»   » ರಾಖಿ ವಿಶೇಷ: ಬಾಲಿವುಡ್ ಅಣ್ಣ ತಂಗಿ ಜೋಡಿ

ರಾಖಿ ವಿಶೇಷ: ಬಾಲಿವುಡ್ ಅಣ್ಣ ತಂಗಿ ಜೋಡಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ತೆರೆಯ ಮೇಲೆ ಅಣ್ಣ ತಂಗಿ ಸಂಬಂಧದ ಬಗ್ಗೆ ಹಾಡಿ ಕುಣಿದು ನಲಿಯುವ ನಮ್ಮ ಫಿಲಂ ಸ್ಟಾರ್ ಗಳು ನಿಜ ಜೀವನದಲ್ಲಿ ತಮ್ಮ ಕುಟುಂಬದ ಜತೆ ಇದೇ ರೀತಿ ಗಟ್ಟಿ ಸಂಬಂಧ ಹೊಂದಿರುತ್ತಾರೆಯೇ? ಎಂಬ ಕುತೂಹಲ ಸಹಜವಾಗಿ ಬಹುತೇಕ ಅಭಿಮಾನಿಗಳಲ್ಲಿ ಇದೆ.

ಹಿಂದಿ ಚಿತ್ರರಂಗದಲ್ಲಿ ಮಂದಿಗಳಿಗೆ ಹಬ್ಬ ಹರಿದಿನ ಆಚರಣೆ ಸಂಭ್ರಮ ತುಂಬಾ ಮಾಮೂಲಿ. ಬಾಲಿವುಡ್ ನ ಅನೇಕ ಸ್ಟರ್ ನಟ, ನಟಿಯರು ತಮ್ಮ ಸೋದರ/ರಿಯರ ಜತೆ ರಕ್ಷಾ ಬಂಧನ ಆಚರಿಸಿಕೊಳ್ಳುತ್ತಾರೆ.

ಕುಟುಂಬ, ಸಂಬಂಧ, ಭಾವನಾತ್ಮಕತೆ ಬಾಲಿವುಡ್ ನಲ್ಲಿ ಮನರಂಜನೆ ಜತೆ ಸಮನಾಗಿ ಬೆರೆತಿದೆ. ಹಲವಾರು ಸ್ಟಾರ್ ಗಳ ಜತೆಗೆ ಅವರ ಸೋದರ ಸೋದರಿಯರು ಕೂಡಾ ಸ್ಟಾರ್ ಗಳಾಗಿದ್ದಾರೆ. ಕೆಲವರು ಸ್ಟಾರ್ ಗಳ ಸೋದರ ಅಥವಾ ಸೋದರಿ ತಾವೂ ಕೂಡಾ ಸಕ್ರಿಯವಾಗಿ ಸಿನಿಮಾ ಕ್ಷೇತ್ರಕ್ಕೆ ಧುಮುಕಿ ಯಶಸ್ವಿಯಾಗಿದ್ದಾರೆ.

ಉದಾಹರಣೆಗೆ ಫರ್ಹಾ ಖಾನ್- ಸಾಜಿದ್ ಖಾನ್, ಏಕ್ತಾ ಕಪೂರ್- ತುಷಾರ್ ಕಪೂರ್, ಫರ್ಹಾನ್ ಅಖ್ತರ್-ಜೋಯಾ ಅಖ್ತರ್ ಮುಂತಾದವರನ್ನು ಹೆಸರಿಸಬಹುದು.

