For Quick Alerts
  ALLOW NOTIFICATIONS  
  For Daily Alerts

  ರಾಜ್ ಕುಂದ್ರ ಬ್ಲ್ಯೂ ಫಿಲ್ಮ್ ದಂಧೆ ಪ್ರಕರಣ; ಪೂನಂ ಪಾಂಡೆ - ಶರ್ಲಿನ್ ಚೋಪ್ರಾ ನಂಟು

  |

  ಬ್ಲ್ಯೂ ಫಿಲ್ಮ್ ದಂಧೆ ಪ್ರಕರಣದಲ್ಲಿ ಬಾಲಿವುಡ್ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಸೋಮವಾರ (ಜುಲೈ 19) ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಡಲ್ಟ್ ವಿಡಿಯೋ ನಿರ್ಮಾಣ, ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ.

  ರಾಜ್ ಕುಂದ್ರಾ ಬಂಧನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಂಬೈ ಪೊಲೀಸ್ ಕಮಿಷನರ್, ''ರಾಜ್ ಕುಂದ್ರ ವಿರುದ್ಧ ಅಗತ್ಯ ಸಾಕ್ಷ್ಯ ಇದ್ದ ಕಾರಣ ಅವರನ್ನು ಬಂಧಿಸಲಾಗಿದೆ'' ಎಂದಿದ್ದಾರೆ.

  ರಾಜ್‌ ಕುಂದ್ರಾ ಆದಾಯ ಪ್ರಶ್ನಿಸಿದ್ದ ಕಪಿಲ್ ಶರ್ಮಾ ಹಳೆಯ ವಿಡಿಯೋ ವೈರಲ್ರಾಜ್‌ ಕುಂದ್ರಾ ಆದಾಯ ಪ್ರಶ್ನಿಸಿದ್ದ ಕಪಿಲ್ ಶರ್ಮಾ ಹಳೆಯ ವಿಡಿಯೋ ವೈರಲ್

  ''ನೀಲಿ ಚಿತ್ರಗಳನ್ನು ಚಿತ್ರೀಕರಿಸಿ ಅವುಗಳನ್ನು ವಿದೇಶಿ ಸರ್ವರ್‌ಗಳನ್ನು ಬಳಸಿ ಮೊಬೈಲ್‌ ಆಪ್‌ಗಳಿಗೆ ಅಪ್‌ಲೋಡ್ ಮಾಡಲಾಗುತ್ತಿತ್ತು. ಈ ಬಗ್ಗೆ ಇದೇ ಫೆಬ್ರವರಿಯಲ್ಲಿ ಮುಂಬೈ ಸೈಬರ್ ಕ್ರೈಂನಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕ್ರೈಂ ಬ್ರ್ಯಾಂಚ್ ಮಾಡಿದ್ದು, ಪ್ರಕರಣದ ಮುಖ್ಯ ರೂವಾರಿಯಾದ ರಾಜ್ ಕುಂದ್ರಾ ಅನ್ನು ಬಂಧಿಸಲಾಗಿದೆ'' ಎಂದಿದ್ದಾರೆ. ಈ ಪ್ರಕರಣದಲ್ಲಿ ಈಗ ಪೂನಂ ಪಾಂಡೆ ಮತ್ತು ಶರ್ಲಿನ್ ಚೋಪ್ರಾ ಹೆಸರು ಕೇಳಿಬರುತ್ತಿದೆ. ಮುಂದೆ ಓದಿ...

