»   » 'ವಿರುಷ್ಕಾ' ಕಿಸ್ಸಿಂಗ್ ಸ್ಟೈಲ್ ಕಾಪಿ ಮಾಡಿ ಟೀಕೆಗೆ ಗುರಿಯಾದ 'ಬಿಗ್ ಬಾಸ್' ಪ್ರೇಮಿಗಳು!

'ವಿರುಷ್ಕಾ' ಕಿಸ್ಸಿಂಗ್ ಸ್ಟೈಲ್ ಕಾಪಿ ಮಾಡಿ ಟೀಕೆಗೆ ಗುರಿಯಾದ 'ಬಿಗ್ ಬಾಸ್' ಪ್ರೇಮಿಗಳು!

Posted By:
Subscribe to Filmibeat Kannada

ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ನಟಿ ಅನುಷ್ಕಾ ಶರ್ಮಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದರು. ಪತಿ ವಿರಾಟ್ ಕೆನ್ನೆಗೆ ಅನುಷ್ಕಾ ಸಿಹಿಮುತ್ತು ನೀಡುತ್ತಿರುವಾಗ, ಕ್ಲಿಕ್ ಆಗಿದ್ದ ಫೋಟೋ ಅದು. ತಮ್ಮ ದಾಂಪತ್ಯದ ಸುಂದರ ಕ್ಷಣವನ್ನ ನಟಿ ಅನುಷ್ಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಈ ಫೋಟೋನ ಲಕ್ಷಾಂತರ ಮಂದಿ ಲೈಕ್ ಮಾಡಿದ್ದರು.

ಈಗ ಈ ಫೋಟೋ ಬಗ್ಗೆ ನಾವು ಮಾತನಾಡಲು ಕಾರಣ 'ಬಿಗ್ ಬಾಸ್ 11' ಕಾರ್ಯಕ್ರಮದ ಪ್ರಣಯ ಪಕ್ಷಿಗಳಾದ ಪುನೀಶ್ ಶರ್ಮಾ ಹಾಗೂ ಬಂದಗಿ ಕಾಲ್ರಾ. 'ಬಿಗ್ ಬಾಸ್' ಮನೆಯೊಳಗೆ ಇರುವಾಗಲೇ, ಈ ಜೋಡಿ ಲವ್ ಮಾಡುತ್ತಿದ್ದರು. 'ಬಿಗ್ ಬಾಸ್' ಮನೆಯೊಳಗೆ ಲಿಪ್ ಲಾಕ್ ಹಾಗೂ ರೋಮ್ಯಾನ್ಸ್ ನಿಂದಲೇ ಈ ಜೋಡಿ ಸುದ್ದಿ ಆಗಿದ್ದರು.

'ಬಿಗ್ ಬಾಸ್' ಮನೆಯಿಂದ ಹೊರಬಂದ್ಮೇಲೂ, ಈ ಜೋಡಿಯ ರೋಮ್ಯಾನ್ಸ್ ಮುಂದುವರೆದಿದೆ. ಅದಕ್ಕೆ ಸಾಕ್ಷಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿರುವ ಈ ಫೋಟೋ....

Puneesh-Bandgi trolled for copying Anushka-Virat kissing picture

ಸೇಮ್ ಟು ಸೇಮ್ ವಿರಾಟ್ ಕೋಹ್ಲಿ-ಅನುಷ್ಕಾ ಸ್ಟೈಲ್ ನಲ್ಲೇ ಪುನೀಶ್ ಹಾಗೂ ಬಂದಗಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ವಿರಾಟ್ ಕೆನ್ನೆಗೆ ಅನುಷ್ಕಾ ಮುತ್ತಿಟ್ಟ ಶೈಲಿಯಲ್ಲೇ ಪುನೀಶ್ ಕೆನ್ನೆಗೆ ಬಂದಗಿ ಕಿಸ್ ಕೊಟ್ಟಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ 'ವಿರುಷ್ಕಾ' ರೋಮ್ಯಾಂಟಿಕ್ ಫೋಟೋಗಳು

'ವಿರುಷ್ಕಾ' ದಂಪತಿಯ ಕಿಸ್ಸಿಂಗ್ ಸ್ಟೈಲ್ ಕಾಪಿ ಮಾಡಿರುವುದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ಜೋಡಿ ಟೀಕೆಗೆ ಒಳಗಾಗಿದ್ದಾರೆ. ''ವಿರುಷ್ಕಾ ಹಾಗೆ ಮೊದಲು ಮದುವೆ ಆಗಿ, ನಂತರ ಫೋಟೋ ಪೋಸ್ಟ್ ಮಾಡಿ'' ಎಂದು ಕೆಲವರು ಕಣ್ಣು ಕೆಂಪಗೆ ಮಾಡಿಕೊಂಡು ಕಾಮೆಂಟ್ ಮಾಡಿದ್ರೆ, ಹಲವರು ಟೀಕೆ ಮಾಡಿದ್ದಾರೆ.

Puneesh-Bandgi trolled for copying Anushka-Virat kissing picture

ಯಾರು ಏನೇ ಹೇಳಿದರೂ, ಯಾವ ಕಾಮೆಂಟ್ ಗೂ ಪುನೀಶ್ ಹಾಗೂ ಬಂದಗಿ ಕೇರ್ ಮಾಡಿಲ್ಲ. ಅದಕ್ಕೆ ಪ್ರತಿಕ್ರಿಯೆ ಕೊಡಲು ಗೋಜಿಗೂ ಹೋಗಿಲ್ಲ.

English summary
Bigg Boss 11 Contestants Puneesh Sharma and Bandgi Kalra trolled for copying Virat Kohli and Anushka Sharma's kissing picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X