»   » ಕಾಲು ಆಯ್ತು.. ಈಗ ಎಲ್ಲರ ಕಣ್ಣು ಪ್ರಿಯಾಂಕಾ ಚೋಪ್ರಾ ತುಟಿ ಮೇಲೆ ಬಿತ್ತು..

ಕಾಲು ಆಯ್ತು.. ಈಗ ಎಲ್ಲರ ಕಣ್ಣು ಪ್ರಿಯಾಂಕಾ ಚೋಪ್ರಾ ತುಟಿ ಮೇಲೆ ಬಿತ್ತು..

Posted By:
Subscribe to Filmibeat Kannada

ಪ್ರಿಯಾಂಕಾ ಚೋಪ್ರಾ ಕಾಲಿನ ಬಗ್ಗೆ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗಳು ಹೆಚ್ಚಾಗಿತ್ತು. ಇದೀಗ ಪ್ರಿಯಾಂಕಾ ಅವರ ತುಟಿಯ ಬಗ್ಗೆ ಟ್ರೋಲ್ ಗಳು ಶುರುವಾಗಿದೆ. ಪಿಗ್ಗಿ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ ಹಾಕಿದ ಫೋಟೋವೊಂದು ಈಗ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿದೆ.

ತುಟಿಗೆ ಕೆಂಪು ಬಣ್ಣದ ಲಿಪ್ ಸ್ಟಿಕ್, ಕಣ್ಣಿಗೆ ಚೆಂದದ ಗ್ಲಾಸ್, ಹಾಕಿರುವ ಫೋಟೋ ತೆಗೆದು ಪ್ರಿಯಾಂಕಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದರು. ಪ್ರಿಯಾಂಕಾ ಅವರ ಈ ಫೋಟೋ ನೋಡಿದ್ದೇ ತಡ ಸಾಕಷ್ಟು ಮಂದಿ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದರು. 'ಪ್ಲಾಸ್ಟಿಕ್ ಬ್ಯೂಟಿ', 'ಮೀನಿನ ತುಟಿ' ಅಂತ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Priyanka Chopra Trolled For her Selfie

ಇನ್ನೂ ಕೆಲವರಂತೂ ಬಾಯಿಗೆ ಬಂದ ಹಾಗೆ ಕಾಮೆಂಟ್ ಮಾಡಿದ್ದಾರೆ. ಆದರೆ ಈ ಟ್ರೋಲ್ ಗಳು ಪ್ರಿಯಾಂಕಾ ಅವರಿಗೆ ಹಳೆ ವಿಷಯ. ಹಾಲಿವುಡ್, ಬಾಲಿವುಡ್, ಅಂತ ಫುಲ್ ಬಿಜಿ ಇರುವ ಪ್ರಿಯಾಂಕಾ ಚೋಪ್ರಾಗೆ ಟ್ರೋಲ್ ಗಳಿಗೆ ಗಮನ ಕೊಡುವುದಕ್ಕೆ ಟೈಂ ಎಲ್ಲಿದೆ ಹೇಳಿ.?!

English summary
Bollywood Actress 'Priyanka Chopra' Trolled For her Selfie which she posted in instagram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada