Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಟಿಕೆಟ್ ಬೆಲೆ ಏರಿಸಿದ ಪಿವಿಆರ್: 110 ಹೊಸ ಸ್ಕ್ರೀನ್ ಅಳವಡಿಕೆ
ಸಿನಿಮಾಗಳು ಒಂದರ-ಹಿಂದೊಂದು ಸೂಪರ್ ಡೂಪರ್ ಹಿಟ್ ಆಗುತ್ತಿವೆ. ಕೋವಿಡ್ ಮುಗಿದ ಬಳಿಕ ಭಾರತೀಯ ಚಿತ್ರರಂಗ ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗಕ್ಕೆ ಪರ್ವಕಾಲ ಶುರುವಾದಂತಿದೆ.
ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಆದ ಹಲವು ಸಿನಿಮಾಗಳು ಹಿಟ್ ಆಗಿವೆ. 'ಪುಷ್ಪ', 'RRR', 'ಕೆಜಿಎಫ್ 2', 'ಲವ್ ಮಾಕ್ಟೆಲ್ 2', 'ಜೇಮ್ಸ್', 'ಸರ್ಕಾರು ವಾರಿ ಪಾಟ', 'ವಿಕ್ರಂ', ಹಿಂದಿಯ 'ಭೂಲ್ ಭುಲಯ್ಯ 2' ಇನ್ನೂ ಹಲವು ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ.
ಈ
ವರ್ಷದ
ಟಾಪ್
10
ಜನಪ್ರಿಯ
ಭಾರತೀಯ
ಸಿನಿಮಾಗಳಿವು:
'ಕೆಜಿಎಫ್
2'
ಎಷ್ಟನೇ
ಸ್ಥಾನ?
ಒಂದರ ಹಿಂದೊಂದರಂತೆ ಸಿನಿಮಾಗಳು ಸಾವಿರ ಕೋಟಿ ಕ್ಲಬ್ ಸೇರುತ್ತಿವೆ. ಹೀಗೆ ಸಿನಿಮಾಗಳು ನೂರು, ಸಾವಿರ ಕೋಟಿಗಳನ್ನು ಕಲೆಕ್ಷನ್ ಮಾಡಲು ಹೆಚ್ಚಿಸಲಾಗಿರುವ ಟಿಕೆಟ್ ದರವೇ ಕಾರಣ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿರುವ ಬೆನ್ನಲ್ಲೆ ಭಾರತದ ಅತಿ ದೊಡ್ಡ ಪಲ್ಟಿಪ್ಲೆಕ್ಸ್ ಚೈನ್ ಆಗಿರುವ ಪಿವಿಆರ್ ಟಿಕೆಟ್ ದರವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿದೆ.
ಪಿವಿಆರ್ ಮಲ್ಟಿಪ್ಲೆಕ್ಸ್ ಚೈನ್ ಭಾರತದಲ್ಲಿ ಸಿನಿಮಾ ಟಿಕೆಟ್ ದರಗಳನ್ನು 23% ಹೆಚ್ಚಿಸಿದೆ. ಇದು ದೊಡ್ಡ ಮಟ್ಟದ ಏರಿಕೆಯಾಗಿದೆ. ಪ್ರತಿ ಟಿಕೆಟ್ ಮೇಲೆ ಪ್ರತಿ ನೂರು ರುಪಾಯಿಗೆ 23 ರು ಹೆಚ್ಚಿನ ಮೊತ್ತವನ್ನು ಸಿನಿಮಾ ಪ್ರೇಕ್ಷಕ ನೀಡಬೇಕಾಗಿದೆ. ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿದರೆ ಇನ್ನಷ್ಟು ಹೆಚ್ಚಿನ ಬೆಲೆಯನ್ನು ಪ್ರೇಕ್ಷಕ ತೆರಬೇಕಾಗುತ್ತದೆ.

ಕಳೆದೆರಡು ವರ್ಷದಿಂದ ಬೆಲೆ ಏರಿಸಿಲ್ಲ: ಪಿವಿಆರ್
ಬೆಲೆ ಹೆಚ್ಚಳದ ಬಗ್ಗೆ ಮಾತನಾಡಿರುವ ಪಿವಿಆರ್ ಸಿಇಓ ಗೌತಮ್ ದತ್ತ, ''ಪ್ರತಿ ವರ್ಷವೂ ನಾವು ಹಣದುಬ್ಬರದ ಆಧಾರದ ಮೇಲೆ ಟಿಕೆಟ್ ದರಗಳನ್ನು 5-7 ಪ್ರತಿಶತ ಹೆಚ್ಚು ಮಾಡುತ್ತಿದ್ದೆವು. ಆದರೆ ಕಳೆದ ಎರಡೂ ವರೆ ವರ್ಷಗಳಿಂದ ನಾವು ಟಿಕೆಟ್ ಬೆಲೆ ಹೆಚ್ಚಿಸಿರಲಿಲ್ಲ. ವಿದ್ಯುತ್ ಬಿಲ್, ಮೇಂಟೆನೆನ್ಸ್, ಬಾಡಿಗೆ ಇವೆಲ್ಲವೂ ಹೆಚ್ಚಳವಾಗಿರುವ ಕಾರಣ ಅನಿವಾರ್ಯವಾಗಿ ನಾವು ಟಿಕೆಟ್ ದರ ಹೆಚ್ಚಿಸಲೇ ಬೇಕಿದೆ'' ಎಂದಿದ್ದಾರೆ.