  2020ರಿಂದ ತನಿಖೆ ನಡೆಸುತ್ತಿರುವ ಪೊಲೀಸರು

  2020ರಿಂದ ತನಿಖೆ ನಡೆಸುತ್ತಿರುವ ಪೊಲೀಸರು

  ಇಂದು ಬೆಳಗ್ಗೆ ರಾಜ್ ಕುಂದ್ರ ಅವರನ್ನು ಮುಂಬೈ ಪೊಲೀಸ್ ಅಪರಾಧ ಶಾಖೆಯ ಪ್ರಾಪರ್ಟಿ ಸೆಲ್ ಮುಂದೆ ಹಾಜರುಪಡಿಸುವ ಮೊದಲು ಅಪರಾಧ ಸೆಲ್ ಜೆಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಪಡಿಸಲಾಗಿದೆ. ಪೋರ್ನ್ ವಿಡಿಯೋ ದಂಧೆ ಸಂಬಂಧ ಪೊಲೀಸರು ಕಳೆದ ವರ್ಷದಿಂದ ತನಿಖೆ ನಡೆಸುತ್ತಿದ್ದು, ಈ ಸಂಬಂಧ ಅನೇಕರನ್ನು ಅರೆಸ್ಟ್ ಮಾಡಲಾಗಿತ್ತು. ಆಗ ರಾಜ್ ಕುಂದ್ರ ಹೆಸರು ಬಲವಾಗಿ ಕೇಳಿಬಂದಿತ್ತು.

  ಆರೋಪ ತಳ್ಳಿಹಾಕಿದ್ದ ಕುಂದ್ರ

  ಆರೋಪ ತಳ್ಳಿಹಾಕಿದ್ದ ಕುಂದ್ರ

  ಆದರೆ ರಾಜ್ ಕುಂದ್ರ ಈ ಆರೋಪವನ್ನು ತಳ್ಳಿಹಾಕಿದ್ದರು. ಅಲ್ಲದೆ ಜೂನ್‌ನಲ್ಲಿ ನಿರೀಕ್ಷಣ ಜಾಮೀನು ಕೋರಿದ್ದರು. ಆ ಸಮಯದಲ್ಲಿ ತನ್ನ ವ್ಯವಹಾರದ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದರು. ಈ ಬೆಳವಣಿಗೆಗಳ ಬಳಿಕ ಅನೇಕ ಹೆಸರು ಕೇಳಿಬಂದಿತ್ತು. ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

  ಅಡಲ್ಟ್ ಉದ್ಯಮಕ್ಕೆ ಕರೆತಂದಿದ್ದೇ ಕುಂದ್ರ: ಪೂನಂ-ಶರ್ಲಿನ್

  ಅಡಲ್ಟ್ ಉದ್ಯಮಕ್ಕೆ ಕರೆತಂದಿದ್ದೇ ಕುಂದ್ರ: ಪೂನಂ-ಶರ್ಲಿನ್

  ರಾಜ್ ಕುಂದ್ರ ಬಂಧನದ ಬೆನ್ನಲ್ಲೇ ಈ ಪ್ರಕರಣದಲ್ಲಿ ವಯಸ್ಕ ತಾರೆಯರಾದ ಪೂನಂ ಪಾಂಡೆ ಮತ್ತು ಶರ್ಲಿನ್ ಚೋಪ್ರಾ ಹೆಸರುಗಳು ವೈರಲ್ ಆಗುತ್ತಿದೆ. ಶರ್ಲಿನ್ ಚೋಪ್ರಾ ಮತ್ತು ಪೂನಂ ಈ ಪ್ರಕರಣದ ಸಂಬಂಧ ಸೈಬರ್ ಪೊಲೀಸರಲ್ಲಿ ತಮ್ಮ ಹೇಳಿಕೆ ದಾಖಲಿಸಿರುವ ವಿವರಗಳು ವೈರಲ್ ಆಗುತ್ತಿವೆ. ತಮ್ಮ ಹೇಳಿಕೆಯಲ್ಲಿ ಇಬ್ಬರು ಪೋರ್ನ್ ಪ್ರಕರಣಕ್ಕೆ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದರು. ಅಲ್ಲದೇ ಅಡಲ್ಟ್ ಉದ್ಯಮಕ್ಕೆ ಕರೆತಂದಿದ್ದೇ ರಾಜ್ ಕುಂದ್ರ ಎಂದು ಹೇಳಿದ್ದಾರೆ.

