twitter
    For Quick Alerts
    ALLOW NOTIFICATIONS  
    For Daily Alerts

    ಸೋನು ಸೂದ್ ಕಾರು ವಶಪಡಿಸಿಕೊಂಡು ಮನೆಗೆ ಕಳಿಸಿದ ಅಧಿಕಾರಿಗಳು!

    |

    ನಟ ಸೋನು ಸೂದ್ ತಮ್ಮ ಸಿನಿಮಾಗಳಿಗಿಂತಲೂ ಹೆಚ್ಚು ತಮ್ಮ ಮಾನವೀಯ ಕಾರ್ಯಗಳಿಂದ ಹೆಸರು ಮಾಡಿದವರು. ಕೊರೊನಾ ಮೊದಲ ಲಾಕ್‌ಡೌನ್‌ನಲ್ಲಿ ಅವರು ಮಾಡಿದ ಸಹಾಯವನ್ನು ಮರೆಯುವಂತಿಲ್ಲ.

    ಕೊರೊನಾ ಕಾಲದಲ್ಲಿ ಸೋನು ಸೂದ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಅವರನ್ನು 'ಮಸೀಯಾ' (ದೇವರು) ಎಂದು ಕರೆಯಲಾಯಿತು. ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಸ್ವಂತ ಊರುಗಳಿಗೆ ತಲುಪಿಸುವ ಕಾರ್ಯವನ್ನು ಸೋನು ಸೂದ್ ಆಗ ಮಾಡಿದ್ದರು. ಈಗಲೂ ಸೋನು ಸೂದ್ ತಮ್ಮ ಸಮಾಜ ಸೇವಾ ಕಾರ್ಯ ಮುಂದುವರೆಸಿದ್ದಾರೆ.

    ಆದರೆ ಇತ್ತೀಚೆಗೆ ಕೆಲವು ರಾಜಕೀಯ ಪಕ್ಷಗಳಿಂದ, ರಾಜಕೀಯ ಪಕ್ಷದ ಕಾರ್ಯಕರ್ತರಿಂದ ಸಾಕಷ್ಟು ವಿರೋಧವನ್ನು ಸೋನು ಸೂದ್ ಎದುರಿಸುತ್ತಿದ್ದಾರೆ. ಅದರಲ್ಲಿಯೂ ಸೋನು ಸೂದ್‌ರ ಸಹೋದರಿ ಚುನಾವಣೆಗೆ ಸ್ಪರ್ಧೆ ಮಾಡಿದ ಬಳಿಕವಂತೂ ಈ ವಿರೋಧ ಇನ್ನಷ್ಟು ಹೆಚ್ಚಾಗಿದೆ. ಜೊತೆಗೆ ಪಕ್ಷ ರಾಜಕೀಯ ದ್ವೇಷದ ರುಚಿಯನ್ನೂ ಸೋನು ಸೂದ್‌ ನೋಡಬೇಕಾಗಿ ಬಂದಿದೆ.

    ಸೋನು ಸೂದ್‌ರ ಸಹೋದರಿ ಮಾಳವಿಕ ಕಾಂಗ್ರೆಸ್ ಪಕ್ಷದ ವತಿಯಿಂದ ಪಂಜಾಬ್‌ನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದು, ಮತದಾನದ ದಿನದಂದೇ ಚುನಾವಣಾ ಅಧಿಕಾರಿಗಳು ಸೋನು ಸೂದ್‌ರ ಕಾರನ್ನು ವಶಪಡಿಸಿಕೊಂಡಿದ್ದಲ್ಲದೆ, ಅವರನ್ನು ಬಲವಂತದಿಂದ ಮನೆಗೆ ಕಳಿಸಿ ಅವರು ಅಂದು ಸಕ್ರಿಯರಾಗಿರದಂತೆ ನೋಡಿಕೊಳ್ಳಲಾಗಿದೆ. ಇದನ್ನು ಸೋನು ಸೂದ್‌ರ ಸಹೋದರಿ ಮಾಳವಿಕ ಮತ್ತು ಪಂಜಾಬ್ ಕಾಂಗ್ರೆಸ್ ಖಂಡಿಸಿದೆ.

    ಸೋನು ಸೂದ್ ಸಹೋದರಿ ಸ್ಪರ್ಧೆ

    ಸೋನು ಸೂದ್ ಸಹೋದರಿ ಸ್ಪರ್ಧೆ

    ಫೆಬ್ರವರಿ 20 ರಂದು ಪಂಜಾಬ್‌ನ 117 ವಿಧಾನಸಭೆ ಸೀಟುಗಳಿಗಾಗಿ ಚುನಾವಣೆ ನಡೆದಿದ್ದು, ಮೋಗಾ ವಿಧಾನಸಭಾ ಕ್ಷೇತ್ರದಿಂದ ಸೋನು ಸೂದ್‌ರ ಸಹೋದರಿ ಮಾಳವಿಕಾ ಸ್ಪರ್ಧೆ ಮಾಡಿದ್ದರು. ಮತದಾನದ ದಿನ ಸೋನು ಸೂದ್ ಅವರು ಮತಗಟ್ಟೆ ಬಳಿಕ ಬಂದಾಗ ಜಿಲ್ಲಾ ಚುನಾವಣಾಧಿಕಾರಿಗಳು ಅವರ ವಾಹನವನ್ನು ತಡೆದು ಅದನ್ನು ವಶಕ್ಕೆ ಪಡೆದಿದ್ದಲ್ಲದೆ ಅವರನ್ನು ಬಲವಂತದಿಂದ ಮನೆಗೆ ಕಳುಹಿಸಿದ್ದಾರೆ.