ಮಿಕ್ಕಂತೆ ಕರಾವಳಿ ಸುಂದರಿ ಐಶ್ವರ್ಯಾ ರೈ ಅವರ ಅಣ್ಣ ಅದಿತ್ಯ ರೈ ಮರ್ಚೆಂಟ್ ನೇವಿಯಲ್ಲಿ ಇಂಜಿನಿಯರ್, ಆದಿತ್ಯಾ ಅವರ ಕಷ್ಟ ಸುಖಗಳಿಗೆ ಐಶ್ವರ್ಯಾ ಸದಾ ಸ್ಪಂದಿಸುತ್ತಾರೆ. ಅದಿತ್ಯ ಅವರ ಮಗುವಿನ ವಿಶೇಷ ಆರೈಕೆ ಮಾಡಿದ್ದು ಐಶ್ವರ್ಯಾ ರೈ. ಕಿಂಗ್ ಖಾನ್ ಶಾರುಖ್ ಖಾನ್ ಅವರು ಅಕ್ಕ ಷೆಹನಾಜ್ ಲಾಲಾರುಖ್ ಅವರನ್ನು ತಮ್ಮ ಬಂಗಲೆ ಮನ್ನತ್ ನಲ್ಲಿ ಇರಿಸಿಕೊಂಡಿದ್ದಾರೆ.

ಅಭಿಷೇಕ್ ಬಚ್ಚನ್ ತಂಗಿ ಶ್ವೇತಾರನ್ನು ತಂಗಿಗಿಂತ ಹೆಚ್ಚಾಗಿ ಒಳ್ಳೆ ಸ್ನೇಹಿತೆ, ಮಾರ್ಗದರ್ಶಿಯಾಗಿ ಕಾಣುತ್ತಾರೆ. ಸಲ್ಮಾನ್ ಖಾನ್ ಅವರು ಅಲ್ವಿರಾ ಖಾನ್ ಹಾಗೂ ದತ್ತು ತಂಗಿ ಅರ್ಪಿತಾ ಖಾನ್ ರನ್ನು ತುಂಬಾ ಪ್ರೀತಿಸುತ್ತಾರೆ.

ರಣಬೀರ್ ಕಪೂರ್ ಅವರು ಸೋದರಿ ರಿದ್ಧಿಮಾ ಕಪೂರ್ ಜತೆ ತಮ್ಮ ಯಶಸ್ಸಿನ ಕಥೆ ಹಂಚಿಕೊಳ್ಳದಿದ್ದರೆ ಸಮಾಧಾನವೇ ಆಗುವುದಿಲ್ಲವಂತೆ. ಹೀಗೆ ರಕ್ಷಾ ಬಂಧನದ ಸಂದರ್ಭದಲ್ಲಿ ಒಂದಿಷ್ಟು ಸ್ಟಾರ್ ಗಳ ಹಾಗೂ ಅವರ ಸೋದರ, ಸೋದರಿಯರ ಚಿತ್ರಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ...

ಅಭಿಷೇಕ್- ಶ್ವೇತಾ ಬಚ್ಚನ್

ಮ್ಯಾಗಜೀನ್ ಫೋಟೋಶೂಟ್ ನಲ್ಲಿ ಸೋದರಿ ಶ್ವೇತಾ ಬಚ್ಚನ್ ಜತೆ ಅಭಿಷೇಕ್ ಬಚ್ಚನ್ ಪೋಸ್

ಸೋದರರ ಜತೆ ಸೋನಾಕ್ಷಿ

ನಟಿ ಸೋನಾಕ್ಷಿ ಸೋದರರಾದ ಲವ್ ಸಿನ್ಹಾ ಹಾಗೂ ಕುಶ್ ಸಿನ್ಹಾ ಜತೆ

ಐಶ್ವರ್ಯಾ-ಆದಿತ್ಯಾ

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಜತೆ ಆದಿತ್ಯಾ ರೈ

ಫರ್ಹಾ-ಸಾಜಿದ್

ರಕ್ಷಾ ಬಂಧನ್ ಸಂಭ್ರಮದಲ್ಲಿ ಸಾಜಿದ್ ಖಾನ್ ಹಾಗೂ ಫರ್ಹಾ ಖಾನ್

ಅಕ್ಷಯ್- ಅಲ್ಕಾ

ಅಕ್ಷಯ್ ಕುಮಾರ್ ಅವರು ತಂಗಿ ಅಲ್ಕಾ ಭಾಟಿಯಾ(ಎಡ ಬದಿ) ಹಾಗೂ ಪತ್ನಿ ಟ್ವಿಂಕಲ್ ಖನ್ನಾ ಜತೆ

ಫರ್ಹಾನ್-ಜೋಯಾ

ಭಾಗ್ ಮಿಲ್ಕಾ ಭಾಗ್ ಯಶಸ್ಸಿನ ಓಟ ಕಂಡಿರುವ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಅವರು ತಂಗಿ ಜೋಯಾ ಅಖ್ತರ್ ಜೊತೆ

