Don't Miss!
- News
ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ: ನಿಲುಗಡೆ, ಸಮಯದ ಮಾಹಿತಿ ಇಲ್ಲಿ ಪಡೆಯಿರಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಲ್ಮಾನ್ ಖಾನ್ ಸಿನಿಮಾಗಾಗಿ ಒಂದಾದ ದೇವಿಶ್ರೀ ಪ್ರಸಾದ್, ಯೋ ಯೋ ಹನಿಸಿಂಗ್: ಯಾವುದು ಆ ಸಿನಿಮಾ?
ಸಂಗೀತ ಪ್ರಿಯರಿಗೆ ದೇವಿ ಶ್ರೀ ಪ್ರಸಾದ್ ಯಾರು ಅಂತ ಹೇಳಬೇಕಾಗಿಲ್ಲ. ಇತ್ತೀಚೆಗೆ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿರುವ 'ಪುಷ್ಪ' ಸಿನಿಮಾದ ಹಾಡುಗಳೇ ಇದಕ್ಕೆ ಸಾಕ್ಷಿ. 'ಪುಷ್ಪ' ಹಾಡುಗಳು ಸೂಪರ್ ಡೂಪರ್ ಹಿಟ್ ಆಗುತ್ತಿದ್ದಂತೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ.
ಇತ್ತೀಚೆಗೆ ಸಲ್ಮಾನ್ ಖಾನ್ ಸಿನಿಮಾದಿಂದ ಟಾಲಿವುಡ್ ಮ್ಯೂಸಿಕ್ ರೈರೆಕ್ಟರ್ ದೇವಿ ಶ್ರೀ ಪ್ರಸಾದ್ ಹೊರಬಂದಿದ್ದಾರೆ. ಅವರ ಜಾಗಕ್ಕೆ 'ಕೆಜಿಎಫ್ 2' ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವರದಿಯಾಗಿತ್ತು.
ಸಲ್ಮಾನ್
ಖಾನ್ಗೆ
'ಊ
ಅಂಟಾವಾ..'
ಸಾಂಗ್
ಇಷ್ಟವಂತೆ:
ಸಮಂತಾ
ರಿಯಾಕ್ಷನ್
ಏನು?
ಈಗ ಮತ್ತೊಂದು ಸುದ್ದಿ ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ. ದೇವಿ ಶ್ರೀ ಪ್ರಸಾದ್ ಹಾಗೂ ಯೋ ಯೋ ಹನಿ ಸಿಂಗ್ ಕಾಂಬಿನೇಷನ್ ಒಂದು ರೆಡಿಯಾಗುತ್ತಿದೆಯಂತೆ. ಅದೂ ಸಲ್ಮಾನ್ ಖಾನ್ ಸಿನಿಮಾಗಾಗಿಯೇ ಈ ಹಾಡು ಕಂಪೋಸ್ ಮಾಡುತ್ತಿದ್ದಾರಂತೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಸಲ್ಮಾನ್ ಖಾನ್ ಹಾಗೂ ದೇವಿ ಶ್ರೀ ಪ್ರಸಾದ್ ನಡುವಿನ ಗೊಂದಲವೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಸಲ್ಮಾನ್ ಸಿನಿಮಾಗೆ ಡಿಎಸ್‌ಪಿ ಹನಿಸಿಂಗ್ ಸಾಂಗ್
ದೇವಿ ಶ್ರೀ ಪ್ರಸಾದ್ ಟ್ಯೂನ್. ಯೋ ಯೋ ಹನಿಸಿಂಗ್ ಧ್ವನಿ ಸೇರಿದರೆ ಮ್ಯೂಸಿಕ್ ಇಂಡಸ್ಟ್ರಿನೇ ಅಲ್ಲಾಡಿ ಬಿಡುತ್ತೆ. ಇತ್ತೀಚೆಗೆ ಸಲ್ಮಾನ್ ಖಾನ್ ಸಿನಿಮಾ 'ಕಭಿ ಈದ್ ಕಭ ದಿವಾಲಿ' ಯಿಂದ ದೇವಿ ಶ್ರೀ ಪ್ರಸಾದ್ ಹೊರ ಬಂದಿದ್ದಾರೆ ಎಂದು ಸುದ್ದಿಯಾಗಿತ್ತು. ಮತ್ತೀಗ ಅದೇ ಸಿನಿಮಾದ ಒಂದು ಹಾಡನ್ನು ಡಿಎಸ್‌ಪಿ ಹಾಗೂ ಹನಿ ಸಿಂಗ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿದ್ಯಂತೆ. ಮ್ಯೂಸಿಕ್ ಇಂಡಸ್ಟ್ರಿಯಲ್ಲಿ ಇದನ್ನು ಡೆಡ್ಲಿ ಕಾಂಬಿನೇಷನ್ ಎಂದೇ ಹೇಳಲಾಗುತ್ತಿದೆ.
ಚಿರಂಜೀವಿ
ಮನೆಯಲ್ಲಿ
ಸಲ್ಮಾನ್
ಖಾನ್:
ತೆಲುಗು
ನಟರೊಟ್ಟಿಗೆ
ಪಾರ್ಟಿ