ಜಾಹೀರಾತಿನಿಂದ ಹೆಚ್ಚಿನ ಲಾಭ ಬಂದಿಲ್ಲ: ಸಿಇಓ
ಮುಂದುವರೆದು ಮಾತನಾಡಿರುವ ಗೌತಮ್ ದತ್ತ, ''ಕೋವಿಡ್‌ಗೆ ಮುಂಚಿನ ಸ್ಥಿತಿಗೆ ಇನ್ನೂ ಪಿವಿಆರ್ ಮರಳಿಲ್ಲ. ಕೋವಿಡ್‌ಗೆ ಮುಂಚೆ ಬರುತ್ತಿದ್ದಷ್ಟು ಸಂಖ್ಯೆಯ ಜನ ಇನ್ನೂ ಪಿವಿಆರ್‌ಗೆ ಬಂದಿಲ್ಲ ಆದರೆ ನಾವು ಪ್ರಗತಿಯಲ್ಲಿದ್ದೇವೆ. ಶೀಘ್ರದಲ್ಲಿಯೇ ಕೋವಿಡ್ ಪೂರ್ವ ಸ್ಥಿತಿಗೆ ಮರಳಲಿದ್ದೇವೆ'' ಎಂದಿದ್ದಾರೆ. ಹಾಗೂ ''ಜಾಹೀರಾತಿನಲ್ಲಿ ಸಹ ಕೋವಿಡ್‌ಗೆ ಮುಂಚೆ ಇದ್ದಷ್ಟು ಲಾಭವನ್ನು ಪಡೆಯಲಾಗುತ್ತಿಲ್ಲ, ಆದರೆ 2023 ರ ಹಣಕಾಸು ವರ್ಷದಲ್ಲಿ ನಾವು ಜಾಹೀರಾತಿನಿಂದ ಹೆಚ್ಚಿನ ಲಾಭವನ್ನು ಗಳಿಸಲಿದ್ದೇವೆ'' ಎಂದಿದ್ದಾರೆ.

11% ಆದಾಯ ಜಾಹೀರಾತಿನಿಂದಲೇ ಬರುತ್ತಿತ್ತು
''ಕೋವಿಡ್‌ಗೆ ಮುಂಚಿನ ಸ್ಥಿತಿಗೆ ಹೋಲಿಸಿದರೆ ಕೇವಲ 68% ನಷ್ಟನ್ನು ಮಾತ್ರವೇ ಜಾಹೀರಾತಿನಿಂದ ಪಡೆಯುತ್ತಿದ್ದೇವೆ. ಪಿವಿಆರ್‌ನ ಒಟ್ಟಾರೆ ಆದಾಯದ 11% ಜಾಹೀರಾತಿನಿಂದ ಬರುವ ಕಾರಣ ನಾವು ಈ ಬಗ್ಗೆ ಹೆಚ್ಚಿನ ಗಮನ ವಹಿಸಿದ್ದೇವೆ. ಜಾಹೀರಾತು ಪ್ರದರ್ಶನಕ್ಕೆ 270 ಡಿಗ್ರಿ ಸ್ಕ್ರೀನ್ ಅನ್ನು ಪರಿಚಯಿಸುತ್ತಿದ್ದೇವೆ. ಅಲ್ಲದೆ ಪಿವಿಆರ್ ಒಳಗೆ ಗ್ರಾಹಕರನ್ನು ಹೆಚ್ಚು ಎಂಗೇಜ್ ಆಗಿರಲು ಕೆಲವು ಹೊಸ ಸಾಧನಗಳನ್ನು ಅಳವಡಿಸಲಿದ್ದೇವೆ. ಈಗ 16-18 ನಿಮಿಷ ನಾವು ಜಾಹೀರಾತು ಪ್ರದರ್ಶನ ಮಾಡುತ್ತಿದ್ದೇವೆ, ಅದನ್ನು ಸಹ ತುಸು ಹೆಚ್ಚಿಸಲಿದ್ದೇವೆ'' ಎಂದಿದ್ದಾರೆ.

110 ಹೊಸ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ
''2022-23 ಕ್ಕೆ ನಾವು ದೇಶದಾದ್ಯಮತ 100-110 ಹೆಚ್ಚುವರಿ ಸ್ಕ್ರೀನ್‌ಗಳನ್ನು ಅಳವಡಿಸಲಿದ್ದೇವೆ. ಕೋವಿಡ್‌ಗೆ ಮುನ್ನ ನಾವು ಪ್ರತಿ ವರ್ಷ 80-90 ಹೊಸ ಸ್ಕ್ರೀನ್‌ಗಳನ್ನು ಹಾಕುತ್ತಿದ್ದೆವು. ಈ ವರ್ಷ ಏಳು ಹೊಸ ನಗರಗಳಿಗೆ ನಾವು ಪ್ರವೇಶಿಸಲಿದ್ದೇವೆ. ಈಗಾಗಲೇ ಇರುವ ಪಿವಿಆರ್ ಮಲ್ಟಿಫ್ಲೆಕ್ಸ್‌ಗಳ ಅಭಿವೃದ್ಧಿ, ಹೊಸ ತಂತ್ರಜ್ಞಾನ ಅಳವಡಿಕೆಗೆ ನಾವು ಈ ಹಣಕಾಸು ವರ್ಷದಲ್ಲಿ 400 ಕೋಟಿ ರುಪಾಯಿ ಖರ್ಚು ಮಾಡಲಿದ್ದೇವೆ'' ಎಂದಿದ್ದಾರೆ ಸಿಇಓ ಗುಪ್ತಾ.