಮತ್ತೊಬ್ಬ ಭಾರತದ ಹೆಮ್ಮೆಯ ಕ್ರೀಡಾಪಟು ಓಟಗಾರ್ತಿ ಪಿಟಿ ಉ‍ಷಾ ಅವರ ಸಿನಿಮಾ ಕೂಡ ತೆರೆಗೆ ಬರುವುದಕ್ಕೆ ಸಜ್ಜಾಗಿದೆ.

ವಾವ್! ಪ್ರಿಯಾಂಕಾ ಚೋಪ್ರಾ ಅವರ ಈ ಡೆಡಿಕೇಶನ್ ಗೆ ಮೆಚ್ಚಲೇಬೇಕು.!

ಈ ಹಿಂದೆ ಮೇರಿ ಕೋಮ್ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕಾ ಚೋಪ್ರಾ ಈಗ ಪಿಟಿ ಉ‍ಷಾ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಮಲೆಯಾಳಂ ನಿರ್ದೇಶಕಿ ರೇವತಿ ವರ್ಮ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಬರೋಬ್ಬರಿ 100 ಕೋಟಿ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಪಿಟಿ ಉ‍ಷಾ ಬಾಲ್ಯ ಜೀವನದಿಂದ ಹಿಡಿದು ಕ್ರೀಡಾ ಸಾಧನೆಯವರೆಗೆ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುವುದಂತೆ.

Priyanka Chopra to act in PT Usha biopic

ಸದ್ಯ ಹಾಲಿವುಡ್ ನಲ್ಲಿ ಸಖತ್ ಬ್ಯುಸಿ ಇರುವ ಪ್ರಿಯಾಂಕಾ ಅಲ್ಲಿನ ಕೆಲಸಗಳನ್ನು ಮುಗಿಸಿಕೊಂಡು ಈ ಚಿತ್ರಕ್ಕೆ ಚಾಲನೆ ನೀಡಲಿದ್ದಾರಂತೆ. ಪಿಟಿ ಉ‍ಷಾ ಅವರ ಯಶಸ್ಸಿನ ಹಿಂದಿನ ನೋವನ್ನು ಈ ಚಿತ್ರ ಬಿಚ್ಚಿಡಲಿದೆಯಂತೆ. ಹಿಂದಿ, ಮಲೆಯಾಳಂ, ಇಂಗ್ಲೀಷ್, ಚೈನೀಸ್ ಹಾಗೂ ರಷ್ಯನ್ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಎ.ಆರ್.ರೆಹಮಾನ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರಂತೆ.

English summary
P.T Usha remarkable journey will soon be adapted for big screen. and Priyanka Chopra to play lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X