For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿಯನ್ನು ಅಪ್ಪಿಕೊಂಡು 'ಮೈ ಗರ್ಲ್' ಎಂದಿದ್ದ ರಾಜೀವ್: ಫೋಟೋ ಡಿಲೀಟ್ ಮಾಡಿದ್ದೇಕೆ?

  |

  ದಿವಂಗತ ನಟ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಕಳೆದ ವರ್ಷ ಜೂನ್ ತಿಂಗಳಿನಿಂದ ಸಂಕಷ್ಟಗಳ ಮೇಲೆ ಸಂಕಷ್ಟಗಳನ್ನು ಎದುರಿಸುತ್ತಾ ಬಂದಿದ್ದಾರೆ. ಇದೀಗ ರಿಯಾ ತುಸು ಸುಧಾರಾಸಿಕೊಂಡು, ಮನೆಯಿಂದ ಹೊರಗೆ ಕಾಣಿಸಿಕೊಳ್ಳುತ್ತಿದ್ದಾರೆ.

  ಪ್ರಿಯತಮ ಸುಶಾಂತ್ ಸಿಂಗ್ ಹಠಾತ್ ನಿಧನ, ಡ್ರಗ್ಸ್ ಜಾಲದ ನಂಟು, ಜೈಲು ವಾಸ, ಹೀಗೆ ಅನೇಕ ಕಾರಣಗಳಿಗೆ ರಿಯಾ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದರು. ರಿಯಾ ಚಕ್ರವರ್ತಿ ಸದ್ಯ ಜೈಲಿನಿಂದ ಹೊರಬಂದು ಕೆಲವು ದಿನಗಳಾಗಿದೆ. ಇತ್ತೀಚಿಗಷ್ಟೆ ರಿಯಾ ಗೆಳೆಯ ಮತ್ತು ಕುಟುಂಬದ ಆಪ್ತರಾಗಿರುವ ಎಂಟಿಬಿ ರೋಡೀಸ್ ಖ್ಯಾತಿಯ ರಾಜೀವ್ ಲಕ್ಷ್ಮಣ್ ಅವರನ್ನು ಭೇಟಿಯಾಗಿದ್ದಾರೆ.

  ರಿಯಾ ಚಕ್ರವರ್ತಿ ಮುಖದಲ್ಲಿ ಕೊನೆಗೂ ಮೂಡಿದ ನಗು

  ಸುಶಾಂತ್ ಸಾವಿನ ಬಳಿಕ ರಿಯಾ ಮುಖದಲ್ಲಿ ಮೊದಲ ನಗು

  ಸುಶಾಂತ್ ಸಾವಿನ ಬಳಿಕ ರಿಯಾ ಮುಖದಲ್ಲಿ ಮೊದಲ ನಗು

  ರಿಯಾ ಕಷ್ಟದ ಸಮಯದಲ್ಲಿ ಸಹಾಯ ಮಾಡಿದವರಲ್ಲಿ ರಾಜೀವ್ ಲಕ್ಷ್ಮಣ್ ಕೂಡ ಒಬ್ಬರು. ಹಾಗಾಗಿ ಜೈಲಿನಿಂದ ಬಂದ ಬಳಿಕ ರಿಯಾ ರಾಜೀವ್ ಅವರನ್ನು ಭೇಟಿಯಾಗಿದ್ದಾರೆ. ಸುಶಾಂತ್ ಸಾವಿನ ಬಳಿಕ ರಿಯಾ ಮೊದಲ ಬಾರಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಸಂತೋಷವಾಗಿ, ನಗುಮುಖದಲ್ಲಿ ಕಾಣಿಸಿಕೊಂಡಿದ್ದಾರೆ.

