For Quick Alerts
  ALLOW NOTIFICATIONS  
  For Daily Alerts

  ಡೈವೋರ್ಸ್ ಸುದ್ದಿಗೆ ಬ್ರೇಕ್ ಹಾಕಿದ ಶಿಲ್ಪಾ ಪತಿ ರಾಜ್ ಕುಂದ್ರ

  By ಸೋನು ಗೌಡ
  |

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರ ದಂಪತಿಗಳು ಬೇರೆಯಾಗಿದ್ದಾರೆ, ಇಬ್ಬರು ಬೇರೆ-ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಅನ್ನೋ ಸುದ್ದಿಯೊಂದು ಇತ್ತೀಚೆಗೆ ಬಿಟೌನ್ ನಲ್ಲಿ ಭಾರಿ ಹರಿದಾಡುತ್ತಿತ್ತು.

  ಇಷ್ಟೆಲ್ಲಾ ಸುದ್ದಿಯಾಗಿದ್ದರು ಕೂಡ ಶಿಲ್ಪಾ ಅವರಾಗಲಿ ಹಾಗೂ ಅವರ ಪತಿ ರಾಜ್ ಕುಂದ್ರ ಅವರಾಗಲೀ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಖುದ್ದು ರಾಜ್ ಕುಂದ್ರಾ ಅವರು ಮಾಧ್ಯಮವೊಂದಕ್ಕೆ ತಮ್ಮಿಬ್ಬರ ದಾಂಪತ್ಯ ಜೀವನದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.[ಕನ್ನಡ ಕಿರುತೆರೆಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ!]

  "ಇದೆಲ್ಲಾ ಸುಳ್ಳು ನಾನು ಆಫೀಸ್ ನಿಂದ ಮನೆಗೆ ಬರೋವಾಗಲೇ ಮಧ್ಯರಾತ್ರಿ 1.30 ಆಗುತ್ತೆ. ಇತ್ತೀಚೆಗೆ ನನಗೆ ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಆಗುತ್ತಿಲ್ಲ".

  "ಇದರಿಂದ ಬೇಜಾರಾದ ಶಿಲ್ಪ ಅವಳ ಫ್ರೆಂಡ್ಸ್ ಹತ್ತಿರ ನಾನು ಲೇಟ್ ಆಗಿ ಮನೆಗೆ ಬರುತ್ತೇನೆ ಅವರು ನನ್ನೊಂದಿಗೆ ಜಾಸ್ತಿ ಸಮಯ ಕಳೆಯುತ್ತಿಲ್ಲ, ಬರೀ ಆಫೀಸ್ ಅಂತ ಓಡಾಡುತ್ತಿದ್ದಾರೆ, ಅಂತ ಹೇಳಿಕೊಂಡಿದ್ದಾಳೆ. ಇದನ್ನು ಕಂಡವರು ಅವರಿಬ್ಬರಿಗೆ ಸರಿ ಇಲ್ಲ ಅಂತ ಸುದ್ದಿ ಮಾಡಿದ್ದಾರೆ. ಹೀಗೆ ಹೇಳಿದ ರಾಜ್ ಕುಂದ್ರ ಅವರು ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.[ಸೀರೆಯಲಿ ಶಿಲ್ಪಾ ಶೆಟ್ಟಿ ಸೌಂದರ್ಯ ಅನಾವರಣ]

  ಇದೀಗ ರಾಜ್ ಕುಂದ್ರ ಅವರು ಪತ್ನಿ ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಯೋಜನೆ ಹಾಕಿಕೊಂಡಿದ್ದು, ಮುದ್ದು ಪತ್ನಿಗೆ ಅಚ್ಚರಿಯ ಉಡುಗೊರೆ ಒಂದನ್ನು ನೀಡಲಿದ್ದಾರಂತೆ.

  English summary
  Actress Shilpa Shetty's businessman husband Raj Kundra slammed all the recent reports that said the duo are headed for a split.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X