For Quick Alerts
  ALLOW NOTIFICATIONS  
  For Daily Alerts

  'ದಕ್ಷಿಣ ಭಾರತೀಯ ಚಿತ್ರರಂಗವನ್ನು ಕಡೆಗಣಿಸಲಾಗಿದೆ': ಮೋದಿಗೆ ರಾಮ್ ಚರಣ್ ಪತ್ನಿ ಪ್ರಶ್ನೆ

  |

  ಪ್ರಧಾನಿ ನರೇಂದ್ರ ಆಗಾಗ ಬಾಲಿವುಡ್ ಸ್ಟಾರ್ಸ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಕಾರ್ಯಕ್ರಮಗಳಿಗೆ ಬಾಲಿವುಡ್ ಕಲಾವಿದರಿಗೆ ವಿಶೇಷ ಆಹ್ವಾನ ನೀಡಲಾಗುತ್ತೆ. ಅಲ್ಲದೆ ಬಾಲಿವುಡ್ ನಲ್ಲಿಯೂ ಯಾವುದೆ ವಿಶೇಷ ಸಮಾರಂಭಗಳಿದ್ದರೆ ಪ್ರಧಾನಿ ಮೋದಿ ಭಾಗವಹಿಸುತ್ತಾರೆ.

  ಇತ್ತೀಚಿಗೆ ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ಸ್ಟಾರ್ಸ್ ಜೊತೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಮಣಿರತ್ನಂ ಸೇರಿದಂತೆ, ಮೋದಿ ವಿರುದ್ದ ಮಾತನಾಡಿದ್ದ 49 ಗಣ್ಯರ ವಿರುದ್ಧ

  ಬಾಲಿವುಡ್ ಚಿತ್ರರಂಗಕ್ಕೆ ಸಿಕ್ಕ ಬೆಂಬಲ ಮತ್ತು ಸಹಕಾರ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಸಿಗುತ್ತಿಲ್ಲ ಎನ್ನುವುದು ಅನೇಕರ ಬೇಸರ. ಈ ಬಗ್ಗೆ ದಕ್ಷಿಣ ಭಾರತೀಯ ಚಿತ್ರರಂಗ ಖ್ಯಾತ ನಟ ರಾಮ್ ಚರಣ್ ಪತ್ನಿ ಉಪಾಸನ ಪ್ರಧಾನಿಗೆ ನೇರವಾಗಿ ಪ್ರಶ್ನೆ ಮಾಡಿದ್ದಾರೆ. ದಕ್ಷಿಣ ಭಾರತೀಯ ಚಿತ್ರರಂಗವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಬೇಸರ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

  "ಪ್ರೀತಿಯ ನರೇಂದ್ರ ಮೋದಿಜೀ. ದಕ್ಷಿಣ ಭಾರತದಲ್ಲಿ ಇರುವ ನಾವು ಕೂಡ ನಿಮ್ಮನ್ನು ಮೆಚ್ಚುತ್ತೇವೆ. ನಮ್ಮ ಪ್ರಧಾನಿಯಾಗಿರುವುದಕ್ಕೆ ಹೆಮ್ಮ ಪಡುತ್ತೇವೆ. ಪ್ರಮುಖ ವ್ಯಕ್ತಿಗಳು ಮತ್ತು ಸಾಂಸ್ಕೃತಿಕ ಪ್ರಾತಿನಿಧ್ಯ ಕೇವಲ ಹಿಂದಿ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿದೆ. ದಕ್ಷಿಣ ಭಾರತೀಯ ಚಲನಚಿತ್ರೋದ್ಯಮವನ್ನು ನಿರ್ಲಕ್ಷಿಸಲಾಗಿದೆ. ನಾನು ನನ್ನ ಭಾವನೆಗಳನ್ನು ನೋವಿನಿಂದ ಹೇಳಿಕೊಳ್ಳುತ್ತಿದ್ದೇನೆ. ಇದನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಲಾಗಿದೆ ಎಂದು ಭಾವಿಸುತ್ತೇನೆ. ಜೈ ಹಿಂದ್."

  'ಕೂಲಿ ನಂಬರ್-1' ಚಿತ್ರತಂಡವನ್ನ ಪ್ರಶಂಸಿದ ಪ್ರಧಾನಿ ಮೋದಿ

  ಎಂದು ದೀರ್ಘವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟರಾದ ಆಮೀರ್ ಖಾನ್, ಶಾರುಖ್ ಖಾನ್, ರಾಜ್ ಕುಮಾರ್ ಹಿರಾನಿ, ರಣಬೀರ್ ಕಪೂರ್, ಕಂಗನಾ ರಣಾವತ್, ಸೋನಮ್ ಕಪೂರ್, ವಿಕ್ಕಿ ಕೌಸಲ್, ಅಲಿಯಾ ಭಟ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಭಾಗಿಯಾಗಿದ್ದರು.

  ಪ್ರಧಾನಿ ಮೋದಿ ಜೊತೆ ಕಲಾವಿದರು ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ. ಅದರಲ್ಲೂ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಇಬ್ಬರು ಮೋದಿ ಜೊತೆ ಸೆಲ್ಫಿ ತೆಗೆದುಕೊಳ್ಳುವ ಫೋಟೋಗೆ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬಂದಿವೆ.

  English summary
  Telugu actor Ram Charan’s wife Upasana questions PM Narendra Modi for neglecting South Film Industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X