For Quick Alerts
  ALLOW NOTIFICATIONS  
  For Daily Alerts

  'ಸುಶಾಂತ್ ಸಿಂಗ್ ಸಾವಿಗೆ ನಿಮ್ಮವಂತವರೇ ಕಾರಣ': ಮೋದಿ ಚಿತ್ರದ ನಿರ್ಮಾಪಕನಿಗೆ ಬೆದರಿಕೆ

  |

  ಪಿಎಂ ನರೇಂದ್ರ ಮೋದಿ ಬಯೋಪಿಕ್ ನಿರ್ಮಿಸಿದ್ದ ಸಹ ನಿರ್ಮಾಪಕ ಅಮಿತ್ ಬಿ ವಾಧ್ವಾನಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆಯ ಸಂದೇಶಗಳು ಬರುತ್ತಿವೆ ಎಂದು ಮುಂಬೈ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  'Optimistix Optimistix' ಎಂಬ ಹೆಸರಿನ ಫೇಸ್‌ ಬುಕ್ ಖಾತೆಯಿಂದ ಮೋದಿ ಬಯೋಪಿಕ್ ಸಿನಿಮಾ ರಿ ರಿಲೀಸ್ ಮಾಡುತ್ತಿರುವ ಕುರಿತು ಬೆದರಿಕೆ ಹಾಕಿದೆ ಎಂದು ವಾಧ್ವಾನಿ ದೂರಿನಲ್ಲಿ ತಿಳಿಸಿದ್ದಾರೆ.

  ಮತ್ತೆ ಥಿಯೇಟರ್ ಅಂಗಳಕ್ಕೆ ಮೋದಿ ಬಯೋಪಿಕ್ ಸಿನಿಮಾ

  ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲಿ ವಾಧ್ವಾನಿ ಕೈವಾಡವಿದೆ, ಸುಶಾಂತ್ ಸಿಂಗ್ ಸಾವಿಗೆ ನಿಮ್ಮವಂತವರೇ ಕಾರಣ ಹಾಗೂ ನಿನ್ನ ಮಗಳನ್ನು ಅತ್ಯಾಚಾರ ಮಾಡುತ್ತೇವೆ ಎಂಬ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರ ಬಳಿ ಹೇಳಿದ್ದಾರೆ.

  ಈ ಕುರಿತು ಮುಂಬೈ ಮಿರರ್ ಜೊತೆ ಮಾತನಾಡಿರುವ ನಿರ್ಮಾಪಕ "ನನಗೆ ಮಗಳು ಇಲ್ಲ. ಆದರೂ ಭಯಾನಕ ಸಂಗತಿಯೆಂದರೆ, ಅವರು ನನ್ನ ಮತ್ತು ನನ್ನ ಎರಡು ವರ್ಷದ ಮಗನ ಚಿತ್ರವನ್ನು ಕಾಮೆಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಚ್ಚರಿ ಅಂದ್ರೆ ಆ ಫೋಟೋವನ್ನು ನಾನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿಲ್ಲ'' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

  ನಿರ್ಮಾಪಕ ವಾಧ್ವಾನಿ ಅವರ ದೂರಿನ ಹಿನ್ನೆಲೆ ಆ ಖಾತೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

  ಸರ್ಜಾ ಕುಟುಂಬಕ್ಕೆ ನಾಳೆ ಮಹತ್ವದ ದಿನ | Chiranjeevi Sarja Family | Filmibeat Kannada

  ಇತ್ತೀಚಿಗಷ್ಟೆ ಮೋದಿ ಬಯೋಪಿಕ್ ಚಿತ್ರಕ್ಕೆ ಕಥೆ ಮಾಡಿರುವ ನಿರ್ಮಾಪಕ-ಬರಹಗಾರ ಸಂದೀಪ್ ಸಿಂಘ್, ಸುಶಾಂತ್ ಸಾವಿನ ವಿಚಾರದಲ್ಲಿ ತಮ್ಮ ಹೆಸರುಗಳನ್ನು ಎಳೆದು ತಂದಿರುವ ಸುದ್ದಿ ಸಂಸ್ಥೆಗಳ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

  English summary
  Producer Amit B Wadhwani Receives Threats On Social Media. He Files Complaint Chembur police station.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X