    ಮನೆಯಿಂದ ಹೊರಗೆ ಬಂದರೆ ಕ್ರಮ: ಚುನಾವಣಾಧಿಕಾರಿ

    ಮನೆಯಿಂದ ಹೊರಗೆ ಬಂದರೆ ಕ್ರಮ: ಚುನಾವಣಾಧಿಕಾರಿ

    ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಜಿಲ್ಲಾ ಚುನಾವಣಾಧಿಕಾರಿ, ''ಮತದಾನ ನಡೆವ ವೇಳೆ ಸೋನು ಸೂದ್ ಮತಗಟ್ಟೆ ಪ್ರವೇಶಿಸಲು ಬಂದರು ಆಗ ಅವರನ್ನು ತಡೆದು ಅವನ ವಾಹನ ವಶಪಡಿಸಿಕೊಂಡು, ಅವರನ್ನು ಮನೆಗೆ ಕಳುಹಿಸಲಾಗಿದೆ. ಒಂದೊಮ್ಮೆ ಅವರು ಮನೆಯಿಂದ ಹೊರಗೆ ಬಂದರೆ ಅವರ ಮೇಲೆ ಕ್ರಮ ಜರುಗಿಸಲಾಗಿವುದು'' ಎಂದಿದ್ದಾರೆ.

    ''ಮತದಾರರಿಗೆ ಬೆದರಿಕೆ, ಹಣ ಹಂಚಿಕೆ ಸುದ್ದಿ ಬಂತು''

    ''ಮತದಾರರಿಗೆ ಬೆದರಿಕೆ, ಹಣ ಹಂಚಿಕೆ ಸುದ್ದಿ ಬಂತು''

    ''ಕೆಲವರು ಮತದಾರರಿಗೆ ಬೆದರಿಕೆ ಹಾಕುತ್ತಿರುವ ಬಗ್ಗೆ ನಮಗೆ ವರದಿ ಬಂತು. ಹಾಗಾಗಿ ನಾವು ಬೂತ್‌ ಬಳಿ ಹೋದೆವು. ಅಕಾಲಿ ದಳದ ಸದಸ್ಯರು ಮತದಾರರಿಗೆ ಬೆದರಿಕೆ ಹಾಕಿದ್ದಾರೆ ಜೊತೆಗೆ ಬೂತ್‌ ಬಳಿಯೇ ಯಥೇಚ್ಛವಾಗಿ ಹಣ ಹಂಚಿಕೆ ಸಹ ನಡೆದ ಬಗ್ಗೆ ದೂರುಗಳು ಬಂದಿದ್ದವು. ಹಾಗಾಗಿ ನಾವು ಪರಿಶೀಲನೆ ನಡೆಸಲೆಂದು ಮತಗಟ್ಟೆ ಬಳಿ ಹೋದೆವು. ಈಗ ಚುನಾವಣಾ ಅಧಿಕಾರಿಯ ಮಾತಿನಂತೆ ನಾವು ಮನೆಯಲ್ಲಿದ್ದೇವೆ. ಒಟ್ಟಾರೆ ಮತದಾನ ನ್ಯಾಯಯುತವಾಗಿ ನಡೆಯಬೇಕಷ್ಟೆ'' ಎಂದು ಸೋನು ಸೂದ್ ಹೇಳಿದ್ದರು.

    ಕಾರು ವಶಕ್ಕೆ ಪಡೆದಿದ್ದೇಕೆ?

    ಕಾರು ವಶಕ್ಕೆ ಪಡೆದಿದ್ದೇಕೆ?

    ಸೋನು ಸೂದ್ ತನ್ನ ಸಹೋದರಿಯ ಪರ ತಾರಾ ಪ್ರಚಾರಕರಾಗಿದ್ದರು. ಸಹೋದರಿ ಪರವಾಗಿ ಮೋಗಾ ಕ್ಷೇತ್ರದೆಲ್ಲೆಡೆ ತಿರುಗಿ ಪ್ರಚಾರ ಮಾಡಿದರು. ನಿಯಮದ ಪ್ರಕಾರ ತಾರಾ ಪ್ರಚಾರಕರು ಬಹಿರಂಗ ಪ್ರಚಾರ ಅಂತ್ಯವಾದ ಬಳಿಕ ಕ್ಷೇತ್ರ ಬಿಟ್ಟು ತೆರಳಬೇಕು. ಸೋನು ಸೂದ್‌ರ ನಿವಾಸ ಮೋಗಾದಲ್ಲಿಯೇ ಇರುವ ಕಾರಣ ಅವರ ಕಾರನ್ನು ವಶಕ್ಕೆ ಪಡೆದು ಬಲವಂತದಿಂದ ಮನೆಯಲ್ಲಿ ಇರಿಸಲಾಯಿತು. ಸೋನು ಸೂದ್‌ರ ಸಹೋದರಿ ಬಿಜೆಪಿ ಅಥವಾ ಎಎಪಿಯಿಂದ ಚುನಾವಣೆ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು ಆದರೆ ಕಾಂಗ್ರೆಸ್‌ ಟಿಕೆಟ್ ಪಡೆದು ಚುನಾವಣೆ ಸ್ಪರ್ಧಿಸಿದ್ದಾರೆ ಮಾಳವಿಕ.

    English summary
    Sonu Sood's car detained by election officer in Punjab's Moga. Officer said Sonu Sood trying to enter voting booth so we detained his car and sent him to home.
    Monday, February 21, 2022, 19:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X