ಸಲ್ಮಾನ್, ಡಿಎಸ್‌ಪಿ, ಹನಿ ಸಿಂಗ್ ಸಂಗಮ
ದೇವಿ ಶ್ರೀ ಪ್ರಸಾದ್, ಹನಿ ಸಿಂಗ್ ಹಾಗೂ ಸಲ್ಮಾನ್ ಖಾನ್ ಈ ಮೂವರೂ ಸೇರಿದರೆ ಸಿನಿಪ್ರಿಯರಿಗೆ ಹಬ್ಬವೋ ಹಬ್ಬ. ಅದರಲ್ಲೂ ಈ ಬಾರಿ ಸಲ್ಮಾನ್ ಖಾನ್ ಹಾಡುಗಳನ್ನು ತುಂಬಾನೇ ಗಂಭೀರವಾಗಿ ತೆಗೆದುಕೊಂಡಿದ್ದಾರಂತೆ. ಹೀಗಾಗಿ 'ಭಾಯಿಜಾನ್' ( ಕಭಿ ಈಸ್ ಕಭಿ ದಿವಾಲಿ) ಸಿನಿಮಾದ ಒಂದು ಜಬರ್ದಸ್ತ್ ಸಾಂಗ್‌ಗಾಗಿ ದೇವಿ ಶ್ರೀ ಪ್ರಸಾದ್ ಹಾಗೂ ಹನಿ ಸಿಂಗ್ ಕಾಂಬಿನೇಷನ್ ಟ್ರೈ ಮಾಡುತ್ತಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಕೆಲವು ದಿನಗಳ ಹಿಂದೆ ಕ್ರಿಯೇಟಿವಿಟಿಯಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದರಿಂದ ದೇವಿ ಶ್ರೀ ಪ್ರಸಾದ್ ಹೊರಬಂದಿದ್ದಾರೆ ಎನ್ನಲಾಗಿದೆ.

ಸೌತ್ ಸ್ಟಾರ್‌ಗಳ ಜೊತೆ ಸಾಂಗ್
ಇದೇ ವೇಳೆ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮತ್ತೊಂದು ಸುದ್ದಿ ಸಂಚಲ ಸೃಷ್ಟಿಸುತ್ತಿದೆ. ಸಲ್ಮಾನ್ ಖಾನ್ ಜೊತೆ ದಕ್ಷಿಣ ಭಾರತದ ಸ್ಟಾರ್ ನಟರಾದ ವೆಂಕಟೇಶ್ ದಗ್ಗುಬಾಟಿ, ರಾಮ್‌ಚರಣ್ ಕೂಡ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಿದ್ದಾರೆ ಎನ್ನಲಾಗಿದೆ. ಆದರೆ, ದೇವಿ ಶ್ರೀ ಪ್ರಸಾದ್ ಹಾಗೂ ಹನಿ ಸಿಂಗ್ ಕಾಂಬಿನೇಷನ್ ಸಾಂಗ್‌ನಲ್ಲೇ ಇವರೆಲ್ಲರೂ ಕಾಣಿಸಿಕೊಳ್ಳುತ್ತಾರಾ? ಅನ್ನೋ ಕುತೂಹಲ ಹುಟ್ಟಿಕೊಂಡಿದೆ.
ಸಲ್ಮಾನ್
ಖಾನ್
ಚಿತ್ರಕ್ಕಾಗಿ
ಸಮಂತಾ,
ರಶ್ಮಿಕಾ
ಪೈಪೋಟಿ!

ಶೀರ್ಷಿಕೆಯಲ್ಲಿ ಗೊಂದಲ
'ಕಭಿ
ಈದ್
ಕಭಿ
ದಿವಾಲಿ'
ಸಿನಿಮಾ
ಟೈಟಲ್‌ನಲ್ಲಿ
ಒಂದಿಷ್ಟು
ಗೊಂದಲವಿದೆ.
ಒಮ್ಮೆ
'ಕಭಿ
ಈದ್
ಕಭಿ
ದಿವಾಲಿ'
ಅಂದರೆ,
ಇನ್ನೊಂದು
ಕಡೆ
'ಭಾಯಿಜಾನ್'
ಅಂತಿದ್ದಾರೆ.
ಇದರ
ಜೊತೆಗೆ
ಇನ್ನೊಂದಿಷ್ಟು
ಹೆಸರುಗಳೂ
ಇವೆಯಂತೆ.
ಈ
ಗೊಂದಲ
ಏನೇ
ಇದ್ದರೂ,
ಪೂಜಾ
ಹೆಗ್ಡೆ,
ಸಿದ್ಧಾರ್ಥ್
ನಿಗಮ್,
ಜೆಸ್ಸಿ
ಗಿಲ್,
ರಾಘವ್
ಜುಯಲ್
ಹಾಗೂ
ಶೆಹನಾಜ್
ಗಿಲ್
ಪ್ರಮುಖ
ಪಾತ್ರಗಳಲ್ಲಿ
ಕಾಣಿಸಿಕೊಳ್ಳಲಿದ್ದಾರೆ.
ಈ
ಕಾರಣಕ್ಕೆ
ಸಿನಿಮಾ
ಬಗ್ಗೆ
ಕುತೂಹಲವನ್ನು
ಉಳಿಸಿಕೊಂಡಿದೆ.