For Quick Alerts
  ALLOW NOTIFICATIONS  
  For Daily Alerts

  ಹೈಟೆಕ್ ವೇಶ್ಯಾವಾಟಿಕೆ: ನಟಿ-ಮಾಡೆಲ್ ಬಂಧಿಸಿದ ಕ್ರೈಂ ಪೊಲೀಸರು

  |

  ಅನೈತಿಕ ಕಳ್ಳ ಸಾಗಾಣಿಕೆ ಮತ್ತು ಹೈಟೆಕ್ ವೇಶ್ಯಾವಾಟಿಕೆ ಆರೋಪದಲ್ಲಿ ಬಾಂಬೆ ಮಾಡಲ್ ಕಮ್ ನಟಿಯನ್ನು ಮುಂಬೈ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಮುಂಬೈನ ಜುಹಾದಲ್ಲಿರುವ ತ್ರಿಬಲ್ ಸ್ಟಾರ್ ಹೋಟೆಲ್‌ನಲ್ಲಿ ನಟಿ ತಂಗಿದ್ದರು ಎಂಬ ಖಚಿತ ಮಾಹಿತಿ ಪಡೆದ ಪೊಲೀಸರು ಹೋಟೆಲ್‌ಗೆ ದಾಳಿ ಮಾಡಿ ಬಂಧಿಸಿದ್ದಾರೆ.

  ಈ ನಟಿ ಹಿಂದಿಯ ಖ್ಯಾತ ಜಾಹೀರಾತುಗಳಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ಇದೆ. ಹಲವು ವರ್ಷಗಳಿಂದ ಹಿಂದಿ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದ್ದು, ವೇಶ್ಯಾವಾಟಿಕೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ವರದಿಯಾಗಿದೆ. ಈ ಮೂಲಕ ಮುಂಬೈನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಮುಂಬೈನ ಕ್ರೈಂ ಅಪರಾಧ ವಿಭಾಗದ ಪೊಲೀಸರು ಭೇದಿಸಿದ್ದಾರೆ.

  ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಅಪ್ರಾಪ್ತ ನಟಿಯನ್ನು ರಕ್ಷಿಸಿದ ಪೊಲೀಸರುಹೈಟೆಕ್ ವೇಶ್ಯಾವಾಟಿಕೆಯಲ್ಲಿ ಅಪ್ರಾಪ್ತ ನಟಿಯನ್ನು ರಕ್ಷಿಸಿದ ಪೊಲೀಸರು

  32 ವರ್ಷದ ಈ ನಟಿ ಹಲವು ವರ್ಷಗಳಿಂದ ಈ ದಂಧೆಯಲ್ಲಿ ಕೆಲಸ ಮಾಡ್ತಿದ್ದರು ಎಂದು ಬಯಲಾಗಿದೆ. ಹಲವು ನಟಿಯರು ಹಾಗೂ ಮಾಡೆಲ್‌ಗಳು ಈಕೆಯ ಸಂಪರ್ಕದಲ್ಲಿದ್ದು, ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಉದ್ಯಮಿಗಳಿಗೆ ಸೇವೆ ಕೊಡುತ್ತಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಹೊರಬಿದ್ದಿದೆ. ಮುಂದೆ ಓದಿ...

  ಪ್ಲಾನ್ ಮಾಡಿ ಖೆಡ್ಡಾಗೆ ಬೀಳಿಸಿದ ಪೊಲೀಸರು

  ಪ್ಲಾನ್ ಮಾಡಿ ಖೆಡ್ಡಾಗೆ ಬೀಳಿಸಿದ ಪೊಲೀಸರು

  ಸ್ಟಿಂಗ್ ಆಪರೇಷನ್ ಮಾದರಿಯಲ್ಲಿ ಪೊಲೀಸರು ಯೋಜನೆ ರೂಪಿಸಿ ನಟಿಯನ್ನು ಬಲೆಗೆ ಬೀಳಿಸಿದ್ದಾರೆ. ನಕಲಿ ಗ್ರಾಹಕರ ರೂಪದಲ್ಲಿ ನಟಿಯನ್ನು ಸಂಪರ್ಕಿಸಿ ಮಾಡೆಲ್‌ಗಾಗಿ ಬೇಡಿಕೆಯಿಟ್ಟಿದ್ದಾರೆ. ಪೊಲೀಸರೆಂದು ತಿಳಿಯದ ನಟಿ ನಾಲ್ಕು ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದಾದ ಮೇಲೆ ಇಬ್ಬರು ಮಹಿಳೆಯರೊಂದಿಗೆ ಜುಹಾದ ತ್ರಿ ಸ್ಟಾರ್‌ ಹೋಟೆಲ್‌ಗೆ ಬಂದ ಆಕೆಯನ್ನು ಮುಂಬೈ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  ಅಮೇರಿಕಾ ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಭಾರತೀಯ ನಟಿಯರು.!ಅಮೇರಿಕಾ ವೇಶ್ಯಾವಾಟಿಕೆಯಲ್ಲಿ ಸಿಕ್ಕಿಬಿದ್ದ ಭಾರತೀಯ ನಟಿಯರು.!

