»   » ಟೈಗರ್ ಶ್ರಾಫ್ 'ನಪುಂಸಕ': ಜಾಕಿ ಶ್ರಾಫ್ ಮಗನಿಗೆ ವರ್ಮ ಕಮೆಂಟ್

ಟೈಗರ್ ಶ್ರಾಫ್ 'ನಪುಂಸಕ': ಜಾಕಿ ಶ್ರಾಫ್ ಮಗನಿಗೆ ವರ್ಮ ಕಮೆಂಟ್

Posted By:
Subscribe to Filmibeat Kannada

'ಯು ಶುಡ್ ನಾಟ್ ಡ್ರಿಂಕ್ ಅಂಡ್ ಡ್ರೈವ್' ಅನ್ನೋದನ್ನ ಎಲ್ಲರೂ ಕೇಳಿರ್ತಿರಾ. ಹಾಗೆ ನಿರ್ಮಾಪಕ ರಾಮ್ ಗೋಪಲ್ ವರ್ಮ ವಿಷಯಕ್ಕೆ ಬಂದ್ರೆ ಹೊಸ ಎಚ್ಚರಿಗೆಯಾಗಿ 'ಡೋಂಟ್ ಡ್ರಿಂಗ್ ಅಂಡ್ ಟಾಕ್' ಎಂದೇ ಹೇಳಬೇಕಾಗುತ್ತದೆ.[ತಮಿಳುನಾಡಿನ 'ಶಶಿಕಲಾ' ಮೇಲೆ ಬಿತ್ತು 'ವರ್ಮ' ಕಣ್ಣು!]

ಯಾಕಂದ್ರೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಯಾವಾಗಲು ಸುದ್ದಿ ಆಗುವ ರಾಮ್ ಗೋಪಾಲ್ ವರ್ಮ ಕುಡಿದ ಮತ್ತಿನಲ್ಲಿ ಮಾತಾಡಿ ಬಿ ಟೌನ್ ಹಾಟ್ ಟಾಪಿಕ್ ಆಗಿದ್ದಾರೆ.

ಏನದು? ರಾಮ್ ಗೋಪಾಲ್ ವರ್ಮ ಹೊಸ ವಿವಾದ...

ರಾಮ್ ಗೋಪಾಲ್ ವರ್ಮ ಬಹುದಿನಗಳ ನಂತರ ಈಗ ಸುದ್ದಿಯಲ್ಲಿರುವುದು ನಟ ವಿದ್ಯುತ್ ಜಮ್ವಾಲ್ ಜೊತೆ ಮದ್ಯಪಾನ ಮಾಡಿ ನಡೆಸಿದ ಸಂಭಾಷಣೆಯಿಂದಾಗಿ.

ವಿದ್ಯುತ್ ಜಮ್ವಾಲ್ ಜೊತೆ ಹೇಳಿದಾದ್ರು ಏನು?

ಇತ್ತೀಚೆಗಷ್ಟೆ ವಿದ್ಯುತ್ ಜಮ್ವಾಲ್ ಗೆ ಕರೆ ಮಾಡಿ ಮಾತನಾಡುವಾಗ ರಾಮ್ ಗೋಪಾಲ್ ವರ್ಮ '' ಟೈಗರ್ ಶ್ರಾಫ್, ನಾನು ನೋಡಿದ ಗ್ರೇಟೆಸ್ಟ್ ವೂಮೆನ್.' ಎಂದು ಹೇಳಿದ್ದಾರೆ. ಅಲ್ಲದೇ " 'ಬಾಘಿ' ನಟ ನಪುಂಸಕ" ಎಂದು ಹೇಳಿ ವಿವಾದಕ್ಕೆ ಗ್ರಾಸವಾಗಿದ್ದಾರೆ.

ವಾಯ್ಸ್ ರೆಕಾರ್ಡ್ ಬಹಿರಂಗ ಮಾಡಿದ ವಿದ್ಯುತ್ ಜಮ್ವಾಲ್

ರಾಮ್ ಗೋಪಾಲ್ ವರ್ಮ ನಡೆಸಿದ ಸಂಭಾಷಣೆಯನ್ನು ವಾಯ್ಸ್ ರೆಕಾರ್ಡ್ ಮಾಡಿದ್ದ ವಿದ್ಯುತ್ ಜಮ್ವಾಲ್, ಆಡಿಯೋ ಕ್ಲಿಪ್ ಅನ್ನು ಶೇರ್ ಮಾಡುತ್ತಿದ್ದಂತೆ ರಾಮ್ ಗೋಪಾಲ್ ವರ್ಮ ಮಾತು ನಿಲ್ಲಿಸಿ ಟ್ವೀಟ್ ಮಾಡಲು ಆರಂಭಿಸಿದರಂತೆ. ಇದೇ ಸುದ್ದಿ ಈಗ ಆನ್ ಲೈನ್ ನಲ್ಲಿ ಹಾಟ್ ಟಾಪಿಕ್ ಆಗಿದೆ.

ಇದೆಲ್ಲಾ ಮಾಡಿದ್ದು ಮನರಂಜನೆಗಾಗಿ

ಟೈಗರ್ ಶ್ರಾಫ್ ರವರನ್ನು ಅವಹೇಳನ ಕಾರಿಯಾಗಿ ಸಂಬೋಧಿಸಿದ್ದ ಆಡಿಯೋ ಕ್ಲಿಪ್ ಬಹಿರಂಗಗೊಳ್ಳುತ್ತಿದ್ದಂತೆ, ರಾಮ್ ಗೋಪಾಲ್ ವರ್ಮ ರವರು "ಸಾಮಾನ್ಯವಾಗಿ ಮನರಂಜನೆಗಾಗಿಯೇ ಈ ರೀತಿ ಮಾಡಿದ್ದು , ಕೋಪಗೊಳ್ಳಲು ಕಾರಣವಾಗಿರುವುದಕ್ಕೆ ವಿದ್ಯುತ್ ಜಮ್ವಾಲ್ ಮತ್ತು ಟೈಗರ್ ಶ್ರಾಪ್ ಇಬ್ಬರಲ್ಲಿಯೂ ಕ್ಷಮೆ ಕೇಳಿದ್ದಾರೆ.

ಟ್ರೈಗರ್ ಶ್ರಾಫ್ ತಾಯಿ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಕಾರ್ಯಕ್ರಮವೊಂದರಲ್ಲಿ ವರ್ಮ ಕಮೆಂಟ್ ಬಗ್ಗೆ ಟೈಗರ್ ಶ್ರಾಫ್ ಮಾಧ್ಯಮಗಳ ಪ್ರಶ್ನೆಗೆ ಮೌನವಾಗಿದ್ದರು, ಅವರ ತಾಯಿ ಆಯೆಶಾ ಶ್ರಾಫ್ ಪ್ರತಿಕ್ರಿಯಿಸಿ, " ನಾಯಿಗಳು ಎಷ್ಟೇ ಬೊಗಳುತ್ತಿದ್ದರು ಸಹ ಕ್ಯಾರಾವ್ಯಾನ್ ತನ್ನ ಪಾಡಿಗೆ ಸಾಗುತ್ತದೆ" ಎಂದು ಹೇಳಿದ್ದಾರೆ.

English summary
Tiger Shroff is on Ram Gopal Varma's hitlist for a long time now. After taking a dig at his machoism a few weeks ago, RGV yet again stirred a controversy when he called Tiger names during a drunk conversation with actor Vidyut Jamwal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada