»   » ನೆಲಸಮವಾಗಲಿರುವ ಬಾಲಿವುಡ್ ಸೂಪರ್ ಸ್ಟಾರ್ ಬಂಗಲೆ

ನೆಲಸಮವಾಗಲಿರುವ ಬಾಲಿವುಡ್ ಸೂಪರ್ ಸ್ಟಾರ್ ಬಂಗಲೆ

Posted By:
Subscribe to Filmibeat Kannada

ಬಾಲಿವುಡ್ ಚಿತ್ರೋದ್ಯಮದ ಮೊದಲ ಸೂಪರ್ ಸ್ಟಾರ್ ಮತ್ತು ಆ ಜಮಾನದ ಹಿಂದಿ ಚಿತ್ರರಂಗದ ಪ್ರಣಯರಾಜ ಎಂದೇ ಹೆಸರಾಗಿದ್ದ ರಾಜೇಶ್ ಖನ್ನಾ ವಾಸವಾಗಿದ್ದ ಬಂಗಲೆ ಇನ್ನೇನು ಕೆಲವೇ ದಿನಗಳಲ್ಲಿ ನೆಲಸಮವಾಗಲಿದೆ.

ರಾಜೇಶ್ ಖನ್ನಾ ಅವರಿಗೆ ಅದೃಷ್ಟದ ಬಂಗಲೆಯಾಗಿದ್ದ ಮುಂಬೈನ ಕಾರ್ಟರ್ ರಸ್ತೆಯಲ್ಲಿರುವ 'ಆಶೀರ್ವಾದ್' ಬಂಗಲೆಯನ್ನು ಮಂಗಳೂರು ಮೂಲದ ಉದ್ಯಮಿ ಶಶಿ ಶೆಟ್ಟಿ ಖರೀದಿಸಿದ್ದರು.

ಬಾಲಿವುಡ್ ಹಿಂದಿನ ಜಮಾನದ ನಟ ರಾಜೇಂದ್ರ ಕುಮಾರ್ ಅವರಿಂದ ರಾಜೇಶ್ ಖನ್ನಾ ಈ ಬಂಗಲೆಯನ್ನು ಖರೀದಿಸಿದ್ದರು. ರಾಜೇಂದ್ರ ಕುಮಾರ್ ತನ್ನ ಚಿತ್ರ ಸಾಲು ಸಾಲು ಸೋತಿದ್ದಾಗ ಈ ಮನೆಯನ್ನು 3.5 ಲಕ್ಷ ರೂಪಾಯಿಗೆ ಖನ್ನಾ ಅವರಿಗೆ ಮಾರಾಟ ಮಾಡಿದ್ದರು.

Rajesh Khanna's Mumbai Bungalow to be Demolished, Rebuilt by New Owner

ಆಶೀರ್ವಾದ್ ಬಂಗಲೆಯ ಜಾಗದಲ್ಲಿ ಮೂರು ಅಥವಾ ನಾಲ್ಕು ಅಂತಸ್ತಿನ ಕಟ್ಟಡ ತಲೆ ಎತ್ತಲಿದೆ. ಈಗಿರುವ ಬಂಗಲೆ ಐವತ್ತು ವರ್ಷಗಳಷ್ಟು ಹಳೆಯದಾಗಿರುವುದರಿಂದ ಈ ಬಂಗಲೆಯನ್ನು ನೆಲಸಮ ಮಾಡಲಿದ್ದೇವೆಂದು ಬಂಗಲೆಯ ಈಗಿನ ಮಾಲೀಕ ಶಶಿ ಶೆಟ್ಟಿ ಹೇಳಿದ್ದಾರೆ.

ಹೊಸದಾಗಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಶಶಿ ಶೆಟ್ಟಿ 'ವರ್ದಾನ್ ಆಶೀರ್ವಾದ್' ಎಂದು ಹೆಸರಿಡಲಿದ್ದಾರಂತೆ. 6500 ಚದರಡಿ ವಿಸ್ತೀರ್ಣದಲ್ಲಿರುವ ಈ ಬಂಗಲೆಯನ್ನು ಕೆಡವಿ, ಹೊಸ ಕಟ್ಟಡ ನಿರ್ಮಾಣದ ಕಾರ್ಯ ಇನ್ನೆರಡು ತಿಂಗಳಲ್ಲಿ ಆರಂಭವಾಗಲಿದೆ.

ಮುಂಬೈ ಕಾರ್ಟರ್ ರಸ್ತೆಯಲ್ಲಿ ಲ್ಯಾಂಡ್ ಮಾರ್ಕ್ ಆಗಿದ್ದ ಈ ಬಂಗಲೆಯನ್ನು ಉದ್ಯಮಿ ಶೆಟ್ಟಿ 95 ಕೋಟಿ ರೂಪಾಯಿಗೆ ಖರೀದಿಸಿದ್ದರು.

English summary
Bollywood film industries first Super Star Rajesh Khanna's Mumbai Bungalow to be Demolished, Rebuilt by new Owner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada