For Quick Alerts
  ALLOW NOTIFICATIONS  
  For Daily Alerts

  ಸೋನು ಸೂದ್‌ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ

  |

  ಕೊರೊನಾ ಸಂಕಷ್ಟದ ಸಮಯದಲ್ಲಿ ನಟ ಸೋನು ಸೂದ್ ಮಾಡಿದ ಮಾನವೀಯ ಕಾರ್ಯ ಅವರನ್ನು ಸಾಮಾನ್ಯ ವ್ಯಕ್ತಿಯಿಂದ ಮಹಾನ್ ವ್ಯಕ್ತಿಯ ಸ್ಥಾಯಿಗೇರಿಸಿದೆ.

  ಕೋವಿಡ್‌ ಸಮಯದಲ್ಲಿ ಸೋನು ಸೂದ್ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಸೋನು ಸೂದ್‌ಗೆ ಸಾಮಾನ್ಯ ಜನರು, ಸಂಘ-ಸಂಸ್ಥೆಗಳು, ಸಿನಿಮಾ ಸೇರಿದಂತೆ ವಿವಿಧ ಉದ್ಯಮಗಳವರು, ರಾಜಕಾರಣಿಗಳು ಹಲವಾರು ರೀತಿ ಸನ್ಮಾನಿಸಿ ಗೌರವಿಸಿದ್ದಾರೆ. ಇದೀಗ ಪಂಜಾಬ್ ಸರ್ಕಾರ ಸೋನು ಸೂದ್‌ಗೆ ವಿಶೇಷ ಗೌರವೊಂದನ್ನು ನೀಡಿದೆ.

  ಹಣದ ಕೊರತೆಯಿಂದ ರೈಲಿನಲ್ಲಿ ಓಡಾಡುತ್ತಿದ್ದ ನಟನ ಚಿತ್ರ ಇಂದು ವಿಮಾನದ ಮೇಲೆ!

  ಪಂಜಾಬ್‌ನಲ್ಲಿ ಕೊರೊನಾ ವ್ಯಾಕ್ಸಿನ್ ಅಭಿಯಾನ ನಡೆಸಲಾಗುತ್ತಿದ್ದು, ಈ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಸೋನು ಸೂದ್ ಅವರನ್ನು ರಾಯಭಾರಿಯನ್ನಾಗಿ ಘೋಷಿಸಿದ್ದಾರೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್.

  ಇಂದು ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ವಿಡಿಯೋ ಪ್ರಕಟಿಸಿದ್ದಾರೆ ಸಿಎಂ ಅಮರೀಂದರ್ ಸಿಂಗ್. ಸೋನು ಸೂದ್‌ ಸಹ ಸಿಎಂ ಜೊತೆ ವಿಡಿಯೋದಲ್ಲಿದ್ದಾರೆ. ಸೋನು ಸೂದ್‌ ಕೊರೊನಾ ಸಮಯದಲ್ಲಿ ಮಾಡಿದ ಮಾನವೀಯ ಕಾರ್ಯವನ್ನು ಹೊಗಳಿರುವ ಅಮರೀಂದರ್ ಸಿಂಗ್. ಸೋನು ಸೂದ್ ಪಂಜಾಬ್‌ನ ವ್ಯಾಕ್ಸಿನೇಷನ್ ಅಭಿಯಾನಕ್ಕೆ ರಾಯಭಾರಿ ಆಗಿರಲಿದ್ದಾರೆ ಎಂದು ಘೋಷಿಸಿದ್ದಾರೆ.

  ವಿಡಿಯೋದಲ್ಲಿ ಸೋನು ಸೂದ್‌ ಅನ್ನು ಜೊತೆಗೆ ನಿಲ್ಲಿಸಿಕೊಂಡೇ ಮಾತನಾಡಿರುವ ಅಮರೀಂದರ್ ಸಿಂಗ್, 'ಸೋನು ಸೂದ್‌ಗಿಂತಲೂ ಸೂಕ್ತ ಹಾಗೂ ಆದರ್ಶವಂತ ವ್ಯಕ್ತಿ ಈ ಅಭಿಯಾನಕ್ಕೆ ಸಿಗಲಾರರು. ಪಂಜಾಬ್‌ನ ವ್ಯಾಕ್ಸಿನೇಷನ್ ಅಭಿಯಾನಕ್ಕೆ ರಾಯಭಾರಿ ಆಗಲು ಅವರು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ' ಎಂದಿದ್ದಾರೆ.

  ಕೊರೊನಾ ಲಸಿಕೆ ಪಡೆದ ಬಾಲಿವುಡ್ ನಟ ಸೋನು ಸೂದ್

  ಕರ್ನಾಟಕ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟ ರಾಬರ್ಟ್ ಮಂಗ್ಲಿ | Filmibeat Kannada

  ಅಮರೀಂದರ್ ಅವರ ಟ್ವೀಟ್‌ ಅನ್ನು ರೀಟ್ವೀಟ್ ಮಾಡಿರುವ ಸೋನು ಸೂದ್, 'ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಹಾಕುವ ಮೂಲಕ ನಮ್ಮ ಪ್ರೀತಿಪಾತ್ರರ ಜೀವನನ್ನು ಕಾಪಾಡೋಣ' ಎಂದಿದ್ದಾರೆ. ಸೋನು ಸೂದ್‌ ಅವರು ಮೂಲತಃ ಪಂಜಾಬ್‌ ನವರೇ ಆಗಿದ್ದಾರೆ. ಹಾಗಾಗಿ ಅವರಿಗೆ ಈ ವಿಶೇಷ ಗೌರವ ನೀಡಲಾಗಿದೆ.

  English summary
  Punjab CM captain Amrinder Singh announced that actor Sonu Sood will be ambassador of COVID 19 vaccination drive in Punjab state.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X