For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಆಪ್ಟೆಯ ಹಸಿಬಿಸಿ ದೃಶ್ಯ ಲೀಕ್: ಸಮಾಜದ ಮನಸ್ಥಿತಿ ಪ್ರಶ್ನಿಸಿದ ನಟಿ

  |

  ಬಾಲಿವುಡ್ ಖ್ಯಾತ ನಟಿ ರಾಧಿಕಾ ಆಪ್ಟೆ ಅವರ ಹಾಟ್ ವಿಡಿಯೋ ಒಂದು ಲೀಕ್ ಆಗಿದ್ದು, ಭಾರಿ ಚರ್ಚೆಗೆ ಕಾರಣವಾಗಿದೆ. ದೇವ್ ಪಟೇಲ್ ಜೊತೆ ನಟಿಸಿದ್ದ 'ದಿ ವೆಡ್ಡಿಂಗ್ ಗೆಸ್ಟ್' ಚಿತ್ರದ ರೋಮ್ಯಾಂಟಿಕ್ ದೃಶ್ಯ ಇದಾಗಿದ್ದು, ರಾಧಿಕಾ ಬಹಳ ಹಸಿಬಿಸಿ ದೃಶ್ಯದಲ್ಲಿ ನಟಿಸಿದ್ದಾರೆ.

  ಎರಡು ನಿಮಿಷದ ಈ ವಿಡಿಯೋದಲ್ಲಿ ನಟ ದೇವ್ ಪಟೇಲ್ ಜೊತೆ ರಾಧಿಕಾ ಆಪ್ಟೆ ಅರೆನಗ್ನವಾಗಿ ಬೆಡ್ ಮೇಲೆ ರೋಮ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಲೀಕ್ ಆಗಿರುವ ಬಗ್ಗೆ ರಾಧಿಕಾ ಆಪ್ಟೆ ಈಗ ಬೇಸರ ವ್ಯಕ್ತಪಡಿಸಿದ್ದಾರೆ.

  ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ.! ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ರಾಧಿಕಾ ಆಪ್ಟೆ.!

  'ದಿ ವೆಡ್ಡಿಂಗ್ ಗೆಸ್ಟ್ ಚಿತ್ರದಲ್ಲಿ ಒಳ್ಳೊಳ್ಳೆ ದೃಶ್ಯಗಳು ಇವೆ. ಆದರೆ, ಈ ಒಂದು ಸೀನ್ ಮಾತ್ರ ಯಾಕೆ ಲೀಕ್ ಆಗಿದೆ' ಎಂದು ಪ್ರಶ್ನಿಸಿದ್ದಾರೆ. 'ನನ್ನ ಜೊತೆಯಲ್ಲಿ ದೇವ್ ಪಟೇಲ್ ಕೂಡ ನಟಿಸಿದ್ದಾರೆ. ಆದರೆ, ನನ್ನ ಹೆಸರು ಮಾತ್ರ ಯಾಕೆ ಪ್ರಸ್ತಾಪವಾಗುತ್ತಿದೆ. ಯಾಕೆ, ದೇವ್ ಹೆಸರು ಎಲ್ಲಿಯೂ ಯಾರೂ ಹೇಳುತ್ತಿಲ್ಲ' ಎಂದು ಕೇಳಿದ್ದಾರೆ.

  ರಾಧಿಕಾ ಆಪ್ಟೆ ಜೊತೆ ಲಿಫ್ಟ್ ನಲ್ಲಿ ಅಸಭ್ಯವಾಗಿ ವರ್ತಿಸಿದ ನಟ ರಾಧಿಕಾ ಆಪ್ಟೆ ಜೊತೆ ಲಿಫ್ಟ್ ನಲ್ಲಿ ಅಸಭ್ಯವಾಗಿ ವರ್ತಿಸಿದ ನಟ

  'ಇದು ಸಮಾಜದ ಮನಸ್ಥಿತಿಯನ್ನ ಎತ್ತಿ ತೋರಿಸುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ, ರಾಧಿಕಾ ಆಪ್ಟೆಯ ಹಾಟ್ ದೃಶ್ಯಗಳು ಹೀಗೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಕೂಡ ಕೆಲವು ಸಿನಿಮಾದಲ್ಲಿ ರಾಧಿಕಾ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಆಗಲೂ ರಾಧಿಕಾ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದರು.

  ಕಾಲಿಗೆ ಕಚಗುಳಿ ಕೊಟ್ಟ ದಕ್ಷಿಣದ ಖ್ಯಾತ ನಟನ ಕಪಾಳಕ್ಕೆ ಹೊಡೆದ ರಾಧಿಕಾ! ಕಾಲಿಗೆ ಕಚಗುಳಿ ಕೊಟ್ಟ ದಕ್ಷಿಣದ ಖ್ಯಾತ ನಟನ ಕಪಾಳಕ್ಕೆ ಹೊಡೆದ ರಾಧಿಕಾ!

  ಅಂದ್ಹಾಗೆ, ಇಂಗ್ಲಿಷ್ ಭಾಷೆಯ 'ದಿ ವೆಡ್ಡಿಂಗ್ ಗೆ'ಸ್ಟ್ ಸಿನಿಮಾ ಈಗಾಗಲೇ ರಿಲೀಸ್ ಆಗಿದೆ. 2018ರ ಸೆಪ್ಟೆಂಬರ್ ನಲ್ಲೇ ಈ ಸಿನಿಮಾ ತೆರೆಗೆ ಬಂದಿದೆ. ಆದರೆ, ಈ ದೃಶ್ಯ ಎರಡು ದಿನಗಳ ಹಿಂದೆಯಷ್ಟೇ ಲೀಕ್ ಆಗಿದೆ. ಹೀಗಾಗಿ, ರಾಧಿಕಾ ಬೇಸರ ವ್ಯಕ್ತಪಡಿಸಿದ್ದಾರೆ.

  ಕಾಸ್ಟಿಂಗ್ ಕೌಚ್ ಮತ್ತು ಮೀಟೂ ಅಭಿಯಾನದ ವೇಳೆಯೂ ರಾಧಿಕಾ ಆಪ್ಟೆ ಕೆಲವರ ಮೇಲೆ ಪರೋಕ್ಷವಾಗಿ ಆರೋಪ ಮಾಡಿದ್ದರು. ತಾನು ಸಿನಿಮಾರಂಗಕ್ಕೆ ಬಂದ ಹೊಸತರಲ್ಲಿ ಯಾವ ರೀತಿ ಕಿರುಕುಳ ಎದುರಿಸಿದ್ದೇ ಎಂಬುದನ್ನ ಹೇಳಿಕೊಂಡಿದ್ದರು. ಸದ್ಯ, ರಾಧಿಕಾ ಆಪ್ಟೆ ಇಂಗ್ಲಿಷ್ ಭಾಷೆಯಲ್ಲಿ ದಿ ಆಶ್ರಾಮ್ ಎಂಬ ಸಿನಿಮಾ ಮಾಡುತ್ತಿದ್ದಾರೆ.

  English summary
  Bollywood actress Radhika apte and dev patel's hot video leaked from the wedding guest movie. now, Radhika apte react on this video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X