For Quick Alerts
  ALLOW NOTIFICATIONS  
  For Daily Alerts

  ಮೈಸೂರು ಹುಡುಗ ರಾಖಿ ಸಾವಂತ್ ಹೊಸ ಬಾಯ್ ಫ್ರೆಂಡ್ ಆಗಿದ್ದೇಗೆ?

  |

  ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಸಿನಿಮಾ ಮತ್ತು ಅಭಿನಯಕ್ಕಿಂತ ಹೆಚ್ಚಾಗಿ ಕಾಂಟ್ರವರ್ಸಿಗಳಿಂದಲೆ ಸುದ್ದಿ ಆಗುತ್ತಾರೆ. ಈಕೆಯನ್ನು ಬಾಲಿವುಡ್ ವಿವಾದಗಳ ರಾಣಿ ಅಂತಲೇ ಕರೆಯಲಾಗುತ್ತದೆ. ಅಷ್ಟರ ಮಟ್ಟಿಗೆ ಈಕೆ ವಿವಾದಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತಾರೆ. ಅದರಲ್ಲೂ ಮದುವೆ, ಲವ್, ಬಾಯ್ ಫ್ರೆಂಡ್ ವಿಚಾರದಲ್ಲಂತೂ ಆಗಾಗ್ಗೆ ಸುದ್ದಿ ಆಗುತ್ತಲೇ ಇರುತ್ತಾರೆ.

  ಸದಾ ಮದುವೆ ವಿಚಾರಲ್ಲಿ ಸುದ್ದಿ ಆಗುತ್ತಾ ಇರುತ್ತಾರೆ. ಇತ್ತೀಚೆಗೆ ರಾಖಿ ಸಾವಂತ್ ತಮ್ಮ ಮಾಜಿ ಪತಿ ರಿತೇಶ್ ಸಿಂಗ್ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗಿದ್ದರು. ಮದುವೆ ಆಗಿರುವ ವಿಚಾರವನ್ನು ಹಲವು ದಿನಗಳ ಕಾಲ ಗುಟ್ಟಾಗಿ ಇಟ್ಟಿದ್ದರು. ಬಿಗ್ ಬಾಸ್‌ನಿಂದ ಬಂದ ಬಳಿಕ ಮದುವೆ ಆಗಿಲ್ಲ ಎಂದಿದ್ದರು. ಈಗ ಮತ್ತೆ ರಾಖಿ ಸಾವಂತ್ ತಮ್ಮ ಲವ್ ವಿಚಾರದಲ್ಲಿ ಸುದ್ದಿ ಆಗುತ್ತಾ ಇದ್ದಾರೆ.

  ಬೇಸರದಲ್ಲಿ ನಟಿ ರಾಖಿ ಸಾವಂತ್!ಬೇಸರದಲ್ಲಿ ನಟಿ ರಾಖಿ ಸಾವಂತ್!

  ಹೌದು ರಾಖಿ ಸಾವಂತ್‌ಗೆ ಈಗ ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದಾರೆ. ರಾಖಿ ಸಾವಂತ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದರೆ ನೀವೂ ನಂಬಲೇ ಬೇಕು. ಇತ್ತೀಚೆಗೆ ತಮ್ಮ ಬಾಯ್ ಫ್ರೆಂಡ್ ಕೊಡಿಸಿದ್ದ ದುಬಾರಿ ಬಿಎಂಡಬ್ಲ್ಯೂ ಕಾರಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ಆ ದುಬಾರಿ ಹುಡುಗ ಯಾರು ಎನ್ನುವುದನ್ನು ಪರಿಚಯಿಸಿದ್ದಾರೆ.

  ರಾಖಿ ಸಾವಂತ್ ತಮ್ಮ ಹೊಸ ಸಂಗಾತಿ ಆದಿಲ್ ಖಾನ್ ದುರಾನಿ ಅವ್ರನ್ನು ಮಾಧ್ಯಮದ ಮುಂದೆ ಪರಿಚಯಿಸಿದ್ದಾರೆ. ಈತ ಮೈಸೂರಿನ ಹುಡುಗ ಎನ್ನುವುದನ್ನೂ ರಾಖಿ ಸಾವಂತ್ ಹೇಳಿಕೊಂಡಿದ್ದಾರೆ. ಆದಿಲ್ ಖಾನ್, ರಾಖಿ ಸಾವಂತ್ ಜೊತೆಗೆ ಕೊನೆಯ ತನಕ ಇರುವುದಾಗಿ ಹೇಳಿದ್ದಾರಂತೆ. ಹಾಗಾಗಿ ಈತನೆ ತನ್ನ ಬಾಳ ಸಂಗಾತಿ ಎನ್ನುತ್ತಿದ್ದಾಳೆ ರಾಖಿ ಸಾವಂತ್.

  ಅಮೀರ್ ಖಾನ್-ಕರಣ್ ರಾವ್ ಡಿವೋರ್ಸ್: ರಾಖಿ ಸಾವಂತ್ ಹೇಳಿದ್ದೇನು?ಅಮೀರ್ ಖಾನ್-ಕರಣ್ ರಾವ್ ಡಿವೋರ್ಸ್: ರಾಖಿ ಸಾವಂತ್ ಹೇಳಿದ್ದೇನು?

  ಇತ್ತೀಚೆಗೆ ಪ್ರಶಸ್ತಿ ಸಮಾರಂಭ ಒಂದರಲ್ಲಿ ರಾಖಿ ಸಾವಂತ್ ಭಾಗಿ ಆಗಿದ್ದರು. ಆಗ ಮಾಧ್ಯದ ಕ್ಯಾಮೆರಾ ಮುಂದೆ ಆದಿಲ್ ಖಾನ್‌ಗೆ ವಿಡಿಯೋ ಕಾಲ್ ಮಾಡಿ ಎಲ್ಲರಿಗೂ ರಾಖಿ ಸಾವಂತ್ ತಮ್ಮ ಹೊಸ ಸಂಗಾತಿಯನ್ನು ಪರಿಚಯಿಸಿದ್ದಾರೆ. ಈ ಹಿಂದೆ ಬಿಎಂಡಬ್ಲ್ಯು ಕಾರು ಉಡುಗೊರೆಯಾಗಿ ನೀಡಿದ್ದಕ್ಕೆ, ಧನ್ಯವಾದ ತಿಳಿಸಿದ್ದರು ರಾಖಿ ಸಾವಂತ್.

  ಇವರು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ಪ್ರೀತಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಇವರ ಲವ್ ಸ್ಟೋರಿಯನ್ನು ಇವರೇ ರಿವೀಲ್ ಮಾಡಬೇಕು.

  English summary
  Rakhi Sawant New Boyfriend Adil Khan Durrani Is From Mysore karnataka, Know More Details,
  Wednesday, May 18, 2022, 10:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X