For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ತೊಟ್ಟಿರುವ ಈ ಉಡುಗೆಯ ಬೆಲೆ ಸಾವಿರಗಳಲ್ಲ, ಲಕ್ಷಗಳು!

  |

  ನಟಿ ರಶ್ಮಿಕಾ ಮಂದಣ್ಣ ಈಗ ಸಾಮಾನ್ಯ ನಟಿಯಲ್ಲ. ಅವರು ಸ್ಟಾರ್ ನಟಿ. ದೊಡ್ಡ ಪ್ರೊಡಕ್ಷನ್ ಹೌಸ್‌ಗಳು, ಸ್ಟಾರ್ ನಟರೊಟ್ಟಿಗಷ್ಟೆ ಅವರು ಕೆಲಸ ಮಾಡುತ್ತಾರೆ.

  ಅದರಲ್ಲಿಯೂ ಇತ್ತೀಚೆಗೆ ಬಾಲಿವುಡ್‌ಗೆ ಸಹ ರಶ್ಮಿಕಾ ಪದಾರ್ಪಣೆ ಮಾಡಿದ್ದಾರೆ. ಬಾಲಿವುಡ್‌ಗೆ ಹೆಜ್ಜೆ ಇಟ್ಟ ಬಳಿಕವಂತೂ ರಶ್ಮಿಕಾರ ಜೀವನ ಶೈಲಿಯೇ ಬದಲಾಗಿದೆ. ಫ್ಯಾಷನ್‌ ಕಡೆ, ಪಿಆರ್‌ ಕಡೆ ಹೆಚ್ಚಿನ ಗಮನ ವಹಿಸುತ್ತಿದ್ದಾರೆ ಈ ಕೊಡಗಿನ ಕುವರಿ.

  ಅದರಲ್ಲಿಯೂ ಫ್ಯಾಷನ್ ಕಡೆಗೆ ಹೆಚ್ಚಿನ ಗಮನವಹಿಸಿರುವ ರಶ್ಮಿಕಾ ಮಂದಣ್ಣ ಭಾರಿ ದುಬಾರಿ ಹಾಗೂ ಸೆಲೆಬ್ರಿಟಿ ವಿನ್ಯಾಸಕರಿಂದ ವಿನ್ಯಾಸ ಮಾಡಲ್ಪಟ್ಟ ಬಟ್ಟೆಗಳನ್ನಷ್ಟೆ ತೊಡುತ್ತಿದ್ದಾರೆ. ನಟಿ ರಶ್ಮಿಕಾ ಹೀಗೆ ಭಾರಿ ದುಬಾರಿ ಉಡುಗೆ ತೊಟ್ಟು ಹೊರಗೆ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ರಶ್ಮಿಕಾ ತೊಟ್ಟಿರುವ ಬಟ್ಟೆಯ ಬೆಲೆ ಸಾವಿರಗಳಲ್ಲಿಲ್ಲ ಬದಲಿಗೆ ಲಕ್ಷಗಳಲ್ಲಿದೆ.

  ಮುಂಬೈನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಶ್ಮಿಕಾ

  ಮುಂಬೈನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಶ್ಮಿಕಾ

  ನಿನ್ನೆಯಷ್ಟೆ ರಶ್ಮಿಕಾ ಮಂದಣ್ಣ ಮುಂಬೈನ ಸ್ಟಾರ್ ಹೋಟೆಲ್‌ ಬಳಿ ಪಾಪರಾಟ್ಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅವರು ತೊಟ್ಟಿದ್ದ ಉಡುಪು ಗಮನ ಸೆಳೆದಿದೆ. ನೋಡಲು ಸರಳವಾಗಿ ಕಾಣುವ ಬಿಳಿ ಬಣ್ಣದ ಆದರೆ ಕೆಂಪು ಬಣ್ಣದ ಚಿತ್ರಗಳನ್ನು ಒಳಗೊಂಡ ಟಾಪ್ ಅನ್ನು ರಶ್ಮಿಕಾ ತೊಟ್ಟಿದ್ದಾರೆ. ಅದಕ್ಕೆ ತುಸು ದೊಗಲೆ ಮಾದರಿಯ ಪ್ಯಾಂಟ್ ಹಾಕಿಕೊಂಡಿದ್ದಾರೆ. ಸರಳವಾಗಿ ಕಾಣುವ ಈ ಉಡುಪಿನ ಬೆಲೆ ಮಾತ್ರ ಗಗನದಲ್ಲಿದೆ.

  ರಶ್ಮಿಕಾ ಬಟ್ಟೆಯ ಬೆಲೆ ಎಷ್ಟು ಗೊತ್ತೆ?

  ರಶ್ಮಿಕಾ ಬಟ್ಟೆಯ ಬೆಲೆ ಎಷ್ಟು ಗೊತ್ತೆ?

  ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ತೊಟ್ಟಿರುವ ಬಟ್ಟೆ ಜನಪ್ರಿಯ ಬಟ್ಟೆ ಬ್ರ್ಯಾಂಡ್ ಗುಚ್ಚಿಯದ್ದು. ಗುಚ್ಚಿಯ ಟಿಪ್ಪಿ ಟಾಪ್ ಹಾಗೂ ಪ್ಯಾಂಟ್ ನ ಬೆಲೆ ಬರೋಬ್ಬರಿ 1.20 ಲಕ್ಷ ರುಪಾಯಿ. ಇದಕ್ಕೆ ಹೊಂದಿಕೆ ಆಗುವ ಹೈಹೀಲ್ಡ್ ಚಪ್ಪಲಿ ಹಾಗೂ ಕೂಲ್ ಆಗಿ ಕಾಣಲು ಟೋಪಿಯನ್ನು ಹಾಕಿಕೊಂಡಿದ್ದಾರೆ. ಆದರೆ ಇದೇ ರೀತಿಯ ಉಡುಪನ್ನು ಮೂರು ವಾರದ ಹಿಂದೆಯೂ ರಶ್ಮಿಕಾ ಕಾರ್ಯಕ್ರಮವೊಂದರಲ್ಲಿ ತೊಟ್ಟಿದ್ದರು ಎಂದಿದ್ದಾರೆ ಬಾಲಿವುಡ್‌ನ ಫ್ಯಾಷನ್‌ ವಿಶ್ಲೇಷಕರು.

  ಮುಂಬೈಗೆ ವಾಸ್ತವ್ಯ ಬದಲಿಸಿಕೊಂಡಿರುವ ರಶ್ಮಿಕಾ

  ಮುಂಬೈಗೆ ವಾಸ್ತವ್ಯ ಬದಲಿಸಿಕೊಂಡಿರುವ ರಶ್ಮಿಕಾ

  ರಶ್ಮಿಕಾ ಇದೀಗ ಬಾಲಿವುಡ್‌ನಲ್ಲಿ ನೆಲೆ ಊರಲು ಯತ್ನಿಸುತ್ತಿದ್ದಾರೆ. ಹಾಗಾಗಿಯೇ ಮುಂಬೈನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿ ವಾಸ್ತವ್ಯವನ್ನು ಹೈದರಾಬಾದ್‌ನಿಂದ ಮುಂಬೈಗೆ ಶಿಫ್ಟ್ ಮಾಡಿದ್ದಾರೆ. ಬಾಲಿವುಡ್‌ಗೆ ತಕ್ಕಂತೆ ತಮ್ಮ ಜೀವನ ಶೈಲಿಯನ್ನೂ ಬದಲಿಸಿಕೊಂಡಿರುವ ರಶ್ಮಿಕಾ, ವರ್ಕೌಟ್‌, ಪಬ್ಲಿಕ್ ಅಪಿಯರೆನ್ಸ್, ಸ್ಥಳೀಯ ಮಾಧ್ಯಮಗಳಿಗೆ ಸಂದರ್ಶನಗಳು ಇನ್ನಿತರೆಗಳನ್ನು ಪಾಲಿಸುತ್ತಿದ್ದಾರೆ. ಇದಕ್ಕೆ ತಕ್ಕಂತೆ ರಶ್ಮಿಕಾಗೆ ಹಲವು ಬಾಲಿವುಡ್ ಅವಕಾಶಗಳೂ ಸಹ ಬರುತ್ತಿವೆಯಂತೆ.

  ಹಲವು ಸಿನಿಮಾ ರಶ್ಮಿಕಾ ಕೈಯಲ್ಲಿ

  ಹಲವು ಸಿನಿಮಾ ರಶ್ಮಿಕಾ ಕೈಯಲ್ಲಿ

  ನಟಿ ರಶ್ಮಿಕಾ ನಟಿಸಿರುವ 'ಗುಡ್ ಬೈ' ಹಾಗೂ 'ಮಿಷನ್ ಮಜ್ನು' ಹಿಂದಿ ಸಿನಿಮಾಗಳು ಬಿಡುಗಡೆ ಆಗಲಿಕ್ಕಿವೆ. ಅದರ ಜೊತೆಗೆ ತೆಲುಗಿನ 'ಪುಷ್ಪ 2' ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಖ್ಯಾತ ನಟ ವಿಜಯ್‌ರ ಮುಂದಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಮತ್ತೊಂದು ತಮಿಳು ಸಿನಿಮಾಕ್ಕೂ ರಶ್ಮಿಕಾ ಸೈ ಎಂದಿದ್ದಾರೆ. ಬಾಲಿವುಡ್‌ನ ದೊಡ್ಡ ಪ್ರೊಡಕ್ಷನ್ ಜೊತೆಯೂ ಸಹ ರಶ್ಮಿಕಾ ಕೆಲಸ ಮಾಡಲಿದ್ದಾರೆ.

  English summary
  Actress Rashmika Mandanna wear a costly dress that is more than one lakh rs. She currently shifted her residence to Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X