»   » ತಮಿಳುನಾಡಿನ 'ಶಶಿಕಲಾ' ಮೇಲೆ ಬಿತ್ತು 'ವರ್ಮ' ಕಣ್ಣು!

ತಮಿಳುನಾಡಿನ 'ಶಶಿಕಲಾ' ಮೇಲೆ ಬಿತ್ತು 'ವರ್ಮ' ಕಣ್ಣು!

Posted By:
Subscribe to Filmibeat Kannada

ನೈಜಕಥೆಗಳು, ವಿವಾದಾತ್ಮಕ ವಿಷಯಗಳ ಬಗ್ಗೆ ಸಿನಿಮಾ ಮಾಡುವ ರಾಮ್ ಗೋಪಾಲ್ ವರ್ಮ ಅವರ ಕಣ್ಣು ಈಗ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ 'ಶಶಿಕಲಾ' ಅವರ ಮೇಲೆ ಬಿದ್ದಿದೆ.

ಸದ್ಯ, ಅಮಿತಾಬ್ ಬಚ್ಚನ್ ಅಭಿನಯದ 'ಸರ್ಕಾರ್-3' ಚಿತ್ರವನ್ನ ನಿರ್ದೇಶನ ಮಾಡುತ್ತಿರುವ ವರ್ಮ, ತಮ್ಮ ಮುಂದಿನ ಚಿತ್ರವನ್ನ ಘೋಷಣೆ ಮಾಡಿದ್ದಾರೆ. ಈಗಾಗಲೇ ಹೊಸ ಚಿತ್ರದ ಟೈಟಲ್ ನೊಂದಣಿ ಮಾಡಿಸಿದ್ದು, ಆರ್ ಜಿವಿಯ ಮುಂದಿನ ಸಿನಿಮಾದ ಹೆಸರು 'ಶಶಿಕಲಾ' ಅಂತೆ. [ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ನಟರಾಜನ್?]

ಇದನ್ನ ಸ್ವತಃ ರಾಮ್ ಗೋಪಾಲ್ ವರ್ಮ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಖಚಿತ ಪಡಿಸಿದ್ದು, ಶಶಿಕಲಾ ಹಾಗೂ ಜಯಲಲಿತಾ ಅವರ ಸಂಬಂಧದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಈಗ ಅಪರಾಧಿ ಸ್ಥಾನದಲ್ಲಿ ನಿಂತು ಪರಪ್ಪನ ಅಗ್ರಹಾರ ಜೈಲು ಪಾಲಾಗಲಿರುವ ಶಶಿಕಲಾ ಕುರಿತ ಸಿನೆಮಾಗೆ ವೇಗದ ಚಾಲನೆ ಸಿಗುವ ಸಾಧ್ಯತೆಯಿದೆ. ಅಂದ ಹಾಗೆ, ಆ ಪಾತ್ರಕ್ಕೆ ಯಾವ ನಟಿ ಸೂಕ್ತ ನೀವೇ ಸೂಚಿಸಿ.

ವರ್ಮ ಮುಂದಿನ ಸಿನಿಮಾ 'ಶಶಿಕಲಾ'!

"ಈಗ ತಾನೇ ನನ್ನ ಮುಂದಿನ ಸಿನಿಮಾ 'ಶಶಿಕಲಾ' ಶೀರ್ಷಿಕೆ ನೊಂದಣಿ ಮಾಡಿದ್ದೇನೆ. ಇದು ರಾಜಕಾರಣಿಯ ಆತ್ಮೀಯ ಗೆಳತಿಯ ಕಥೆ ಮತ್ತು ಸಂಪೂರ್ಣ ಕಾಲ್ಪನಿಕ" ಎಂದು ತಮ್ಮ ಮುಂದಿನ ಸಿನಿಮಾದ ಬಗ್ಗೆ ವರ್ಮ ಟ್ವೀಟ್ ಮಾಡಿದ್ದಾರೆ.

ಇದು ಕಾಲ್ಪನಿಕ ಕಥೆ!

ಶಶಿಕಲಾ ಎಂದಾಕ್ಷಣ ಜಯಲಲಿತಾ ಅವರ ಗೆಳತಿ ಶಶಿಕಲಾ ಅವರ ಬಗ್ಗೆ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ. ಆದ್ರೆ, 'ರಾಜಕಾರಣಿಯ ಆತ್ಮೀಯ ಗೆಳತಿ' ಕಥೆ ಎಂದು ಹೇಳಿರುವ ವರ್ಮ, ಇದು ಕಾಲ್ಪನಿಕ ಕಥೆ ಎಂದು ಹೇಳುವ ಮೂಲಕ ಮತ್ತೆ ಗೊಂದಲ ಉಂಟು ಮಾಡಿದ್ದಾರೆ.[ಎಐಎಡಿಎಂಕೆ ಉಳಿಯತ್ತಾ, ಒಗ್ಗಟ್ಟು ಇರುತ್ತಾ-ಶಶಿಕಲಾ ನಡೆ ಏನು?]

ಇದು ಜಯಾ ಗೆಳತಿ ಶಶಿಕಲಾ ಬಗ್ಗೆ!

ವರ್ಮ ನೇರವಾಗಿ ಹೇಳದಿದ್ದರೂ, ಇದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತೆ 'ಶಶಿಕಲಾ' ಅವರ ಬಗ್ಗೆ ಮಾಡುತ್ತಿರುವ ಸಿನಿಮಾ ಎಂಬುದು ಜಗಜ್ಜಾಹೀರ. ಆದ್ರೆ, ಇದನ್ನ ವರ್ಮ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳುತ್ತಿದ್ದಾರೆ.

ಶಶಿಕಲಾ ಅವರಂದ್ರೆ ಹೆಚ್ಚು ಅಭಿಮಾನವಂತೆ!

''ಜಯಲಲಿತಾ ಅವರಂದ್ರೆ ನನಗೆ ಅಭಿಮಾನ. ಆದ್ರೆ ಶಶಿಕಲಾ ಅವರಂದ್ರೆ ಒಂದು ಪಟ್ಟು ಹೆಚ್ಚು ಅಭಿಮಾನ. ಜಯಲಲಿತಾ ಅವರು ಬೇರೆಯವರನ್ನ ಅಭಿಮಾನಿಸುವುದಕ್ಕಿಂತ ಹೆಚ್ಚು ಶಶಿಕಲಾ ಅವರನ್ನ ಅಭಿಮಾನಿಸುತ್ತಿದ್ದರು. ಹೀಗಾಗಿ ನನ್ನ ಸಿನಿಮಾಗೆ ಶಶಿಕಲಾ ಎಂದು ಹೆಸರಿಟ್ಟೆ'' ಎಂದು ವರ್ಮ ಟ್ವೀಟ್ ಮಾಡಿದ್ದಾರೆ.

ಶಶಿಕಲಾ ಅವರ ರಾಜಕೀಯ ಕಥೆ!

"ಶಶಿಕಲಾ' ಸಿನಿಮಾ, ತಮಿಳು ಪ್ರೇಮದ ದೃಷ್ಟಿಯಿಂದ ