For Quick Alerts
  ALLOW NOTIFICATIONS  
  For Daily Alerts

  ಆಮೀರ್ ಖಾನ್‌ಗೆ ಕೊರೊನಾ ಎಂದು ಕೇಳಿ ಆಘಾತಗೊಂಡ ರಾಖಿ ಸಾವಂತ್

  |

  ಬಾಲಿವುಡ್‌ನ ವಿವಾದಾತ್ಮಕ ನಟಿ ಎಂದೇ ಖ್ಯಾತಿಗಳಿಸಿರುವ ರಾಖಿ ಸಾವಂತ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆಮೀರ್ ಖಾನ್ ಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ರಾಖಿ ಆಘಾತಗೊಂಡಿದ್ದಾರೆ.

  Recommended Video

  ಅಮೀರ್ ಗೆ ಕೊರೊನಾ ಬಂದಿರೊದನ್ನು ಕೇಳಿ ರಾಖಿ ಸಾವಂತ್ ಕೊಟ್ಟ ರಿಯಾಕ್ಷನ್ ಫುಲ್ ವೈರಲ್ | Filmibeat Kannada

  ರಾಖಿ ಸಾವಂತ್ ಪ್ರತಿಕ್ರಿಯೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಿಮ್ ಸೂಟ್ ಧರಿಸಿದ್ದ ರಾಖಿ ಕಾರ್ ಹತ್ತಲು ಹೋಗುತ್ತಿರುತ್ತಾರೆ, ಆಗ ಮಾಧ್ಯಮದವರು ಆಮೀರ್ ಖಾನ್ ಅವರಿಗೆ ಕೊರೊನಾ ಪಾಸಿಟಿವ್ ಎನ್ನುವ ಸುದ್ದಿ ಹೇಳುತ್ತಾರೆ. ದಿಢೀರನೇ ಹಿಂದೆ ತಿರುಗಿ 'ಓ ಮೈ ಗಾಡ್ ನಿಜವಾಗಿಯೂ' ಎಂದು ಪ್ರತಿಕ್ರಿಯೆ ನೀಡಿ, ಕಳವಳ ವ್ಯಕ್ತಪಡಿಸಿದ್ದಾರೆ.

  ರಾಖಿ ಸಾವಂತ್ ಬಯೋಪಿಕ್ ಈ ಸ್ಟಾರ್ ನಟಿಯೇ ಮಾಡಬೇಕಂತೆರಾಖಿ ಸಾವಂತ್ ಬಯೋಪಿಕ್ ಈ ಸ್ಟಾರ್ ನಟಿಯೇ ಮಾಡಬೇಕಂತೆ

  'ತುಂಬಾ ಭಯವಾಗುತ್ತಿದೆ. ಲವ್ ಯು ಆಮೀರ್ ಜೀ, ಮಿಸ್ ಯು' ಎಂದು ಪೇಚಾಡಿದ್ದಾರೆ. ರಾಖಿ ಸಾವಂತ್ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅತೀ ಹೆಚ್ಚು ಆಡಬೇಡಿ ಎಂದು ಕಾಮೆಂಟ್ ಮಾಡಿದ್ರೆ, ಇನ್ನು ಕೆಲವರು ಹೃದಯವಂತ ರಾಖಿ ಎಂದು ಹೊಗಳಿದ್ದಾರೆ.

  ರಾಖಿ ಸಾವಂತ್ ಸದ್ಯ ಅನಾರೋಗ್ಯದಲ್ಲಿರುವ ತನ್ನ ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ. ರಾಖಿ ಸಾವಂತ್ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಖಿ ತಾಯಿಯ ಚಿಕಿತ್ಸೆಗೆ ಸಲ್ಮಾನ್ ಖಾನ್ ಸಹೋದರರು ಸಹಾಯ ಮಾಡಿದ್ದರು. ಈ ಬಗ್ಗೆ ರಾಖಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಬಹಿರಂಗ ಪಡಿಸಿದ್ದರು.

  ಈ ಬಾರಿ ಬಿಗ್ ಬಾಸ್‌ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದ ರಾಖಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದರು. ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲ, ಹಣದ ಅವಶ್ಯಕತೆ ತುಂಬಾ ಇದೆ ಹಾಗಾಗಿ ಬಿಗ್ ಬಾಸ್‌ಗೆ ಬಂದಿರುವುದಾಗಿ ಹೇಳಿದ್ದರು. ರಾಖಿ ಎರಡನೇ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದು ಸಖತ್ ಎಂಜಾಯ್ ಮಾಡಿದ್ದರು. ಬಿಗ್ ಮನೆಯಲ್ಲಿ ರಾಖಿ ಎಷ್ಟು ಮನರಂಜನೆ ನೀಡಿದ್ದರೋ ಅಷ್ಟೆ ಭಾವುಕರಾಗಿದ್ದರು. ತನ್ನ ಕಷ್ಟಗಳ ಬಗ್ಗೆ ಮತ್ತು ತಾಯಿಯ ಅನಾರೋಗ್ಯದ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದರು.

  English summary
  Bollywood Actress Rakhi Sawant shocking reaction to Aamir Khan tests positive for corona.
  Friday, March 26, 2021, 17:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X