For Quick Alerts
  ALLOW NOTIFICATIONS  
  For Daily Alerts

  ಅಯ್ಯೋ ಪಾಪ...ರಾಖಿ ಸಾವಂತ್ ಗೆ ಸನ್ನಿ ಲಿಯೋನ್ ಹೀಗೆ ಮಾಡಬಾರದಿತ್ತು.!

  By Bharath Kumar
  |

  ಬಾಲಿವುಡ್ ನಲ್ಲಿ ನಟಿಯರ ಜಗಳ ಸಾಮಾನ್ಯ. ಸಿನಿಮಾ ವಿಚಾರದಲ್ಲಿ ಮಾತ್ರವಲ್ಲದೇ ವೈಯಕ್ತಿಕ ಸಂಗತಿಗಳ ವಿಚಾರಕ್ಕೂ ನಟಿಯರ ಬಹಿರಂಗವಾಗಿ ಕಾದಾಡಿರುವುದುಂಟು. ಇದೀಗ, ಬಿ-ಟೌನ್ ಇಂಡಸ್ಟ್ರಿಯಲ್ಲಿ 'ಕಾಂಟ್ರವರ್ಸಿ ಕ್ವೀನ್' ಅಂತಾಲೆ ಕರೆಸಿಕೊಳ್ಳುವ ರಾಖಿ ಸಾವಂತ್, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಬಗ್ಗೆ ಗಂಭೀರ ಆರೋಪವನ್ನ ಮಾಡಿದ್ದಾರೆ.

  ಸಿನಿ ಲೋಕದ ಹಾಟ್ ಬಾಂಬ್ ಸನ್ನಿ ಲಿಯೋನ್ ವಿರುದ್ಧ ಸ್ಪೋಟಕ ಆರೋಪ ವಹಿಸಿದ್ದಾಳೆ ರಾಖಿ. ಈ ಆರೋಪದಿಂದ ಸನ್ನಿ ಲಿಯೋನ್ ವ್ಯಕ್ತಿತ್ವದ ಬಗ್ಗೆ ಅವರ ಅಭಿಮಾನಿಗಳು ಮತ್ತಷ್ಟು ಕೀಳು ಮಟ್ಟದಲ್ಲಿ ಯೋಚನೆ ಮಾಡುವಂತಾಗಿದೆ.

  ಪ್ರಿಯಾ ವಾರಿಯರ್ ಮುಂದೆ ಡಮ್ಮಿ ಆಗೋದಳು ಸನ್ನಿ!

  ಆದ್ರೆ, ಇದು ಎಷ್ಟು ನಿಜಾನೋ ಎಷ್ಟು ಸತ್ಯವೋ ಗೊತ್ತಿಲ್ಲ. ರಾಖಿ ಮಾತ್ರ ಇದು ಸನ್ನಿ ಲಿಯೋನ್ ಮಾಡಿಸಿರುವ ಕೆಲಸನೇ ಅಂತಿದ್ದಾಳೆ. ಈ ಬಗ್ಗೆ ಸನ್ನಿ ಯಾವ ಪ್ರತಿಕ್ರಿಯೆ ಕೂಡ ಕೊಟ್ಟಿಲ್ಲ. ಹೀಗಾಗಿ, ರಾಖಿ ಮತ್ತು ಸನ್ನಿ ನಡುವಿನ ಮತ್ತೊಂದು ಹಂತದ ವಿವಾದ ಎನ್ನಬಹುದು. ಅಷ್ಟಕ್ಕೂ, ಸನ್ನಿ ಬಗ್ಗೆ ರಾಖಿ ಮಾಡಿರುವ ಆರೋಪವೇನು.? ಮುಂದೆ ಓದಿ....

