For Quick Alerts
  ALLOW NOTIFICATIONS  
  For Daily Alerts

  'ಕುಟುಂಬ ವಿಸ್ತರಣೆ'ಯ ಬಯಕೆ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

  |

  ತನಗಿಂತಲೂ ಕಿರಿಯನನ್ನು ಪ್ರೀತಿಸಿ ಮದುವೆಯಾದ ನಟಿ ಪ್ರಿಯಾಂಕಾ ಚೋಪ್ರಾ ಲವ್ ಸ್ಟೋರಿ ಕುತೂಹಲ ಕೆರಳಿಸಿತ್ತು. ಹಾಲಿವುಡ್-ಬಾಲಿವುಡ್ ನಡುವೆ ಅಡ್ಡಾಡುತ್ತಿರುವ ಪ್ರಿಯಾಂಕಾಳ ಈ ಹೊಸ ಬದುಕು ಹೆಚ್ಚು ಕಾಲ ಉಳಿಯುವುದಿಲ್ಲ ಎಂದೇ ಹೇಳಲಾಗುತ್ತಿತ್ತು.

  ಒಂದಷ್ಟು ಕಾಲ ರೊಮ್ಯಾನ್ಸ್, ಸುತ್ತಾಟದ ಬಳಿಕ ಈ ಪ್ರಣಯಪಕ್ಷಿಗಳು ಜೋಧಪುರದಲ್ಲಿ ನಡೆದಿದ್ದ ಅದ್ಧೂರಿ ಸಮಾರಂಭದಲ್ಲಿ ಮದುವೆಯಾಗಿದ್ದರು. ಪ್ರಿಯಾಂಕಾ ಆಗಾಗ್ಗೆ ಅಭಿಮಾನಿಗಳ ಜತೆಗೆ ತಮ್ಮ ಹಾಗೂ ನಿಕ್ ಜೋನಾಸ್ ಪ್ರೇಮ ಪಯಣದ ಚಿತ್ರಗಳು, ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದರು. ಅನೇಕ ಸಂದರ್ಶನಗಳಲ್ಲಿ ಪ್ರಿಯಾಂಕಾರಿಗೆ 'ಕುಟುಂಬ ವಿಸ್ತರಣೆ'ಯ ಕುರಿತಾದ ಪ್ರಶ್ನೆಗಳು ಎದುರಾಗುತ್ತಿತ್ತು. ಹಾಗೆಯೇ ಅವರು ಗರ್ಭಿಣಿಯಾಗಿದ್ದಾರೆ ಎಂಬ ಗಾಳಿಸುದ್ದಿ ಅನೇಕ ಬಾರಿ ಹರಿದಾಡಿತ್ತು.

  ಸೇಫ್ ಹ್ಯಾಂಡ್ಸ್ ಚಾಲೆಂಜ್‌ಗೆ ದೀಪಿಕಾ, ಪ್ರಿಯಾಂಕಾ ನಾಮಿನೇಟ್ ಮಾಡಿದ WHOಸೇಫ್ ಹ್ಯಾಂಡ್ಸ್ ಚಾಲೆಂಜ್‌ಗೆ ದೀಪಿಕಾ, ಪ್ರಿಯಾಂಕಾ ನಾಮಿನೇಟ್ ಮಾಡಿದ WHO

  ಬ್ರಿಟಿಷ್ ಮ್ಯಾಗಜಿನ್‌ಗೆ ಸಂದರ್ಶನ

  ಬ್ರಿಟಿಷ್ ಮ್ಯಾಗಜಿನ್‌ಗೆ ಸಂದರ್ಶನ

  ಇತ್ತೀಚೆಗೆ ಬ್ರಿಟಿಷ್ ನಿಯತಕಾಲಿಕೆ 'ಟಾಟ್ಲರ್'ಗೆ ನೀಡಿರುವ ಸಂದರ್ಶನದಲ್ಲಿ ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಾಸ್ ಜತೆಗೆ ಸಾಂಸಾರಿಕ ಬದುಕು ಆರಂಭಿಸಲು ಯೋಜನೆ ರೂಪಿಸಿರುವುದಾಗಿ ಹೇಳಿಕೊಂಡಿದ್ದಾರೆ.

  ದೇವರು ಬಯಸಿದಾಗ ಆಗುತ್ತದೆ

  ದೇವರು ಬಯಸಿದಾಗ ಆಗುತ್ತದೆ

  'ನನ್ನದೇ ಕುಟುಂಬವನ್ನು ಹೊಂದುವುದು ನನಗೆ ಬಹಳ ಮುಖ್ಯ. ಅದು ಯಾವಾಗಲೂ ಕೂಡ ಇತ್ತು. ನಾನು ಖಂಡಿತವಾಗಿಯೂ ಮಾಡಲು ಬಯಸಿರುವ ಕೆಲಸ ಇದು. ಅದಕ್ಕೆ ದೇವರು ಯಾವಾಗ ಬಯಸುತ್ತಾನೋ, ಸೂಕ್ತ ಸಮಯದಲ್ಲಿ, ಸಕಾಲಿಕ ಸಂದರ್ಭದಲ್ಲಿ ಅದು ನಡೆಯುತ್ತದೆ' ಎಂದು ಹೇಳಿದ್ದಾರೆ.

  ಸ್ವಯಂ ದಿಗ್ಬಂಧನದಲ್ಲಿ ಪ್ರಿಯಾಂಕಾ

  ಪ್ರಸ್ತುತ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಇಬ್ಬರೂ ಲಾಸ್ ಏಂಜಲಿಸ್‌ನಲ್ಲಿ ಸ್ವಯಂ ದಿಗ್ಬಂಧನದಲ್ಲಿದ್ದಾರೆ. ಕೊರೊನಾ ವೈರಸ್ ಪಿಡುಗಿನ ಕುರಿತು ಇಬ್ಬರೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸುವ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

  ಕೊರೊನಾ ವೈರಸ್ ಬಗ್ಗೆ ಜಾಗೃತಿ

  WHO ಅಧಿಕಾರಿಗಳ ಜತೆಗೆ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಸೆಷನ್ಸ್‌ನಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ, ಕೋವಿಡ್ 19 ಕುರಿತಾದ ಸತ್ಯಾಸತ್ಯತೆಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವ ಜವಾಬ್ದಾರಿ ಪಡೆದುಕೊಂಡಿದ್ದಾರೆ.

  English summary
  Actress Priyanka Chopra expressed her wish to starting a family with husband Nick Jonas in the right time.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X