ವಿವೇಕ್-ಮೇಘನಾ

ಬಾಲಿವುಡ್ ನಟ ವಿವೇಕ್ ಒಬೆರಾಯ್ ಹಾಗೂ ಮೇಘನಾ ಒಬೆರಾಯ್

ಹೃತಿಕ್- ಸುನೈನಾ

ಹೃತಿಕ್ ರೋಷನ್ ಹಾಗೂ ಸುನೈನಾ ಅಪ್ಪ ರಾಕೇಶ್ ರೋಷನ್ ಜತೆ

ಕಂಗನಾ -ಅಕ್ಷಿತ್-ರಂಗೋಲಿ

ಕಂಗನಾ ರಾನೌತ್ ಅವರು ಸೋದರ ಅಕ್ಷಿತ್ ರಾನೌತ್ ಹಾಗೂ ಸೋದರಿ ರಂಗೋಲಿ ಜತೆ

ಪ್ರಿಯಾಂಕಾ ಛೋಪ್ರಾ-ಸಿದ್ದಾರ್ಥ್

ಮಾಜಿ ವಿಶ್ವ ಸುಂದರಿ ಪ್ರಿಯಾಂಕಾ ಛೋಪ್ರಾ ಜತೆ ಸೋದರ ಸಿದ್ದಾರ್ಥ್ ಛೋಪ್ರಾ

ರಣಬೀರ್- ರಿದ್ದಿಮಾ

ರಣಬೀರ್ ಕಪೂರ್ ಹಾಗೂ ರಿದ್ದಿಮಾ ಕಪೂರ್ ಸಹ್ನಿ

ಸೈಫ್-ಸೋಹಾ

ಐಐಎಫ್ಎ ಪ್ರಶಸ್ತಿ ಸಮಾರಂಭದಲ್ಲಿ ಸೈಫ್ ಅಲಿ ಖಾನ್ ಹಾಗೂ ತಂಗಿ ಸೋಹಾ ಅಲಿ ಖಾನ್

ಸಲ್ಮಾನ್-ಅಲ್ವಿರಾ

ಸಲ್ಮಾನ್ ಖಾನ್ ಅವರು ತಮ್ಮ ತಂಗಿ ಅಲ್ವಿರಾ ಖಾನ್ ಜತೆ

ಶಾರುಖ್-ಶೆಹಾನಾಜ್

ಕಿಂಗ್ ಖಾನ್ ಶಾರುಖ್ ತಮ್ಮ ಅಕ್ಕ ಶೆಹನಾಜ್ ಲಾಲ್ ರುಖ್, ಪತ್ನಿ ಗೌರಿ ಹಾಗೂ ಮಕ್ಕಳಾದ ಆರ್ಯ, ಸುಹಾನಾ ಜತೆ

ಸುಷ್ಮಿತಾ ಸೇನ್ -ರಾಜೀವ್

ಮಾಜಿ ಭುವನ ಸುಂದರಿ ಸುಷ್ಮಿತಾ ಸೇನ್ ಅವರು ತಮ್ಮ ಸೋದರ ರಾಜೀವ್ ಸೇನ್ ಜತೆ ಬೆಕ್ಕಿನ ನಡಿಗೆ ಇಟ್ಟಿದ್ದು ಹೀಗೆ

English summary
Rakhi Special: Family plays a very important role in the life of our Bollywood stars. And most of the actors are very close to their siblings. Many star siblings are not as famous as them because they chose to stay away from the limelight and glamour.
Please Wait while comments are loading...