For Quick Alerts
  ALLOW NOTIFICATIONS  
  For Daily Alerts

  ಭಾರತದ ಲಾಭದಾಯಕ ಚಿತ್ರರಂಗ ಯಾವುದೆಂದು ತಿಳಿಸಿದ ಕರಣ್ ಜೋಹರ್

  |

  'ಕುಚ್‌ ಕುಚ್ ಹೋತಾ ಹೈ', 'ಕಭಿ ಖುಷಿ ಕಭಿ ಗಮ್' ಇನ್ನೂ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಿರುವ ಕರಣ್ ಜೋಹರ್, ಎಷ್ಟೊಳ್ಳೆ ನಿರ್ದೇಶಕರೋ ಅಷ್ಟೆ ಒಳ್ಳೆಯ ನಿರ್ಮಾಪಕರು ಸಹ.

  ಬಾಲಿವುಡ್‌ನ ದೈತ್ಯ ನಿರ್ಮಾಣ ಸಂಸ್ಥೆ ಧರ್ಮಾ ಪ್ರೊಡಕ್ಷನ್‌ನ ಮಾಲೀಕರಾಗಿರುವ ಕರಣ್ ಜೋಹರ್ ಹಲವು ಭಾಷೆಗಳಲ್ಲಿ ಸಿನಿಮಾ ನಿರ್ಮಾಣ, ವಿತರಣೆಗಳನ್ನು ಮಾಡುತ್ತಾ ಬಂದಿದ್ದಾರೆ.

  ಸಿನಿಮಾ ನಿರ್ದೇಶನ, ನಿರ್ಮಾಣ ನಟನೆಯ ಜೊತೆಗೆ ತಮ್ಮ ಟಾಕ್‌ ಶೋ, ಫ್ಯಾಷನ್ ಸೆನ್ಸ್, ಹಾಸ್ಯ ಮತ್ತು ಡೋಂಟ್ ಕೇರ್ ಮಾತುಗಳಿಂದಾಗಿಯೂ ಕರಣ್ ಜೋಹರ್ ಬಹಳ ಖ್ಯಾತರು. ಇತ್ತೀಚೆಗಿನ ಪಾಡ್‌ಕಾಸ್ಟ್‌ ಒಂದರಲ್ಲಿ ಅವರು ಬಾಲಿವುಡ್‌ನ ಯುವನಟರು, ಭಾರತದ ಲಾಭದಾಯಕ ಚಿತ್ರೋದ್ಯಮ ಇತ್ಯಾದಿಗಳ ಬಗ್ಗೆ ಮಾತನಾಡಿದ್ದಾರೆ.

  ನಟರ ಸಂಭಾವನೆ ಬಗ್ಗೆ ಕರಣ್ ತಕರಾರು

  ನಟರ ಸಂಭಾವನೆ ಬಗ್ಗೆ ಕರಣ್ ತಕರಾರು

  ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿರುವ ನಟ ಕರಣ್ ಜೋಹರ್, ಇತ್ತೀಚಿನ ನಟರಿಗೆ ಆಸೆ ಹೆಚ್ಚು ಎಂದಿದ್ದಾರೆ. ''ಐದು ಕೋಟಿಯ ಓಪನಿಂಗ್ ಸಹ ನೀಡಲಾಗದ ಕೆಲವು ನಟರು 20 ಕೋಟಿ ಸಂಭಾವನೆ ಕೇಳುತ್ತಾರೆ'' ಎಂದಿರುವ ಕರಣ್ ಜೋಹರ್, ನಾವು ಸ್ಟಾರ್‌ಗಳೆಂಬ ಭ್ರಮೆ ಹಲವರನ್ನು ಕಾಡುತ್ತಿದೆ. ವ್ಯಾಕ್ಸಿನ್ ಇಲ್ಲದ ಕಾಯಿಲೆ ಭ್ರಮೆ ಎಂದಿದ್ದಾರೆ ಕರಣ್ ಜೋಹರ್. ಈ ಮಾತುಗಳನ್ನು ಹೇಳಿದ್ದಕ್ಕೆ ನನ್ನನ್ನು ಕೊಲ್ಲಲೂ ಬಹುದೇನೋ ಎಂದು ಹಾಸ್ಯ ಮಾಡಿದ್ದಾರೆ.

  ಯಾವ ಚಿತ್ರರಂಗ ಲಾಭದಾಯಕ?

  ಯಾವ ಚಿತ್ರರಂಗ ಲಾಭದಾಯಕ?

