For Quick Alerts
  ALLOW NOTIFICATIONS  
  For Daily Alerts

  ಮೆಟ್ರೋ ಪ್ರಯಾಣಿಕರಿಂದ ನಟಿ ರಾಖಿ ಸಾವಂತ್ 'ಪತಿ'ಗೆ ಬಿತ್ತು ಗೂಸಾ

  |

  ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ನಖಲಿ ಪತಿ ದೀಪಕ್ ಕಲಾಲ್ ಮೆಟ್ರೋದಲ್ಲಿ ಸಹ ಪ್ರಯಾಣಿಕರಿಂದ ಸರಿಯಾಗಿ ಒದೆ ತಿಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ವಿಡಿಯೋಗಳ ಮೂಲಕ ಖ್ಯಾತಿಗಳಿಸಿರುವ ದೀಪಕ್, ಇತ್ತೀಚಿಗೆ ರಾಖಿ ಸಾವಂತ್ ಮದುವೆ ಆಗಿರುವುದಾಗಿ ಹೇಳಿಕೊಂಡು ಸುದ್ದಿಯಲ್ಲಿದ್ದರು.

  ಆಗಾಗ ವಿಚಿತ್ರ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ದೀಪಕ್ ಗೆ ಸಾಕಷ್ಟು ವಿರೋಧವು ವ್ಯಕ್ತವಾಗುತ್ತಿರುತ್ತದೆ. ಕೆಲವೊಮ್ಮೆ ಸಾರ್ವಜನಿಕರಿಂದ ಹೊಡೆಸಿಕೊಂಡ ಉದಾಹರಣೆಯೂ ಇದೆ.

  ಕೊನೆಗೂ ಮದುವೆ ಆಗಿದೆ ಎಂದು ಒಪ್ಪಿಕೊಂಡ ರಾಕಿ ಸಾವಂತ್ಕೊನೆಗೂ ಮದುವೆ ಆಗಿದೆ ಎಂದು ಒಪ್ಪಿಕೊಂಡ ರಾಕಿ ಸಾವಂತ್

  ದೀಪಕ್ ಮೆಟ್ರೋದಲ್ಲಿ ಚಲಿಸುತ್ತಿರುವಾಗ ಸಹ ಪ್ರಯಾಣಿಕರಿಂದ ಒದೆ ತಿನ್ನುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಮೆಟ್ರೋ ಒಳಗೆ ನಿಂತಿರುವ ಮಹಿಳೆಯೊಬ್ಬರು ದೀಪಕ್ ಅನುಮತಿ ಇಲ್ಲದೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ದೀಪಕ್, ಅನುಮತಿ ಇಲ್ಲದೆ ಹೇಗೆ ಫೋಟೋ ಕ್ಲಿಕ್ಕಿಸಿಕೊಂಡಿರಿ ಎಂದು ಕೂಗಾಡುತ್ತಾರೆ. ಅಲ್ಲದೆ ಮಹಿಳೆ ವಿರುದ್ಧ ಕೆಟ್ಟಪದಗಳನ್ನು ಬಳಸಿ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಇದರಿಂದ ರೊಚ್ಚಿಗೆದ್ದ ಮಹಿಳೆ ದೀಪಿಕ್ ಗೆ ಸರಿಯಾಗಿ ಒದೆ ನೀಡುತ್ತಾರೆ. ಈ ಘಟನೆ ನಡೆಯುತ್ತಿದ್ದಂತೆ ಪಕ್ಕದಲ್ಲೆ ಇದ್ದ ಪ್ರಯಾಣಿಕರೆಲ್ಲರು ದೀಪಕ್ ಕತ್ತಿನಪಟ್ಟಿ ಹಿಡಿದು ಸರಿಯಾಗಿ ಥಳಿಸಿದ್ದಾರೆ.

  ಈ ವಿಡಿಯೋವನ್ನು ದೀಪಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಒದೆ ನೀಡಿದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. "ದಯವಿಟ್ಟು ಅಭಿಮಾನಿಗಳೆ ನನಗೆ ಸಹಾಯ ಮಾಡಿ" ಎಂದು ಕೇಳಿಕೊಂಡಿದ್ದಾರೆ. ನಟಿ ರಾಖಿ ಸಾವಂತ್ ಈಗ ಮದುವೆಯಾಗಿ ವಿದೇಶಕ್ಕೆ ಹೋಗಿದ್ದಾರೆ. ಆದರೆ ಪತಿ ಯಾರು ಎನ್ನುವುದನ್ನು ಮಾತ್ರ ಇದುವರೆಗೂ ರಿವೀಲ್ ಮಾಡಿಲ್ಲ.

  English summary
  Bollywood actress Rakhi Sawant fake husband Deepak Kalal beatn by woman inside Delhi Metro.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X