For Quick Alerts
  ALLOW NOTIFICATIONS  
  For Daily Alerts

  Rakhi Sawant Marriage : ಮತ್ತೆ ವಿವಾದಕ್ಕೀಡಾದ ರಾಖಿ ವಿವಾಹ: ಕೈಕೊಟ್ಟ ಮೈಸೂರು ಹುಡುಗ!

  By ಫಿಲ್ಮಿಬೀಟ್ ಡೆಸ್ಕ್
  |

  ವಿವಾದಗಳಿಂದಲೇ ಅಸ್ತಿತ್ವ ಉಳಿಸಿಕೊಂಡಿರುವ ನಟಿ ರಾಖಿ ಸಾವಂತ್, ತಮ್ಮ ವಿವಾಹವನ್ನೂ ವಿವಾದಕ್ಕೆ ಆ ಮೂಲಕ ಸುದ್ದಿಯಲ್ಲಿರಲು ಬಳಸಿಕೊಳ್ಳುತ್ತಲೇ ಬಂದಿದ್ದಾರೆ.

  ಕಳೆದ ವರ್ಷ ತಮ್ಮ ಪತಿ ರಿತೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಆ ಬಳಿಕ ಪತಿಯಿಂದ ದೂರಾಗಿದ್ದ ರಾಖಿ ಸಾವಂತ್, ಮೈಸೂರಿನ ಆದಿಲ್ ಎಂಬುವರೊಡನೆ ಸುತ್ತಾಟ ಆರಂಭಿಸಿದ್ದರು.

  ಮೈಸೂರಿನ ಉದ್ಯಮಿ ಆದಿಲ್, ರಾಖಿ ಸಾವಂತ್‌ಗೆ ಐಶಾರಾಮಿ ಬಿಎಂಡಬ್ಲು ಕಾರು, ಮನೆ ಎಲ್ಲ ಕೊಡಿಸಿದ್ದರು. ಇದರಿಂದ ರಾಖಿ ಸಹ ಬಹಳ ಖುಷಿಯಾಗಿ ಆದಿಲ್ ಅನ್ನು ತಮ್ಮ ಬಾಯ್‌ಫ್ರೆಂಡ್ ಎಂದು ಪರಿಚಯಿಸಿದ್ದರು.

  ಇತ್ತೀಚೆಗೆ ರಾಖಿ, ತಾವು ಆದಿಲ್ ಅನ್ನು ವಿವಾಹವಾಗಿರುವುದಾಗಿ ದಾಖಲೆಗಳನ್ನು, ವಿಡಿಯೋವನ್ನು ತೋರಿಸಿದ್ದರು. ಆದರೆ ಆದಿಲ್ ಅದೆಲ್ಲವೂ ಸುಳ್ಳು ಎಂದಿದ್ದು, ತಾವು ರಾಖಿ ಸಾವಂತ್ ಅನ್ನು ವಿವಾಹವಾಗಿಲ್ಲ ಎಂದಿದ್ದಾರೆ.

  ರಾಖಿ ಸಾವಂತ್ ಹಾಗೂ ಆದಿಲ್ ವಿವಾಹ ನೊಂದಣಿ ಆಗಿರುವ ದಾಖಲೆ. ಆದಿಲ್ ಹಾಗೂ ರಾಖಿ ಸಾವಂತ್ ಒಟ್ಟಿಗೆ ಕೊರಳಲ್ಲಿ ಮಾಲೆ ಧರಿಸಿಕೊಂಡು ವಿವಾಹ ನೊಂದಣಿ ದಾಖಲೆಗಳಿಗೆ ಸಹಿ ಹಾಕುತ್ತಿರುವ ವಿಡಿಯೋವನ್ನು ಸಹ ರಾಖಿ ಬಿಡುಗಡೆ ಮಾಡಿದ್ದಾರೆ.

