For Quick Alerts
  ALLOW NOTIFICATIONS  
  For Daily Alerts

  ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್ ವಿಧಿವಶ

  |

  ಬಾಲಿವುಡ್ ನ ಶೋ ಮ್ಯಾನ್ ದಿವಂಗತ ರಾಜ್ ಕಪೂರ್ ಪತ್ನಿ ಕೃಷ್ಣ ರಾಜ್ ಕಪೂರ್ ಇಂದು ಕೊನೆಯುಸಿರೆಳೆದರು. 87 ವರ್ಷ ವಯಸ್ಸಿನ ಕೃಷ್ಣ ರಾಜ್ ಕಪೂರ್ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ವಿಧಿವಶರಾದರು.

  ''ಹೃದಯ ಸ್ತಂಬನದಿಂದಾಗಿ ನನ್ನ ತಾಯಿ ಇಂದು ಮುಂಜಾನೆ ಇಹಲೋಕ ತ್ಯಜಿಸಿದರು'' ಎಂದು ರಣಧೀರ್ ಕಪೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  1946 ರಲ್ಲಿ ಬಾಲಿವುಡ್ ನಟ ರಾಜ್ ಕಪೂರ್ - ಕೃಷ್ಣ ಮಲ್ಹೋತ್ರ ವಿವಾಹ ಮಹೋತ್ಸವ ನಡೆದಿತ್ತು. ಈ ದಂಪತಿಗೆ ಐವರು ಮಕ್ಕಳು. ರಣಧೀರ್ ಕಪೂರ್, ರಿಶಿ ಕಪೂರ್, ರಾಜೀವ್ ಕಪೂರ್, ರಿಮಾ ಕಪೂರ್ ಮತ್ತು ರಿತು ಕಪೂರ್.

  ಕಪೂರ್ ಕುಟುಂಬ ಒಡೆತನದ ಆರ್.ಕೆ ಸ್ಟುಡಿಯೋಸ್ ಮಾರಾಟಕ್ಕಿದೆ.!ಕಪೂರ್ ಕುಟುಂಬ ಒಡೆತನದ ಆರ್.ಕೆ ಸ್ಟುಡಿಯೋಸ್ ಮಾರಾಟಕ್ಕಿದೆ.!

  ರಣ್ಬೀರ್ ಕಪೂರ್, ಕರೀನಾ ಕಪೂರ್ ಹಾಗೂ ಕರಿಷ್ಮಾ ಕಪೂರ್ ಇವರ ಮೊಮ್ಮಕ್ಕಳು.

  ಇತ್ತೀಚೆಗಷ್ಟೇ ಮಕ್ಕಳು, ಮೊಮ್ಮಕ್ಕಳ ಜೊತೆಗೆ ಕೃಷ್ಣ ರಾಜ್ ಕಪೂರ್ ಪ್ಯಾರಿಸ್ ಗೆ ಹೋಗಿ ಬಂದಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೃಷ್ಣ ರಾಜ್ ಕಪೂರ್ ಇಂದು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಇಡೀ ಕಪೂರ್ ಕುಟುಂಬ ಇಂದು ನೋವಿನ ಮಡುವಿನಲ್ಲಿದೆ.

  'ಶೋ ಮ್ಯಾನ್' ರಾಜ್ ಕಪೂರ್ ಹುಟ್ಟುಹಬ್ಬದ ಸವಿನೆನಪು'ಶೋ ಮ್ಯಾನ್' ರಾಜ್ ಕಪೂರ್ ಹುಟ್ಟುಹಬ್ಬದ ಸವಿನೆನಪು

  ಕೃಷ್ಣ ರಾಜ್ ಕಪೂರ್ ನಿಧನಕ್ಕೆ ಇಡೀ ಬಾಲಿವುಡ್ ಕಂಬನಿ ಮಿಡಿದಿದೆ. ಆಮೀರ್ ಖಾನ್, ಕರಣ್ ಜೋಹರ್, ಸೋಹಾ ಅಲಿ ಖಾನ್, ಅನುಪಮ್ ಖೇರ್, ರವೀನಾ ಟಂಡನ್, ಫರ್ಹಾ ಖಾನ್, ಮಧುರ್ ಬಂಡಾರ್ಕರ್ ಸೇರಿದಂತೆ ಹಲವರು ಟ್ವಿಟ್ಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.

  English summary
  Late Actor Raj Kapoor's wife Krishna Raj Kapoor dies at 87.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X