»   » ಸಲ್ಮಾನ್ 'ಜಿಂಕೆ' ಮೇಲೆ ಬಿತ್ತು ಉಸ್ಮಾನ್ ಖಾನ್ ಕಣ್ಣು

ಸಲ್ಮಾನ್ 'ಜಿಂಕೆ' ಮೇಲೆ ಬಿತ್ತು ಉಸ್ಮಾನ್ ಖಾನ್ ಕಣ್ಣು

Posted By:
Subscribe to Filmibeat Kannada

ಅದು 2006, ಫೆಬ್ರವರಿ 17. ಅಂದ್ರೆ, ಇಂದಿಗೆ ಸರಿಯಾಗಿ 9 ವರ್ಷಗಳ ಹಿಂದೆ 'ಕೃಷ್ಣ ಮೃಗ ಬೇಟೆ' ಪ್ರಕರಣದಲ್ಲಿ ಸಲ್ಮಾನ್ ಖಾನ್ ದೋಷಿ ಅಂತ ಕೋರ್ಟ್ ಘೋಷಿಸಿತು. ಇದರ ಮೇಲ್ಮನವಿ ವಿಚಾರಣೆ ಇನ್ನೂ ನ್ಯಾಯಾಲಯದ ಅಂಗಳದಲ್ಲಿದೆ.

ಸಲ್ಮಾನ್ ಖಾನ್ ಆರೋಪಿ ಅಥವಾ ಅಪರಾಧಿ ಅನ್ನುವ ತೀರ್ಪನ್ನ ಸದ್ಯದಲ್ಲೇ ಕೋರ್ಟ್ ನೀಡಲಿದೆ. ಅಷ್ಟರೊಳಗೆ ಸಲ್ಮಾನ್ ಖಾನ್ ಭಾಗಿಯಾಗಿದ್ದರು ಎನ್ನಲಾಗಿರುವ 'ಕೃಷ್ಣ ಮೃಗ ಬೇಟೆ' ಪ್ರಕರಣದ ಇಡೀ ಘಟನೆ ಎಳೆ ಎಳೆಯಾಗಿ ಬೆಳ್ಳಿತೆರೆ ಮೇಲೆ ಅನಾವರಣವಾಗಲಿದೆ.

Qaidi No.210 is based on Salman Khan's Blackbuck Case

ಹೌದು, ನೈಜ ಘಟನಾಧಾರಿತ ಚಿತ್ರಗಳು ಟ್ರೆಂಡ್ ಆಗಿರುವಾಗಲೇ ನಿರ್ದೇಶಕ ಪ್ರಕಾಶ್ ಝಾ 'ಖೈದಿ ನಂ.210' ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಟೈಟಲ್ಲೇ ಹೇಳುವಂತೆ ಇದು ಓರ್ವ ಅಪರಾಧಿಯ ಕಥೆ. ಇನ್ನೂ ಬಿಡಿಸಿ ಹೇಳಬೇಕಂದ್ರೆ, ಸಲ್ಮಾನ್ ಖಾನ್ ರವರ 'ಕೃಷ್ಣ ಮೃಗ ಬೇಟೆ' ಪ್ರಕರಣದ ಸಂಪೂರ್ಣ ಚಿತ್ರಣವೇ 'ಖೈದಿ ನಂ.210' ಹೂರಣ. [ಸಲ್ಮಾನ್ ಖಾನ್ ಗೆ ಹತ್ತು ವರ್ಷ ಜೈಲು ಶಿಕ್ಷೆ ಸಾಧ್ಯತೆ]

ಪ್ರಕರಣದ ತೀರ್ಪು ಸದ್ಯದಲ್ಲೇ ಹೊರಬರುವ ಸಾಧ್ಯತೆ ಇರುವುದರಿಂದ ನಿನ್ನೆ (ಫೆಬ್ರವರಿ 16) ರಂದು ಮುಂಬೈನ ಫಿಲ್ಮಿಸ್ತಾನ್ ಸ್ಟುಡಿಯೋದಲ್ಲಿ 'ಖೈದಿ ನಂ.210' ಸಿನಿಮಾ ಸೆಟ್ಟೇರಿದೆ.