  ಮಹಿಳೆಯವರು ರಕ್ಷಣೆ, ಕೇಸ್ ದಾಖಲು

  ಮಹಿಳೆಯವರು ರಕ್ಷಣೆ, ಕೇಸ್ ದಾಖಲು

  ಕೆಲವು ಹೆಣ್ಣು ಮಕ್ಕಳಿಗೂ ಹಣ ಆಮಿಷವೊಡ್ಡಿ ವೇಶ್ಯಾವಾಟಿಕೆ ಜಾಲಕ್ಕೆ ಬಲವಂತವಾಗಿ ತಳ್ಳಿರುವ ಆರೋಪವೂ ಆ ನಟಿಯ ಮೇಲಿದೆ. ಇನ್ನು ನಟಿಯ ಬಂಧನ ಬಳಿಕೆ ಕೆಲವು ಹೆಣ್ಣ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವೇಶ್ಯಾವಾಟಿಕೆ ಮತ್ತು ಅನೈತಿಕ ಕಳ್ಳ ಸಾಗಣೆ ಸೆಕ್ಷನ್ ಅಡಿ ನಟಿಯ ವಿರುದ್ಧ ಹಲವು ಸೆಕ್ಸನ್‌ಗಳ ಮೂಲಕ ಕೇಸ್ ದಾಖಲಾಗಿಸಿದೆ. ಇನ್ನು ಈ ಕೇಸ್ ಸಂಬಂಧ ತನಿಖೆ ಮುಂದುವರಿಸಲು ವಿಶೇಷ ತಂಡ ರಚನೆ ಮಾಡಲಾಗಿದೆ. ರಕ್ಷಿಸಿದ ಮಹಿಳೆಯರನ್ನು ರಿಮಾಂಡ್ ಹೋಮ್‌ಗೆ ಕಳುಹಿಸಲಾಗಿದೆ.

  ಹಲವು ನಟಿಯರು ಬಂಧನಕ್ಕೆ ಒಳಗಾಗಿದ್ದರು

  ಹಲವು ನಟಿಯರು ಬಂಧನಕ್ಕೆ ಒಳಗಾಗಿದ್ದರು

  ವೇಶ್ಯಾವಾಟಿಕೆ ದಂಧೆಯಲ್ಲಿ ಆರೋಪ ಎದುರಿಸಿ ಬಂಧನಕ್ಕೆ ಒಳಗಾದ ನಟಿಯರ ಪಟ್ಟಿ ಇಲ್ಲಿವೆ.

  - 2011 ರಲ್ಲಿ ಹಿಂದಿ ಇಂಡಸ್ಟ್ರಿಯ ನಟಿ ಐಶ್ ಅನ್ಸಾರಿ ವೇಶ್ಯಾವಾಟಿಕೆ ಜಾಲದಲ್ಲಿ ಸಂಬಂಧ ಹೊಂದಿದ್ದರು ಎಂದು ಜೋಧ್‌ಪುರ ಪೊಲೀಸರು ಬಂಧಿಸಿದ್ದರು.

  - ಐಟಂ ಹಾಡುಗಳಲ್ಲಿ ಹೆಜ್ಜೆ ಹಾಕುತ್ತಿದ್ದ ಹಾಗೂ ಬಿ-ಗ್ರೇಡ್ ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ತಮಿಳು ನಟಿ ಭುವನೇಶ್ವರಿ ಚೆನ್ನೈ ಪೊಲೀಸರಿಂದ ಅರೆಸ್ಟ್ ಆಗಿದ್ದರು.

  - ಕಳ್ಳ ಸಾಗಣಿಕೆ ಹಾಗೂ ವೇಶ್ಯಾವಾಟಿಕೆ ಜಾಲದ ಜೊತೆ ನಂಟು ಆರೋಪದಲ್ಲಿ ಆಂಧ್ರಪ್ರದೇಶದಲ್ಲಿ ನಟಿ ನೀತು ಅಗರ್‌ವಾಲ್ ಬಂಧನಕ್ಕೆ ಒಳಗಾಗಿದ್ದರು.

  ಶ್ವೇತಾ ಬಸು ಕೇಸ್ ನೆನಪಿರಬಹುದು

  ಶ್ವೇತಾ ಬಸು ಕೇಸ್ ನೆನಪಿರಬಹುದು

  - ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದ ಶ್ವೇತಾ ಬಸು ಬಂಧನ ಇಡೀ ರಾಷ್ಟ್ರದಲ್ಲಿ ದೊಡ್ಡ ಸುದ್ದಿಯಾಗಿತ್ತು. ಹೈ-ಫೈ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿದ್ದರು ಎಂಬ ಆರೋಪದಲ್ಲಿ ಹೈದರಾಬಾದ್‌ನಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದರು.

  - ರಾಜ್ ಕುಂದ್ರಾ ಪ್ರಕರಣದಲ್ಲಿ ಹೆಚ್ಚು ಸದ್ದು ಮಾಡ್ತಿರುವ ನಟಿ ಶೆರ್ಲಿನ್ ಚೋಪ್ರಾ ಸಹ ವೇಶ್ಯಾವಾಟಿಕೆ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದರು. ಆರ್ಥಿಕ ಸಮಸ್ಯೆಯಿಂದ ಈ ಕೆಲಸ ಮಾಡಿರುವುದಾಗಿ ಒಪ್ಪಿಕೊಂಡಿದ್ದರು ಎಂದು ವರದಿಯಾಗಿದೆ.

  - ತಮಿಳು ನಟಿ ಕ್ಯಾರೋಲಿನ್ ಒಮ್ಮೆ 5 ಸ್ಟಾರ್ ಹೋಟೆಲ್‌ನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಳು. ಈ ವೇಳೆ ಮುಜುಗರದ ಸ್ಥಿತಿಯಲ್ಲಿ ಇದ್ದಳು ಎಂದು ಪೊಲೀಸರು ಹೇಳಿದ್ದರು.

  English summary
  Prostitution Racket Busted: Actress-model arrested by Mumbai Crime Branch says Report.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X