  ಸನ್ನಿ ಲಿಯೋನ್ ಸಂಭಾವನೆ ಕೇಳಿ ಕಂಗಲಾದ್ರು ನಿರ್ಮಾಪಕರು | Filmibeat Kannada
  ಪೋರ್ನ್ ಇಂಡಸ್ಟ್ರಿಯಿಂದ ರಾಖಿಗೆ ಕರೆ

  ಪೋರ್ನ್ ಇಂಡಸ್ಟ್ರಿಯಿಂದ ರಾಖಿಗೆ ಕರೆ

  ಬಾಲಿವುಡ್ ನ ಬೋಲ್ಡ್ ನಟಿ ರಾಖಿ ಸಾವಂತ್ ಗೆ ಪೋರ್ನ್ ಇಂಡಸ್ಟ್ರಿಯಿಂದ ದೂರವಾಣಿ ಕರೆಗಳು ಬರುತ್ತಿದೆಯಂತೆ. ಪೋರ್ನ್ ಸಿನಿಮಾದಲ್ಲಿ ನಟಿಸಿ, ನಿಮಗೆ ಎಷ್ಟು ಸಂಭಾವನೆ ಬೇಕಾದರೂ ನೀಡುತ್ತೇವೆ ಎಂದು ಅನಾಮಿಕರು ಫೋನ್ ಮಾಡ್ತಿದ್ದಾರಂತೆ. ನನ್ನ ವೈದ್ಯಕೀಯ ಪ್ರಮಾಣಪತ್ರ ಮತ್ತು ನನ್ನ ವಿಡಿಯೋಗಳನ್ನ ಕಳುಹಿಸಲು ಬೇಡಿಕೆ ಇಡುತ್ತಿದ್ದಾರೆ ಎಂದು ಸ್ವತಃ ರಾಖಿ ಸಾವಂತ್ ಈಗ ಖಾಸಗಿ ವೆಬ್ ಸೈಟ್ ನಲ್ಲಿ ಹೇಳಿಕೊಂಡಿದ್ದಾಳೆ.

  ಇದಕ್ಕೆ ಕಾರಣ ಸನ್ನಿ ಲಿಯೋನ್

  ಇದಕ್ಕೆ ಕಾರಣ ಸನ್ನಿ ಲಿಯೋನ್

  ನನಗೆ ಪೋರ್ನ್ ಇಂಡಸ್ಟ್ರಿಯಿಂದ ಫೋನ್ ಬರಲು ಸನ್ನಿ ಲಿಯೋನ್ ಕಾರಣ. ಸನ್ನಿ ಲಿಯೋನ್ ಪೋರ್ನ್ ಇಂಡಸ್ಟ್ರಿಯವರಿಗೆ ನನ್ನ ನಂಬರ್ ಕೊಟ್ಟಿದ್ದಾಳೆ. ಆದ್ದರಿಂದ ಅವರೆಲ್ಲ ನನಗೆ ಸತತವಾಗಿ ಫೋನ್ ಮಾಡಿ ಕಾಡುತ್ತಿದ್ದಾರೆ. ನಾನು ಅವರನ್ನ ಕೇಳಿದೆ, ನಿಮಗೆ ನನ್ನ ನಂಬರ್ ಹೇಗೆ ಸಿಕ್ತು ಅಂತ. ಅದಕ್ಕೆ ಅವರು ಸನ್ನಿ ಹೆಸರ ಹೇಳಿದರು ಎಂದು ಸನ್ನಿ ಮೇಲೆ ಹರಿಹಾಯ್ದಿದ್ದಾರೆ.

  ಪೋರ್ನ್ ಸಿನಿಮಾ ಮಾಡಲ್ಲ

  ಪೋರ್ನ್ ಸಿನಿಮಾ ಮಾಡಲ್ಲ

  ''ನನಗೆ ಆ ಇಂಡಸ್ಟ್ರಿಯ ಬಗ್ಗೆ ಆಸಕ್ತಿ ಕೂಡ ಇಲ್ಲ. ಒಂದು ವೇಳೆ ಸಾಯುತ್ತೇನೆ ಹೊರತು ಪೋರ್ನ್ ಸಿನಿಮಾ ಅಂತೂ ಮಾಡಲ್ಲ. ನಾನು ಭಾರತೀಯ ನಟಿ. ನನಗೆ ನನ್ನ ಸಂಸ್ಕ್ರತಿ ಬಗ್ಗೆ ಗೌರವ ಇದೆ'' ಎಂದು ಕಾಂಟ್ರವರ್ಸಿ ಕ್ವೀನ್ ಸ್ಪೋಟಕ ಸುದ್ದಿಯನ್ನ ಹೊರಹಾಕಿದ್ದಾರೆ.