Qaidi No.210 is based on Salman Khan's Blackbuck Case

ಯುವ ಪ್ರತಿಭೆ ಉಸ್ಮಾನ್ ಖಾನ್ ಚಿತ್ರದ ಪ್ರಮುಖ ಪಾತ್ರ, ಅಂದ್ರೆ ಸಲ್ಮಾನ್ ಖಾನ್ ಆಗಿ ಅಭಿನಯಿಸಲಿದ್ದಾರೆ. ವಿಶೇಷ ಅಂದ್ರೆ, ಜೋಧ್ ಪುರ ಜೈಲಿನಲ್ಲಿ ಸಲ್ಮಾನ್ ಖಾನ್ ಸೆಲ್ ಮೇಟ್ ಆಗಿದ್ದ ಮಹೇಶ್ ಸೈನಿ ಕೂಡ ತಮ್ಮದೇ 'ರಿಯಲ್' ಪಾತ್ರ ಪೋಷಿಸುತ್ತಿದ್ದಾರೆ.

ಹೇಳಿ ಕೇಳಿ ಇದು ನೈಜ ಘಟನೆ ಆಧಾರಿತ ಚಿತ್ರವಾದ್ದರಿಂದ ಸಲ್ಮಾನ್ ಖಾನ್ ಶಿಕ್ಷೆಗೆ ಒಳಗಾಗಿದ್ದ ಜೋಧ್ ಪುರ ಕಾರಾಗೃಹ, ಸಲ್ಲು ಇದ್ದ ಸೆಲ್, ಬ್ಯಾಡ್ ಬಾಯ್ ಬಳಸಿದ್ದ ವಾಹನದಲ್ಲೇ ಶೂಟ್ ಮಾಡುವುದಕ್ಕೆ ನಿರ್ದೇಶಕರು ನಿರ್ಧರಿಸಿದ್ದಾರೆ. [ಸಲ್ಮಾನ್ ಖಾನಿಗೆ ಜೈಲಾದರೆ, ಲಾಭ ನಷ್ಟ ಯಾರಿಗೆ?]

Qaidi No.210 is based on Salman Khan's Blackbuck Case

ಹಾಗಂತ ಚಿತ್ರದಲ್ಲಿ ಸಲ್ಮಾನ್ ಖಾನ್ ರನ್ನ 'ವಿಲನ್' ರೂಪದಲ್ಲಿ ತೋರಿಸಲ್ಲ. ಪ್ರಕರಣದ ಒಳ-ಹೊರ ಅಳೆದು ತೂಗಿ ಚಿತ್ರಕಥೆಯನ್ನ ರೆಡಿಮಾಡಿದ್ದಾರಂತೆ ನಿರ್ದೇಶಕ ಪ್ರಕಾಶ್ ಝಾ. ಸೆಲೆಬ್ರಿಟಿಗಳ ಕಷ್ಟ-ನಷ್ಟ, ಸಾಮಾಜಿಕ ಹೊಣೆಗಾರಿಕೆ ಸೇರಿದಂತೆ ಸಲ್ಮಾನ್ ಖಾನ್ ರ 'ಬಿಯಿಂಗ್ ಹ್ಯೂಮನ್' ತತ್ವ 'ಖೈದಿ ನಂ.210' ಚಿತ್ರದಲ್ಲಿರಲಿದೆ.

ನಿನ್ನೆಯಷ್ಟೇ ಚಿತ್ರ ಮುಹೂರ್ತ ಸಮಾರಂಭ ಮುಗಿಸಿದ್ದು, ಇಂದಿನಿಂದ ಶೂಟಿಂಗ್ ಶುರುವಾಗಿದೆ. ಅನೇಕ ಗೊಂದಲಗಳ ಗೂಡಾಗಿರುವ 'ಕೃಷ್ಣ ಮೃಗ ಬೇಟೆ' ಪ್ರಕರಣ 'ಖೈದಿ ನಂ.210' ಚಿತ್ರದ ಮೂಲಕ ಕ್ಲಿಯರ್ ಪಿಕ್ಚರ್ ಸಿಗಲಿದ್ಯಾ ಅನ್ನೋದು ಸದ್ಯದ ಕುತೂಹಲ. (ಏಜೆನ್ಸೀಸ್)

English summary
A film on Salman Khan's involvement in the infamous blackbuck hunting case, 'Qaidi No.210' went on floors Yesterday (Feb 16th) The film is being directed by Prakash Jha, and stars newcomer Usmaan Khan in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada