For Quick Alerts
  ALLOW NOTIFICATIONS  
  For Daily Alerts

  ಅಮೀರ್ ಖಾನ್, ಸಂಜಯ್ ದತ್ ನಂತರ ಶಾರುಖ್ ಕೈ ಹಿಡಿದ 'ಪಕ್ಕಾ ಹಿಟ್' ನಿರ್ದೇಶಕ

  |

  ಬಾಲಿವುಡ್‌ನ ಹಲವು ಪ್ರತಿಭಾವಂತ ನಿರ್ದೇಶಕರನ್ನು ಹೊಂದಿದೆ. ಒಬ್ಬರಿಗಿಂತಲೂ ಒಬ್ಬರು ಭಿನ್ನ ಆದರೆ ಪಕ್ಕಾ ಹಿಟ್ ಸಿನಿಮಾವನ್ನೇ ನೀಡಬಲ್ಲ ನಿರ್ದೇಶಕ ಎಂದು ಹೆಸರಾಗಿರುವುದು ರಾಜ್‌ಕುಮಾರ್ ಇರಾನಿ.

  ಅನುರಾಗ್ ಕಶ್ಯಪ್, ಸಂಜಯ್ ಲೀಲಾ ಬನ್ಸಾಲಿ, ಕರಣ್ ಜೋಹರ್, ಇಮ್ತಿಯಾಜ್ ಅಲಿ ಇವರೆಲ್ಲರಿಗೂ ಅವರದ್ದೇ ಆದ ಸಿನಿಮಾ ಮೇಕಿಂಗ್ ಮಾದರಿ ಇದೆ. ಎಲ್ಲರಿಗೂ ಅವರದ್ದೇ ಆದ ಅಭಿಮಾನಿವರ್ಗವಿದೆ. ಆದರೆ ರಾಜ್‌ಕುಮಾರ್ ಇರಾನಿ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿವರ್ಗವಿಲ್ಲ ಬದಲಿಗೆ ಅವರ ಸಿನಿಮಾವನ್ನು ಎಲ್ಲಾ ವರ್ಗದ, ರೀತಿಯ ಜನ ಮುಗಿಬಿದ್ದು ನೋಡುತ್ತಾರೆ. ಅಂಥಹಾ ಕತೆಗಳನ್ನು ಕಟ್ಟಿಕೊಡುತ್ತಾರೆ ಅವರು.

  ಅಮೀರ್ ಖಾನ್, ಸಂಜಯ್ ದತ್, ರಣಬೀರ್ ಕಪೂರ್ ಜೊತೆಗೆ ಸಾಲು-ಸಾಲು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ರಾಜ್‌ಕುಮಾರ್ ಹಿರಾನಿ ಈಗ ಶಾರುಖ್ ಖಾನ್ ಜೊತೆಗೆ ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ.

  ಪಂಜಾಬಿ ವ್ಯಕ್ತಿ ಕೆನಡಾಕ್ಕೆ ಪ್ರಯಾಣಿಸುವ ಬಗ್ಗೆ ಸಿನಿಮಾ

  ಪಂಜಾಬಿ ವ್ಯಕ್ತಿ ಕೆನಡಾಕ್ಕೆ ಪ್ರಯಾಣಿಸುವ ಬಗ್ಗೆ ಸಿನಿಮಾ

  ಪಂಜಾಬ್‌ನ ವ್ಯಕ್ತಿ ಕೆನಾಡಕ್ಕೆ ಪ್ರಯಾಣ ಮಾಡುವ ಕತೆಯನ್ನು ಈ ಸಿನಿಮಾ ಹೊಂದಿರಲಿದೆಯಂತೆ. ಈ ವಲಸೆ ಸಮಯ ನಾಯಕ ಅನುಭವಿಸುವ ಕಷ್ಟಗಳು, ಭೇಟಿ ಮಾಡುವ ಜನ, ಸರ್ಕಾರಿ ನಿಯಮಗಳು ಎಲ್ಲದರ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲಲಿದೆ.

  ನಾಯಕಿಯಾಗಿ ತಾಪ್ಸಿ ಪನ್ನು ಆಯ್ಕೆ?

  ನಾಯಕಿಯಾಗಿ ತಾಪ್ಸಿ ಪನ್ನು ಆಯ್ಕೆ?

  ಸಿನಿಮಾಕ್ಕೆ ನಾಯಕಿಯಾಗಿ ತಾಪ್ಸಿ ಪನ್ನು ಆಯ್ಕೆ ಆಗಿದ್ದಾರೆ ಎನ್ನಲಾಗಿದೆ ಆದರೆ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಇಲ್ಲ. ಈ ಬಗ್ಗೆ ಮಾತನಾಡಿರುವ ತಾಪ್ಸಿ, 'ನಾನು ಈ ಸಿನಿಮಾ ಸಹಿ ಮಾಡಿದ ದಿನ ನನ್ನ ಮನೆಯ ತಾರಸಿ ಮೇಲೆ ಖುಷಿಯಿಂದ ಕಿರುಚುತ್ತೇನೆ, ಯಾರಿಗೆ ತಾನೆ ಶಾರುಖ್ ಜೊತೆ ರೊಮಾನ್ಸ್ ಮಾಡಲು ಇಷ್ಟವಿರುವುದಿಲ್ಲ ಹೇಳಿ' ಎಂದಿದ್ದಾರೆ.

  ಸಿನಿಮಾದಲ್ಲಿ ಇರುವುದು ಎಲ್ಲವೂ ಸತ್ಯ ಅಲ್ಲ ಅಂದ್ರು ರಿಯಲ್ ಲೈಫ್ ಹೀರೊ ಗೋಪಿನಾಥ್ | Filmibeat Kannada
  ಶಾರುಖ್ ಖಾನ್ ಕೈಲಿವೆ ಹಲವು ಸಿನಿಮಾಗಳು

  ಶಾರುಖ್ ಖಾನ್ ಕೈಲಿವೆ ಹಲವು ಸಿನಿಮಾಗಳು

  ಶಾರುಖ್ ಖಾನ್ ಪ್ರಸ್ತುತ ಪಠಾಣ್ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾದ ನಂತರ ತಮಿಳಿನ ಅಟ್ಟಿಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಧೂಮ್ 4, ಆಪರೇಷನ್ ಕುಕ್ರಿ ಸಿನಿಮಾಗಳಲ್ಲಿ ಸಹ ನಟಿಸಲಿದ್ದಾರೆ. ಈ ನಡುವೆ ರಾಜ್‌ಕುಮಾರ್ ಸಿನಿಮಾದಲ್ಲಿಯೂ ಸಹ ನಟಿಸಲಿದ್ದಾರೆ.

  English summary
  Rajkumar Hirani doing his next movie with Sharukh Khan. Movie will be based on immigration problem.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X