  ರಾಖಿ ಸಾವಂತ್ ತುಂಡುಡುಗೆಯ ಮೇಲೆ ಪ್ರಧಾನಿ ಮೋದಿ ಫೋಟೋ!

  ಸನ್ನಿ ಅವಳಿ ಮಕ್ಕಳಿಗೆ ಶುಭಕೋರಿದ ರಾಖಿ

  ಸನ್ನಿ ಅವಳಿ ಮಕ್ಕಳಿಗೆ ಶುಭಕೋರಿದ ರಾಖಿ

  ಇನ್ನು ಸನ್ನಿ ಲಿಯೋನ್ ಅವಳಿ ಮಕ್ಕಳಿಗೆ ತಾಯಿಯಾಗಿರುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ರಾಖಿ ಸಾವಂತ್ ವಿಡಿಯೋ ಮಾಡಿ ಸನ್ನಿ ಬಗ್ಗೆ ಹಾಡಿಹೊಗಳಿದ್ದಳು. ಬಾಡಿಗೆ ತಾಯಿಯ ಮೂಲಕ ಅವಳಿ ಜವಳಿ ಮಕ್ಕಳನ್ನ ಪಡೆದಿರುವ ಸನ್ನಿ-ಡೇನಿಯಲ್ ದಂಪತಿಗೆ ರಾಖಿ ಶುಭಕೋರಿದ್ದರು.

  ಮೊದಲಿನಿಂದಲೂ ಸನ್ನಿ ಕಂಡ್ರೆ ರಾಖಿಗೆ ಆಗಲ್ಲ

  ಮೊದಲಿನಿಂದಲೂ ಸನ್ನಿ ಕಂಡ್ರೆ ರಾಖಿಗೆ ಆಗಲ್ಲ

  ಮಾಜಿ ನೀಲಿತಾರೆ ಸನ್ನಿ ಲಿಯೋನ್ ಬಾಲಿವುಡ್ ಗೆ ಪ್ರವೇಶ ಮಾಡಿದಾಗನಿಂದಲೂ ರಾಖಿ ಸಾವಂತ್ ವಿರೋಧಿಸುತ್ತಾ ಬಂದಿದ್ದಾರೆ. ನಟನೆ, ಡ್ಯಾನ್ಸ್, ವೈಯಕ್ತಿಕ ವಿಚಾರಗಳಲ್ಲೂ ಸನ್ನಿಯನ್ನ ನಿಂದಿಸುತ್ತಾ ಬಂದಿದ್ದಾಳೆ. ಸನ್ನಿ ಬರುವುದಕ್ಕೆ ಮುಂದೆ ರಾಖಿಗೆ ಹೆಚ್ಚು ಸಿನಿಮಾ ಆಫರ್ ಗಳು ಬರುತ್ತಿದ್ದವು. ಆದ್ರೆ, ಸನ್ನಿ ಆಗಮನದ ನಂತರ ರಾಖಿಗೆ ಅವಕಾಶ ಕಡಿಮೆ ಆಯ್ತು. ಇದರಿಂದ ರಾಖಿ ಮತ್ತಷ್ಟು ಮುನಿಸಿಕೊಂಡಿದ್ದಳು. ಅದರ ಮತ್ತೊಂದು ಹಂತ ಈಗ ಹೊಸ ಆರೋಪ ಅನಿಸುತ್ತಿದೆ. ಆದ್ರೆ, ಈ ಬಗ್ಗೆ ಸನ್ನಿ ಲಿಯೋನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  English summary
  We all are aware of Rakhi Sawant’s love-hate relationship with Sunny Leone. Ever since, Sunny has made an entry into Bollywood, she has been making controversial statements about her or against her. This time again, she alleged at Ms. Leone, saying she gave her number to the adult entertainment industry and it’s serious.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X