»   » ರಾಜ್ ಕುಮಾರ್ ರಾವ್ ಅಭಿನಯದ ಚಿತ್ರ ಆಸ್ಕರ್ ಸ್ಪರ್ಧೆಗೆ ಎಂಟ್ರಿ

ರಾಜ್ ಕುಮಾರ್ ರಾವ್ ಅಭಿನಯದ ಚಿತ್ರ ಆಸ್ಕರ್ ಸ್ಪರ್ಧೆಗೆ ಎಂಟ್ರಿ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಾಜ್ ಕುಮಾರ್ ರಾವ್ ಅಭಿನಯದ ನ್ಯೂಟನ್ ಹಿಂದಿ ಚಿತ್ರವು ಅಧಿಕೃತವಾಗಿ ಭಾರತದಿಂದ ಆಸ್ಕರ್ 2018 ಪ್ರಶಸ್ತಿ ಸ್ಪರ್ಧೆಗೆ ಎಂಟ್ರಿ ಪಡೆದಿದೆ.

ನಕ್ಸಲ್ ಪೀಡಿತ ಪ್ರದೇಶದಲ್ಲಿ ಚುನಾವಣಾಧಿಕಾರಿಯಾಗಿ ನ್ಯೂಟನ್ ಕುಮಾರ್ ಎಂಬ ಪಾತ್ರದಲ್ಲಿ ರಾಜ್ ಕುಮಾರ್ ಅವರು ನಿರ್ವಹಿಸಿದ್ದಾರೆ. ಚತ್ತೀಸ್ ಗಢದಲ್ಲಿ ನಕ್ಸಲ್ ಹಾವಳಿ ನಡುವೆ ಪ್ರಜಾಪ್ರಭುತ್ವದ ಮಹತ್ವವನ್ನು ಎತ್ತಿ ಹಿಡಿಯುವ ಪಾತ್ರದಲ್ಲಿ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.

Rajkummar Rao-starrer Newton is India's Official Entry For Oscars

ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಕೆಟಗರಿಯಲ್ಲಿ ನ್ಯೂಟನ್ ಚಿತ್ರ ಸ್ಪರ್ಧಿಸಲಿದೆ. ಆಸ್ಕರ್ ಸ್ಪರ್ಧೆಗೆ ಭಾರತದ ಅಧಿಕೃತ ಎಂಟ್ರಿ ಇದಾಗಿದೆ.


ನ್ಯೂಟನ್ ಚಿತ್ರದ ಜತೆಗೆ ರುಬೆನ್ ಎಸ್ಟುಲಂಡ್ ನ 'ದಿ ಸ್ಕ್ವೇರ್', ಫತಿಹಾ ಅಕಿನ್ ರ 'ಇನ್ ದಿ ಫೇಡ್ (ಜರ್ಮನಿ), ಏಂಜೆಲಿನಾ ಜೋಲಿಯ 'ಫಸ್ಟ್ ದೇ ಕಿಲ್ಡ್ ಮೈ ಫಾದರ್ ಫ್ರಮ್ (ಕಾಂಬೋಡಿಯಾ), ಸೆಬಾಸ್ಟೀನ್ ಲೆಲಿಯೋರ 'ಎ ಫ್ಯಾಂಟಾಸ್ಟಿಕ್ ವುಮೆನ್ (ಚಿಲಿ), ಫರ್ಹಾನ್ ಅಲಂರ ಸಾವನ್(ಪಾಕಿಸ್ತಾನ), ರಾಬಿನ್ ಕಾಂಪಿಲ್ಲೋರ ಬಿಪಿಎಂ: ಬೀಟ್ಸ್ ಪರ್ ಮಿನಿಟ್ಸ್ (ಫ್ರಾನ್ಸ್) ಇನ್ನಿತರ ಚಿತ್ರಗಳು ಸ್ಪರ್ಧೆಗಳಿವೆ.
ದೃಶ್ಯಂ ಫಿಲಂಸ್ ನಿರ್ಮಾಣ, ಎರೋಸ್ ಎಂಟರ್ಟ್ಮೆಂಟ್ ಹಂಚಿಕೆಯ ಈ ಚಿತ್ರದಲ್ಲಿ ರಾಜ್ ಕುಮಾರ್ ರಾವ್ ಅವರಲ್ಲದೆ ಪಂಕಜ್ ತ್ರಿಪಾಠು, ಅಂಜಲಿ ಪಾಟೀಲ್ ಹಾಗೂ ರಘುವೀರ್ ಯಾದವ್ ಅವರು ನಟಿಸಿದ್ದಾರೆ.

ನ್ಯೂಟನ್ ಚಿತ್ರ ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 67ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲಿಗೆ ಪ್ರೀಮಿಯರ್ ಶೋ ಕಂಡ ಈಗ ಮಾರ್ಚ್ 04ರಂದು ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ 90ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್)ಗಾಗಿ ಸ್ಪರ್ಧೆಯಲ್ಲಿದೆ.

English summary
Rajkummar Rao and Anjali Patil-starrer Newton has been selected as India’s official entry for the Best Foreign language category at the Oscars, the Film Federation of India announced on Friday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X