For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ಮತ್ತು ಪಿವಿ ಸಿಂಧು ನಡುವಿನ ಆಟದಲ್ಲಿ ಗೆದ್ದವರು ಯಾರು?

  |

  ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಓರ್ವ ಉತ್ತಮ ಬ್ಯಾಡ್ಮಿಂಟನ್ ಆಟಗಾರ್ತಿ ಎನ್ನುವುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಆಕೆ ರಾಷ್ಟ್ರ ಮಟ್ಟದಲ್ಲಿ ಬ್ಯಾಡ್ಮಿಂಟನ್ ಆಡಿದ್ದಾರೆ. ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಮಗಳು ದೀಪಿಕಾ.

  ಇತ್ತೀಚಿಗಷ್ಟೆ ಚಾಂಪಿಯನ್ ಪಿವಿ ಸಿಂಧು ಜೊತೆ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ಆಟ ಆಡಿದ್ದರು. ಅದರ ಫೋಟೋಗಳನ್ನು ಸ್ವತಃ ದೀಪಿಕಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಈಗ ಸೆಪ್ಟೆಂಬರ್ 23 ರಂದು ಮತ್ತೊಂದು ವಿಡಿಯೋ ಶೇರ್ ಮಾಡಿದ್ದಾರೆ ದೀಪಿಕಾ. ಅದರಲ್ಲಿ ಪಿವಿ ಸಿಂಧು ಅವರು ಡಿಪ್ಪಿ ಬ್ಯಾಡ್ಮಿಂಟನ್ ಆಟವನ್ನು ಶ್ಲಾಘಿಸಿದ್ದಾರೆ.

  ಬಾಲಿವುಡ್ ಸ್ಟಾರ್ ದೀಪಿಕಾ ಜೊತೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹೊಸ ಒಪ್ಪಂದ: ಏನದು?ಬಾಲಿವುಡ್ ಸ್ಟಾರ್ ದೀಪಿಕಾ ಜೊತೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹೊಸ ಒಪ್ಪಂದ: ಏನದು?

  ಅದಕ್ಕೂ ಮುಂಚೆ ದೀಪಿಕಾ ಮಾತನಾಡಿ, ''ಪಿವಿ ಸಿಂಧು ವಿಶ್ವ ಚಾಂಪಿಯನ್‌ಷಿಪ್‌ಗಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಆಕೆಗೆ ತರಬೇತಿ ನೀಡಲು ನಾನು ಅತ್ಯುತ್ತಮ ಪಾಟ್ನರ್ ಎಂದು ಭಾವಿಸಿದ್ದೇನೆ'' ಎಂದು ಹೇಳಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ನಟಿ ಖಂಡಿತವಾಗಿಯೂ ಉತ್ತಮ ಕೌಶಲ್ಯಗಳನ್ನು ಹೊಂದಿದ್ದಾರೆ ಎನ್ನುವುದು ಗೊತ್ತಿರುವ ಸಂಗತಿ.

  ಇನ್ನು ಅದೇ ವಿಡಿಯೋದಲ್ಲಿ ಮಾತನಾಡಿದ ಪಿವಿ ಸಿಂಧು, ''ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ಆಡಿದ್ದರೆ, ಅವಳು ಅಗ್ರ ಆಟಗಾರ್ತಿಯಾಗುತ್ತಿದ್ದಳು" ಎಂದಿದ್ದಾರೆ. ದೀಪಿಕಾ ಮತ್ತು ಪಿವಿ ಸಿಂಧು ಇಬ್ಬರ ನಡುವಿನ ಆಟದಲ್ಲಿ ಯಾರು ಗೆದ್ದರು ಎಂದು ಊಹಿಸಿ ಎಂದು ಪ್ರಶ್ನಿಸಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

  ಪತಿ ರಣ್ವೀರ್ ಸಿಂಗ್ ಕುರಿತು ಅಮಿತಾಬ್ ಬಳಿ ದೂರು ಹೇಳಿದ ನಟಿ ದೀಪಿಕಾ ಪಡುಕೋಣೆಪತಿ ರಣ್ವೀರ್ ಸಿಂಗ್ ಕುರಿತು ಅಮಿತಾಬ್ ಬಳಿ ದೂರು ಹೇಳಿದ ನಟಿ ದೀಪಿಕಾ ಪಡುಕೋಣೆ

