twitter
    For Quick Alerts
    ALLOW NOTIFICATIONS  
    For Daily Alerts

    ರಾಜ್ ಕುಂದ್ರಾ ನಿಜ ಮುಖ ಬಯಲು ಮಾಡಿದ ಬ್ಯುಸಿನೆಸ್ ಪಾರ್ಟನರ್

    |

    ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ರಾಜ್ ಕುಂದ್ರಾ ವಿರುದ್ಧ ಮುಂಬೈ ಪೊಲೀಸರು ಕೆಲ ದಿನ ಹಿಂದಷ್ಟೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

    1400ಕ್ಕೂ ಹೆಚ್ಚು ಪುಟಗಳಿರುವ ದೋಷಾರೋಪ ಪಟ್ಟಿಯಲ್ಲಿ 43 ಮಂದಿ ರಾಜ್ ಕುಂದ್ರಾರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡಿದ್ದಾರೆ. ಶಿಲ್ಪಾ ಶೆಟ್ಟಿ ಹೇಳಿಕೆಯೂ ಅದರಲ್ಲಿ ದಾಖಲಾಗಿದೆ.

    ದೋಷಾರೋಪ ಪಟ್ಟಿ ಸಲ್ಲಿಕೆ ಆದ ಬಳಿಕ ಪ್ರಕರಣದ ಬಗ್ಗೆ ಹಾಗೂ ರಾಜ್ ಕುಂದ್ರಾ ಬಗ್ಗೆ ಹಲವು ವಿಷಯಗಳು ಹೊರಗೆ ಬೀಳುತ್ತಿವೆ. ಪ್ರಕರಣದ ಕುರಿತಂತೆ ಶಿಲ್ಪಾ ಶೆಟ್ಟಿ ಏನು ಹೇಳಿದ್ದರು ಎಂಬ ಅಂಶ ದೋಷಾರೋಪ ಪಟ್ಟಿಯಿಂದ ಬಹಿರಂಗವಾಗಿತ್ತು. ಇದೀಗ ರಾಜ್ ಕುಂದ್ರಾರ ಉದ್ಯಮ ಪಾಲುದಾರರೊಬ್ಬರು ರಾಜ್ ಕುಂದ್ರಾ ಬಗ್ಗೆ ಹಾಗೂ ಪ್ರಕರಣದ ಪೊಲೀಸರ ಮುಂದೆ ಹೇಳಿರುವ ವಿಷಯ ಬಹಿರಂಗವಾಗಿದೆ.

    'ಹಾಟ್‌ಶಾಟ್ಸ್‌' ಅಪ್ಲಿಕೇಶನ್ ಅನ್ನು ಆರ್ಮ್ಸ್ ಪ್ರೈಂ ಲಿಮಿಟೆಡ್ ಸಂಸ್ಥೆಯಿಂದ ನಿರ್ಮಾಣ ಮಾಡಲಾಗಿತ್ತು. ಆರ್ಮ್ಸ್ ಪ್ರೈಂ ಲಿಮಿಟೆಡ್‌ನಲ್ಲಿ ಶೇ 35 ಪಾಲುದಾರಿಕೆ ಹೊಂದಿರುವ ಸೌರಭ್ ಕುಶ್ವಾ, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

    ''ಆರ್ಮ್ಸ್ ಪ್ರೈಂ ಲಿಮಿಟೆಡ್‌ನಲ್ಲಿ 35 ರಷ್ಟು ಪಾಲುದಾರಿಕೆ ನನಗೆ ಇತ್ತು. ಅದೇ ಸಂಸ್ಥೆಯ ಮೂಲಕ ಹಾಟ್‌ಶಾಟ್ಸ್‌ ಅಪ್ಲಿಕೇಶನ್ ನಿರ್ಮಿಸಲಾಯ್ತು. ಆ ಅಪ್ಲಿಕೇಶನ್ ಅನ್ನು ರಾಜ್ ಕುಂದ್ರಾ ಪ್ರಾರಂಭ ಮಾಡಿದ್ದೇ ಪೋರ್ನ್ ವಿಡಿಯೋ ನಿರ್ಮಿಸಿ ಮಾರಾಟ ಮಾಡಲೆಂದು'' ಎಂದಿದ್ದಾರೆ ಸೌರಭ್ ಕುಶ್ವಾ. ಸಂಸ್ಥೆಯಲ್ಲಿ ನನ್ನದು ಪಾಲುದಾರಿಕೆ ಇತ್ತಾದರೂ ಹಾಟ್‌ಶಾಟ್ಸ್‌ಗೆ ವಿಡಿಯೋ ಅಪ್‌ಲೋಡ್ ಮಾಡುವುದು ಅದನ್ನು ಬದಲಾಯಿಸುವುದು ಇನ್ನಿತರೆ ನಿಯಂತ್ರಣಗಳು ರಾಜ್ ಕುಂದ್ರಾ ಕೈಯಲ್ಲಿಯೇ ಇದ್ದವು'' ಎಂದಿದ್ದಾರೆ ಸೌರಭ್.

    ಸಂಬಂಧಿಯ ಸಂಸ್ಥೆಗೆ ಮಾರಾಟ ಮಾಡಲಾಯ್ತು

    ಸಂಬಂಧಿಯ ಸಂಸ್ಥೆಗೆ ಮಾರಾಟ ಮಾಡಲಾಯ್ತು

    ಆದರೆ ಆರ್ಮ್ಸ್ ಪ್ರೈಂ ಲಿಮಿಟೆಡ್‌ ಸಂಸ್ಥೆಯನ್ನು ಬ್ರಿಟನ್‌ನ ಕೆನ್‌ರಿನ್ ಸಂಸ್ಥೆಗೆ ಮಾರಾಟ ಮಾಡಲಾಯ್ತು. ಹೀಗೆ ಮಾರಾಟ ಮಾಡುವ ಒಂದು ದಿನ ಸಂಸ್ಥೆಯ ನಿರ್ದೇಶಕ ಸ್ಥಾನದಿಂದ ರಾಜ್ ಕುಂದ್ರಾ ರಾಜೀನಾಮೆ ನೀಡಿ ಕೆಳಗಿಳಿದರು. ಆದರೆ, ಹಾಟ್‌ಶಾಟ್ಸ್ ಅನ್ನು ಕೆನ್‌ರಿನ್‌ಗೆ ಮಾರಾಟ ಮಾಡುವ ಮುನ್ನವೇ ಹಾಟ್‌ಶಾಟ್ಸ್‌ನಿಂದ ಗಳಿಸಿದ ಲಾಭವನ್ನು ಗೂಗಲ್ ಹಾಗೂ ಆಪಲ್‌ನ ಅಪ್ಲಿಕೇಶನ್‌ಗಳನ್ನು ಬಳಸಿ ಕೆನ್‌ರಿನ್‌ನ ಬ್ಯಾಂಕ್‌ ಖಾತೆಗೆ ವರ್ಗಾಯಿಸಿರುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ. ಕೆನ್‌ರಿನ್ ಸಂಸ್ಥೆಯು ರಾಜ್ ಕುಂದ್ರಾರ ಸಹೋದರ ಸಂಬಂಧಿಯದ್ದೇ ಆಗಿದೆ.

    ಪಾಲುದಾರಿಕೆ ಬಿಟ್ಟುಕೊಡುವಂತೆ ಕೇಳಿದ್ದ ಕುಂದ್ರಾ

    ಪಾಲುದಾರಿಕೆ ಬಿಟ್ಟುಕೊಡುವಂತೆ ಕೇಳಿದ್ದ ಕುಂದ್ರಾ

    ಸೌರಭ್ ಕುಶ್ವಾ ಹೇಳಿರುವಂತೆ ಅಪ್ಲಿಕೇಶನ್‌ನ ತಾಂತ್ರಿಕ ಅಂಶಗಳ ಬಗ್ಗೆ ನನಗೆ ಏನೂ ಗೊತ್ತಾಗುತ್ತಿರಲಿಲ್ಲ ಅವನ್ನೆಲ್ಲ ಮಾಹಿತಿ ತಂತ್ರಜ್ಞಾನ ವಿಭಾಗದ ರಿಯಾನ್ ಥೋರ್ಪ್ ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ. ಕುಂದ್ರಾ , ಸೌರಭ್ ಕುಶ್ವಾಗೆ ಕಳಿಸಿರುವ ಒಂದು ಇಮೇಲ್‌ನಲ್ಲಿ ತಾನು ಸಂಸ್ಥೆಯ ಮೇಲೆ ಇರುವ ಎಲ್ಲ ಸಾಲವನ್ನು ತೀರಿಸುತ್ತೇನೆ ಆದರೆ ನಿನ್ನ ಪಾಲುದಾರಿಕೆಯನ್ನು ಬಿಟ್ಟುಕೊಟ್ಟರೆ ಮಾತ್ರ ಎಂದಿದ್ದಾರೆ. ಆದರೆ ಸೌರಭ್ ಪಾಲುದಾರಿಕೆ ಬಿಟ್ಟುಕೊಟ್ಟಿಲ್ಲ. ಸಂಸ್ಥೆ ಮೇಲೆ 17 ಲಕ್ಷ ಸಾಲ ಇತ್ತು.