  ಒಂದು ಪ್ರಾಜೆಕ್ಟ್ ಗೆ ಶರ್ಲಿನ್ ಪಡೆಯುತ್ತಿದ್ದಿದ್ದು ಎಷ್ಟು?

  ಒಂದು ಪ್ರಾಜೆಕ್ಟ್ ಗೆ ಶರ್ಲಿನ್ ಪಡೆಯುತ್ತಿದ್ದಿದ್ದು ಎಷ್ಟು?

  ವರದಿಗಳ ಪ್ರಕಾರ ಶರ್ಲಿನ್ ಗೆ ಒಂದು ಪ್ರಾಜೆಕ್ಟ್ ಗೆ 30 ಲಕ್ಷ ರೂ. ನೀಡಲಾಗುತ್ತೆ ಎನ್ನಲಾಗುತ್ತಿದೆ. ರಾಜ್ ಕುಂದ್ರ ಅವರಿಗೆ ಸುಮಾರು 15 ರಿಂದ 20 ಪ್ರಾಜೆಕ್ಟ್ ಗಳನ್ನು ಮಾಡಿಕೊಟ್ಟಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

  ರಾಜ್ ಕುಂದ್ರ ಸಂಸ್ಥೆ ಜೊತೆ ಪೂನಂ ಒಪ್ಪಂದ

  ರಾಜ್ ಕುಂದ್ರ ಸಂಸ್ಥೆ ಜೊತೆ ಪೂನಂ ಒಪ್ಪಂದ

  ಅಡಲ್ಟ್ ಸ್ಟಾರ್ ಪೂನಂ ಪಾಂಡೆ, ರಾಜ್ ಕುಂದ್ರ ಅವರ ಅರ್ಮ್ಸ್ ಪ್ರೈಮ್ ಮೀಡಿಯಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ರಾಜಾ ಕುಂದ್ರ ಅವರ ಗ್ರಾಹಕರಲ್ಲಿ ಪೂನಂ ಕೂಡ ಒಬ್ಬರಾಗಿದ್ದು, ಇವರು ಅನೇಕ ವಯಸ್ಕ ಅಪ್ಲಿಕೇಶನ್‌ಗಳನ್ನು ಹೊಂದಿದ್ದಾರೆ. ಈ ಆಪ್ ಗಳ ಮೂಲಕ ಅಶ್ಲೀಲ ವಿಡಿಯೋಗಳನ್ನು ಹರಿಬಿಡುತ್ತಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

  ಮೈತುಂಬ ವಿವಾದಗಳಿದ್ದರೂ ದರ್ಶನ್ ಸ್ಟಾರ್ ಗಿರಿ ಮಂಕಾಗದಿರಲು ಇಲ್ಲಿವೆ ಕಾರಣಗಳು | Filmibeat Kannada
  ರಾಜ್ ಕುಂದ್ರ ವಿರುದ್ಧ ದೂರು ನೀಡಿದ್ದ ಪೂನಂ

  ರಾಜ್ ಕುಂದ್ರ ವಿರುದ್ಧ ದೂರು ನೀಡಿದ್ದ ಪೂನಂ

  ಕಳೆದ ವರ್ಷ ಪೂನಂ ಪಾಂಡೆ ರಾಜ್ ಕುಂದ್ರ ವಿರುದ್ಧ ದೂರು ನೀಡಿದ್ದರು. ರಾಜ್ ಕುಂದ್ರ ಸಂಸ್ಥೆ ಜೊತೆಗಿನ ಒಪ್ಪಂದ ಮುಗಿದ ಬಳಿಕವೂ ರಾಜ್ ಕುಂದ್ರ ಮತ್ತು ಅವರ ಸಹಚರರು ತನ್ನ ವಿಡಿಯೋ ತುಣುಕುಗಳನ್ನು ಮತ್ತು ಸಿನಿಮಾಗಳನ್ನು ನಿರ್ದಾಕ್ಷಿಣ್ಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

  English summary
  Raj Kundra’s Arrest: Know Poonam Pandey’s and Sherlyn Chopra's Connection in Porn Film Creation Case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X