  ಟೋಕಿಯೋ ಒಲಂಪಿಕ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದರು. ಆ ಬಳಿಕ ಮುಂಬೈನಲ್ಲಿ ನಡೆದ ಸಂತೋಷಕೂಟದಲ್ಲಿ ದೀಪಿಕಾ ಪಡುಕೋಣೆ ಹಾಗೂ ಪತಿ ರಣ್ವೀರ್ ಸಿಂಗ್ ಭಾಗವಹಿಸಿದ್ದರು. ಸಿಂಧು ಜೊತೆ ದೀಪಿಕಾಗೆ ಒಳ್ಳೆಯ ಬಾಂಧವ್ಯ ಇದೆ ಎನ್ನುವುದು ಹೊರ ಜಗತ್ತಿಗೆ ಗೊತ್ತಾಗಿದೆ.

  PV Sindhu appreciates Deepika Padukone badminton game

  ಪಿವಿ ಸಿಂಧು ಬಯೋಪಿಕ್‌ನಲ್ಲಿ ದೀಪಿಕಾ?

  ಭಾರತದ ಯಶಸ್ವಿ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಪಿವಿ ಸಿಂಧು ಅವರ ಬಯೋಪಿಕ್ ಮಾಡಲು ದೀಪಿಕಾ ಪಡುಕೋಣೆ ಆಸಕ್ತಿ ತೋರಿದ್ದಾರೆ ಎಂಬ ಸುದ್ದಿಯೂ ವರದಿಯಾಗಿದೆ. ಪಿವಿ ಸಿಂಧು ಬಯೋಪಿಕ್‌ನಲ್ಲಿ ಸ್ವತಃ ದೀಪಿಕಾ ಅವರೇ ನಟಿಸಲು ಹಾಗೂ ನಿರ್ಮಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

  ಈ ಹಿನ್ನೆಲೆಯಲ್ಲಿ ಪಿವಿ ಸಿಂಧು ಅವರ ಜೊತೆ ಬ್ಯಾಡ್ಮಿಂಟನ್ ಆಟ ಅಭ್ಯಾಸ ಮಾಡ್ತಿದ್ದಾರೆ ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ, ದೀಪಿಕಾ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ 'ಇದು ನಮ್ಮ ರೆಗ್ಯುಲರ್, ದೇಹ ದಂಡಿಸಲು ಉತ್ತಮ ವ್ಯಾಯಾಮ' ಎಂದಿದ್ದಾರೆ.

  ಸಿನಿಮಾಗಳ ಬಗ್ಗೆ ನೋಡುವುದಾದರೆ ರಣ್ವೀರ್ ಸಿಂಗ್ ನಟಿಸಿರುವ '83' ಚಿತ್ರದಲ್ಲಿ ದೀಪಿಕಾ ಸಣ್ಣದೊಂದು ಪಾತ್ರ ಮಾಡಿದ್ದಾರೆ. ಕಪಿಲ್ ದೇವ್ ಪಾತ್ರದಲ್ಲಿ ರಣ್ವೀರ್ ನಟಿಸಿದ್ದರೆ, ಕಪಿಲ್ ದೇವ್ ಪತ್ನಿ ಪಾತ್ರದಲ್ಲಿ ದೀಪಿಕಾ ಅಭಿನಯಿಸಿದ್ದಾರೆ. ಹೃತಿಕ್ ರೋಷನ್ ಜೊತೆ 'ಫೈಟರ್' ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಂಡಿದ್ದು, ಶಾರೂಖ್ ಖಾನ್ ಜೊತೆ 'ಪಠಾಣ್' ಚಿತ್ರದಲ್ಲಿಯೂ ನಟಿಸಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ಹಾಗೂ ಪ್ರಭಾಸ್-ನಾಗ್ ಅಶ್ವಿನ್ ಜೋಡಿಯ ಚಿತ್ರದಲ್ಲಿ ದೀಪಿಕಾ ಬಣ್ಣ ಹಚ್ಚಲಿದ್ದಾರೆ.

  English summary
  Indian badminton star PV Sindhu said that 'If Deepika Padukone would’ve played badminton, she would’ve become the top player'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X