  ಸಿನಿಮಾ ಬ್ಯುಸಿನೆಸ್‌ ಬಗ್ಗೆಯೂ ಮಾತನಾಡಿರುವ ಕರಣ್ ಜೋಹರ್, ''ನನ್ನ ಹೃದಯ, ಮನಸ್ಸು ಎಲ್ಲವೂ ಹಿಂದಿ ಸಿನಿಮಾಗಳಲ್ಲಿಯೇ ಇದೆ. ಆದರೆ ಒಬ್ಬ ಬ್ಯುಸಿನೆಸ್‌ ಮ್ಯಾನ್ ಆಗಿ ನೋಡುವುದಾದರೆ ಭಾರತದಲ್ಲಿ ಪ್ರಸ್ತುತ ಅತಿ ಹೆಚ್ಚು ಲಾಭದಾಯಕ ಉದ್ಯಮವೆಂದರೆ ಅದು ತೆಲುಗು ಚಿತ್ರರಂಗ'' ಎಂದಿದ್ದಾರೆ ಕರಣ್ ಜೋಹರ್. ಆ ಚಿತ್ರರಂಗದ ಸಣ್ಣ ಸಿನಿಮಾಗಳು ಸಹ ಲಾಭ ಮಾಡುತ್ತಿವೆ ಎಂದಿದ್ದಾರೆ.

  'ಸ್ಟೂಡೆಂಟ್ ಆಫ್‌ ದಿ ಇಯರ್ ಸಿನಿಮಾ ಸೋತಿತ್ತು'

  'ಸ್ಟೂಡೆಂಟ್ ಆಫ್‌ ದಿ ಇಯರ್ ಸಿನಿಮಾ ಸೋತಿತ್ತು'

  ಇನ್ನು ತಮ್ಮ ಐಕಾನಿಕ್ ಸಿನಿಮಾ 'ಸ್ಟೂಡೆಂಟ್ ಆಫ್‌ ದಿ ಇಯರ್' ಬಗ್ಗೆ ಮಾತನಾಡಿರುವ ಕರಣ್ ಜೋಹರ್. ಆ ಸಿನಿಮಾ ಹಿಟ್ ಆದರೂ ಸಹ ನಾನು ಲಾಸ್ ಮಾಡಿಕೊಂಡೆ. ಆಗ ಪ್ರತಿ ದಿನ ರಾತ್ರಿ ನಾನು ನಿದ್ರೆ ಮಾತ್ರೆ ನುಂಗುತ್ತಿದ್ದೆ. ಯಶ್ ಚೋಪ್ರಾ ತಮಗೆ ಹೇಳಿದ್ದ ಮಾತನ್ನು ನೆನಪಿಸಿಕೊಂಡಿರುವ ಕರಣ್, ''ಸಿನಿಮಾಗಳು ಸೋಲುವುದಿಲ್ಲ ಬಜೆಟ್ ಸೋಲುತ್ತದೆ'' ಎಂದಿದ್ದಾರೆ. ಅಂದರೆ ಸಿನಿಮಾಕ್ಕೆ ನಾವು ಹಾಕುವ ಬಂಡವಾಳದ ಪ್ರಮಾಣದ ಮೇಲೆ ಲಾಭ ನಿರ್ಧಾರವಾಗುತ್ತದೆ ಎಂದಿದ್ದಾರೆ.

  ದಕ್ಷಿಣ ಚಿತ್ರರಂಗದವರೊಡನೆ ಕೈ ಜೋಡಿಸಿರುವ ಕರಣ್

  ದಕ್ಷಿಣ ಚಿತ್ರರಂಗದವರೊಡನೆ ಕೈ ಜೋಡಿಸಿರುವ ಕರಣ್

  ಕರಣ್ ಜೋಹರ್ ಪ್ರಸ್ತುತ ದಕ್ಷಿಣ ಭಾರತ ಚಿತ್ರರಂಗದ ಕಡೆಗೆ ಹೆಚ್ಚು ವಾಲಿಕೊಂಡಿದ್ದಾರೆ. ಕೆಜಿಎಫ್, ಬಾಹುಬಲಿ ಸೇರಿದಂತೆ ಹಲವು ದಕ್ಷಿಣದ ಸಿನಿಮಾಗಳನ್ನು ಕರಣ್ ಜೋಹರ್ ಹಿಂದಿಯಲ್ಲಿ ವಿತರಣೆ ಮಾಡಿದ್ದಾರೆ. ನಿರ್ಮಾಣ ಸಹ ಮಾಡುತ್ತಿದ್ದಾರೆ. ಆದರೆ ಕರಣ್ ಈ ಹಿಂದೆ ಸಹ ನಿರ್ಮಾಣ ಮಾಡಿದ್ದ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಅಟ್ಟರ್ ಫ್ಲಾಪ್ ಆಗಿದೆ. ಮುಂದೆ ಕರಣ್ ಜೋಹರ್ ಯಾರ ಸಿನಿಮಾದೊಟ್ಟಿಗೆ ಕೈ ಜೋಡಿಸುತ್ತಾರೆ ನೋಡಬೇಕಿದೆ.

  English summary
  Producer Karan Johar talks about profitable movie industry of India and new heroes remuneraiton.
  Friday, January 6, 2023, 10:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X