  ಆದರೆ ಆದಿಲ್ ಇದೆಲ್ಲ ಸುಳ್ಳು ಎಂದಿದ್ದು, ನಾನು ರಾಖಿ ಜೊತೆ ವಿವಾಹವಾಗಿಲ್ಲ ಎಂದಿದ್ದಾರೆ. ಆದಿಲ್‌ರ ಹೇಳಿಕೆ ಹೊರಬಿದ್ದ ಬಳಿಕ, ಪಾಪಾರಾಟ್ಜಿ ಕ್ಯಾಮೆರಾಗಳ ಮುಂದೆ ಕಣ್ಣೀರು ಹಾಕಿರುವ ರಾಖಿ ಸಾವಂತ್, ಜೋರಾಗಿ ಅಳುತ್ತಾ, ನನ್ನ ಜೀವನದಲ್ಲಿ ಏಕೆ ಇಷ್ಟೋಂದು ನೋವು. ನಾನು ಮದುವೆಯಾಗಿರುವ ವಿಚಾರ, ಅವನು ಈಗ ನನ್ನನ್ನು ದೂರ ಮಾಡುತ್ತಿರುವ ವಿಚಾರ ನನ್ನ ತಾಯಿಗೆ ಇನ್ನೂ ಗೊತ್ತಿಲ್ಲ ಎಂದಿದ್ದಾರೆ.

  ರಾಖಿ ಸಾವಂತ್‌ರ ತಾಯಿಗೆ ಬ್ರೈನ್ ಟ್ಯೂಮರ್ ಆಗಿದ್ದು ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಆಕೆಗಿನ್ನೂ ಪ್ರಜ್ಞೆ ಬಂದಿಲ್ಲ.

  ಆದಿಲ್ ಕುಟುಂಬದವರೊಟ್ಟಿಗೆ ನಾನು ಮಾತನಾಡಿದೆ. ಅವರು ಆದಿಲ್‌ಗೆ ಬುದ್ಧಿಹೇಳುವುದಾಗಿ ಹೇಳಿದ್ದಾರೆ. ''ನೀನು ರಾಖಿ ಜೊತೆಗೆ ನಿಖಾಹ್ ಮಾಡಿಕೊಂಡಿದ್ದರೆ ಎಲ್ಲರೆದರೂ ಕುಬೂಲ್ ಮಾಡಿಕೊ' ಎಂದು ಅವರ ಮನೆಯವರು ಅವನಿಗೆ ಬುದ್ಧಿ ಹೇಳಿದ್ದಾರೆ'' ಎಂದಿದ್ದಾರೆ ರಾಖಿ ಸಾವಂತ್.

  ರಾಖಿ ಸಾವಂತ್‌ ರ ಈ ರೀತಿಯ ಡ್ರಾಮಾಗಳು ನೆಟ್ಟಿಗರಿಗೆ ಸಾಮಾನ್ಯ ಎನಿಸಿಬಿಟ್ಟಿವೆ. ಬಿಗ್‌ಬಾಸ್‌ನಲ್ಲಿ ಡ್ರಾಮಾ ಮಾಡುತ್ತಿದ್ದ ರಾಖಿ ಈಗ ಬಿಗ್‌ಬಾಸ್ ಹೊರಗೂ ಡ್ರಾಮಾ ಮಾಡುತ್ತಿದ್ದಾಳೆ ಎಂದಿದ್ದಾರೆ. ಏನಾದರೂ ಆಗಲಿ ಒಟ್ಟಿನಲ್ಲಿ ಸುದ್ದಿಯಲ್ಲಿರುವುದಷ್ಟೆ ರಾಖಿಗೆ ಬೇಕು ಎಂದು ಇನ್ನು ಕೆಲವರು ಹೇಳಿದ್ದಾರೆ.

  English summary
  Rakhi Sawant says she married to her Mysore boyfriend Adil. But Adil denying marrying Rakhi Sawant.
  Monday, January 16, 2023, 10:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X