    ಸೌರಭ್ ಹಾಗೂ ರಾಜ್ ಕುಂದ್ರಾ ನಡುವೆ ಇ-ಮೇಲ್ ವಿನಿಮಯ

    ಸೌರಭ್ ಹಾಗೂ ರಾಜ್ ಕುಂದ್ರಾ ನಡುವೆ ಇ-ಮೇಲ್ ವಿನಿಮಯ

    ಮತ್ತೊಂದು ಇ-ಮೇಲ್‌ನಲ್ಲಿ ಸೌರಭ್ ಹಾಗೂ ರಾಜ್ ಕುಂದ್ರಾ ನಡುವೆ ಲಾಭದ ಹಂಚಿಕೆಯಲ್ಲಿ ಯಾವುದೇ ತಕರಾರು ಇರಲಿಲ್ಲ. ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ಒಪ್ಪಿತ ರೀತಿಯಲ್ಲಿ ಲಾಭ ಹಂಚಿಕೆ ಮಾಡಿಕೊಳ್ಳುತ್ತಿದ್ದರು ಅಲ್ಲದೆ ಹಾಟ್‌ಶಾಟ್ಸ್‌ ಕೆನ್‌ರಿನ್ ಮಾರಾಟವಾದ ಬಳಿಕ ಬಂದ ಹಣವನ್ನು ಸಹ ಸೂಕ್ತವಾಗಿ ಹಂಚಿಕೊಂಡಿರುವುದು ಎಂಬುದು ಬೆಳಕಿಗೆ ಬಂದಿದೆ. ಹಾಟ್‌ಶಾಟ್ಸ್‌ನಿಂದ ಬರುತ್ತಿರುವ ಲಾಭವು ಲಂಡನ್‌ಗೆ ಹೋಗುತ್ತಿರುವ ಬಗ್ಗೆ ಸೌರಭ್‌ಗೂ ಗೊತ್ತಿತ್ತು ಎಂದು ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

    ರಾಜ್ ಕುಂದ್ರಾ ಮೇಲೆ ಇನ್ನಷ್ಟು ಕೇಸುಗಳು

    ರಾಜ್ ಕುಂದ್ರಾ ಮೇಲೆ ಇನ್ನಷ್ಟು ಕೇಸುಗಳು

    ಹಾಟ್‌ಶಾಟ್ಸ್‌ನಿಂದ ಬಂದ ಲಾಭವನ್ನು ಲಂಡನ್‌ಗೆ ವರ್ಗಾವಣೆ ಮಾಡಿರುವುದು ಹಣದ ಅಕ್ರಮ ವರ್ಗಾವಣೆ ಆಗಿದ್ದು ಆ ಕುರಿತಾಗಿ ಜಾರಿ ನಿರ್ದೇಶನಾಲಯ ಹಾಗೂ ಐಟಿ ಸಂಸ್ಥೆಗಳು ಸಹ ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸುವ ಸಾಧ್ಯತೆ ಇದೆ. ಈಗಾಗಲೇ ಮುಂಬೈ ಪೊಲೀಸರು ಆದಾಯ ತೆರಿಗೆ ಇಲಾಖೆಯ ನೆರವಿನೊಂದಿಗೆ ರಾಜ್ ಕುಂದ್ರಾದ ಖಾಸಗಿ ಖಾತೆ ಹಾಗೂ ಅವರ ಆರ್ಮ್ಸ್ ಪ್ರೈಂ ಲಿಮಿಟೆಡ್‌ ಹಾಗೂ ವಿಯಾನ್ ಎಂಟರ್‌ಪ್ರೈಸಸ್ ಸಂಸ್ಥೆಗಳ ಆಡಿಟ್ ಮಾಡಿಸಿದ್ದು ಇನ್ನಷ್ಟು ವಿಷಯಗಳು ಮುಂದಿನ ದಿನಗಳಲ್ಲಿ ಹೊರಬೀಳಲಿವೆ.

    English summary
    Raj Kundra's former business partner Saurab Kushwah said Raj Kundra started Hot Shot app to create and distribute indecent videos.
    Friday, September 17, 2021, 20:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X