  'ನನ್ನ ಗರ್ಲ್' ಎಂದು ಪೋಸ್ಟ್ ಮಾಡಿದ ರಾಜೀವ್

  'ನನ್ನ ಗರ್ಲ್' ಎಂದು ಪೋಸ್ಟ್ ಮಾಡಿದ ರಾಜೀವ್

  ರಿಯಾ ಭೇಟಿಯಾದ ಖುಷಿಯಲ್ಲಿ ರಾಜೀವ್ ಲಕ್ಷ್ಮಣ್ ಸಂತೋಷದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಿಯಾ ಚಕ್ರವರ್ತಿಯನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಜೊತೆಗೆ 'ನನ್ನ ಗರ್ಲ್' ಎಂದು ಕ್ಯಾಪ್ಷನ್ ನೀಡಿದ್ದಾರೆ. ಪೋಸ್ಟ್ ಕೆಳಗೆ ಕಾಮೆಂಟ್ ವಿಭಾಗವನ್ನು ಹೈಡ್ ಮಾಡಿದ್ದರು.

  ಆಕೆ ಪ್ರತಿಭಾವಂತೆ, ಮತ್ತೆ ಪುಟಿದೇಳುತ್ತಾಳೆ: ರಿಯಾ ಚಕ್ರವರ್ತಿ ಬಗ್ಗೆ 'ಚೆಹ್ರೆ' ನಿರ್ದೇಶಕ ರೂಮಿ ಮಾತು

  ಪೋಸ್ಟ್ ಡಿಲೀಟ್ ಮಾಡಿದ ರಾಜೀವ್

  ಪೋಸ್ಟ್ ಡಿಲೀಟ್ ಮಾಡಿದ ರಾಜೀವ್

  ಫೋಟೋ ಪೋಸ್ಟ್ ಮಾಡಿದ ಕೆಲವೇ ಕ್ಷಣದಲ್ಲಿ ರಾಜೀವ್ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಫೋಟೋ ಡಿಲೀಟ್ ಮಾಡಿರುವುದು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಕೆಲವೇ ಕ್ಷಣದಲ್ಲಿ ಮತ್ತೊಂದು ಪೋಸ್ಟ್ ಮಾಡಿ, ನಾನು ಬಳಸಿದ ಕೆಲವು ಪದಗಳಿಂದ ಅನವಶ್ಯಕ ತೊಂದರೆಯಾಗುತ್ತಿದೆ ಎಂದು ಹೇಳಿದ್ದಾರೆ.

  ನಿನ್ನೆ ಬೇಜಾರಾಗಿತ್ತು, ಇವತ್ತು ತುಂಬಾ ಖುಷಿಯಾಯ್ತು | Garuda Ram | Filmibeat Kannada
  ಬೇಜವಾಬ್ದಾರಿಯಿಂದ ಪದ ಬಳಸಿದೆ

  ಬೇಜವಾಬ್ದಾರಿಯಿಂದ ಪದ ಬಳಸಿದೆ

  'ನಾನು ಬೇಜವಾಬ್ದಾರಿಯಿಂದ ಬಳಸಿದ ಕೆಲವು ಪದಗಳಿಂದ ಅನವಶ್ಯಕ ತೊಂದರೆಯಾಗುತ್ತಿದೆ. ನನ್ನ ಆತ್ಮೀಯ ರಿಯಾ ಚಕ್ರವ ರ್ತಿ ಹಳೆಯ ಗೆಳತಿ. ರಿಯಾಳನ್ನು ಮತ್ತೆ ಭೇಟಿಯಾಗಿದ್ದು, ತುಂಬಾ ಸಂತಸವಾಗಿದೆ. ಯಾವಾಗಲು ಚೆನ್ನಾಗಿರಲಿ ಎಂದು ಆಶಿಸುತ್ತೇನೆ' ಎಂದು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ನಲ್ಲಿ ರಾಜೀವ್ ನನ್ನ ಹುಡುಗಿ ಎಂದು ಬಳಸಿದ ಪದದ ಬಗ್ಗೆ ಯಾರಾದರೂ ಆಕ್ಷೇಪ ಎತ್ತಿದ್ದಿದ್ರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

  English summary
  Rajiv Lakshman Delete photo with rhea Chakraborty for unnecessary trouble with irresponsible word.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X