For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರಗೆ ಮತ್ತೊಂದು ಸಂಕಷ್ಟ: ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ

  By ಫಿಲ್ಮಿಬೀಟ್ ಡೆಸ್ಕ್
  |

  ಬ್ಲೂ ಪಿಲ್ಮಂ ದಂಧೆ ಪ್ರಕರಣ ಸಂಬಂಧ ಜೈಲು ಸೇರಿರುವ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2020ರಲ್ಲಿ ಸೈಬರ್ ಪೊಲೀಸರು ದಾಖಲಿಸಿದ ಪ್ರಕರಣ ಸಂಬಂಧ ರಾಜ್ ಕುಂದ್ರ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಕುಂದ್ರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

  ಮುಂಬೈ ಅಪರಾಧ ವಿಭಾಗದ ಪೊಲೀಸರು ಬ್ಲೂ ಫಿಲ್ಮಂ ನಿರ್ಮಾಣದ ಆರೋಪದ ಮೇರೆಗೆ ರಾಜ್ ಕುಂದ್ರ ಅವರನ್ನು ಜುಲೈ 19ರಂದು ಬಂಧಿಸಿದ್ದರು. ಈ ಪ್ರಕರಣದಲ್ಲಿ ಕುಂದ್ರಾ ತಕ್ಷಣ ಜಾಮೀನು ಕೋರಿ ಹೈ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕುಂದ್ರಗೆ ಕೋರ್ಟ್ ಜಾಮೀನು ನಿರಾಕರಿಸಿತ್ತು.

  ಸಂಕಷ್ಟದಲ್ಲಿ ಶಿಲ್ಪಾ ಶೆಟ್ಟಿ: ಲಕ್ನೋ ಪೊಲೀಸರಿಂದ ಸಮನ್ಸ್ಸಂಕಷ್ಟದಲ್ಲಿ ಶಿಲ್ಪಾ ಶೆಟ್ಟಿ: ಲಕ್ನೋ ಪೊಲೀಸರಿಂದ ಸಮನ್ಸ್

  ಸದ್ಯ ರಾಜ್ ಕುಂದ್ರ ಸಲ್ಲಿಸಿರುವ ಅರ್ಜಿಯಲ್ಲಿ, "ಕಳೆದ ವರ್ಷ ಸೈಬರ್ ಪೊಲೀಸರು ಸಲ್ಲಿಸಿದ ಎಫ್ ಐ ಆರ್ ನಲ್ಲಿ ತನ್ನ ಹೆಸರು ಪ್ರತಿಫಲಿಸುವುದಿಲ್ಲ" ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ "ಪೊಲೀಸರಿಗೆ ವಿವರವಾದ ಹೇಳಿಕೆಯನ್ನು ನೀಡಿದ್ದೆ, ತನಿಖೆಗೆ ಸಹಕರಿಸಲು ಅನೇಕ ಸಂದರ್ಭಗಳಲ್ಲಿ ತನಿಖಾಧಿಕಾರಿ ಕಚೇರಿಗೆ ಭೇಟಿ ನೀಡಿದ್ದೆ, ಸಂಬಂಧಪಟ್ಟ ಅಧಿಕಾರಿಯಿಂದ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಿರುವುದಾಗಿ" ಹೇಳಿದ್ದಾರೆ ಹಾಗೂ ಪ್ರಾಸಿಕ್ಯೂಷನ್ ಸಾಕ್ಷಿಗಳ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

  2020 ಫೆಬ್ರವರಿಯಲ್ಲಿ ಆರ್ಮ್ ಸ್ಪ್ರೈಮ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಹೆಸರಿನಲ್ಲಿ ಹೂಡಿಕೆ ಮಾಡಲು ಪರಿಚಯಸ್ಥರೊಬ್ಬರು ಅವರನ್ನು ಸಂಪರ್ಕಿಸಿದ್ದರು. ಇದು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ಗ್ರಾಹಕರೊಂದಿಗೆ ಸಂವಹನ ನಡೆಸಲು ಡಿಜಿಟಲ್ ವೇದಿಕೆಯನ್ನು ಒದಗಿಸುವಲ್ಲಿ ನಿರತವಾಗಿತ್ತು. ಬಳಿಕ ಹೂಡಿಕೆ ಮಾಡಿದರು. 2019 ರಿಂದ 2020ರ ವರೆಗೂ ಮಾತ್ರ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದೇನೆ. ಆದರೆ ಯಾವುದೇ ಕಟ್ಟಡ ಮತ್ತು ಸ್ಕ್ರಿಪ್ಟ್ ಕೆಲಸದಲ್ಲಿ ಭಾಗಿಯಾಗಿಲ್ಲ ಎಂದು ರಾಜ್ ಕುಂದ್ರ ಹೇಳಿದ್ದಾರೆ.

  ಹಾಟ್ ಶಾಟ್ಸ್ ಕಂಪನಿಯು ರಚಿಸಿದ ಆಪ್‌ಗಳಲ್ಲಿ ಅಶ್ಲೀಲ ಚಿತ್ರದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ ಹೇಳಿದ್ದಾರೆ. ಈ ವಿಚಾರವನ್ನು ತಪ್ಪಾಗಿ ಸಿಲುಕಿಸಲಾಗಿದೆ ಮತ್ತು ಎಳೆಯಲಾಗುತ್ತಿದೆ ಎಂದು ಕುಂದ್ರ ಆರೋಪಿಸಿದ್ದಾರೆ.

  ಇನ್ನು ತನಿಖಾತಂಡ ಈಗಾಗಲೇ ರಾಜ್ ಕುಂದ್ರ ಬಳಿ ಇದ್ದ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡಿದೆ. 68ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ರಾಜ್ ಕುಂದ್ರ ಕಚೇರಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣ ಸಂಬಂಧ ನಟಿಯರಾದ ಶರ್ಲಿನ್ ಚೋಪ್ರಾ ಮತ್ತು ಪೂನಂ ಪಾಂಡೆ ಹಾಗೂ ಗೆಹನಾ ವಸಿಷ್ಠ್ ಹೆಸರುಗಳು ಕೇಳಿಬರುತ್ತಿದ್ದು, ಈಗಾಗಲೇ ಮುಂಬೈ ಸಪೊಲೀಸರು ಶರ್ಲಿನ್ ಚೋಪ್ರಾರನ್ನು ವಿಚಾರಣೆ ನಡೆಸಿದ್ದಾರೆ.

  ಜುಲೈ 19ರಂದು ಬಂಧನಕ್ಕೊಳಗಾಗಿರುವ ರಾಜ್ ಕುಂದ್ರ ಅವರನ್ನು ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದ್ದು, ಆಗಸ್ಟ್ 20ವರೆಗೂ ಜೈಲಿನಲ್ಲೇ ಕಾಲಕಳೆಯುವಂತಾಗಿದೆ.

  English summary
  Shilpa Shetty husband Raj Kundra approached Bombay High Court seeking anticipatory bail in cyber police case in 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X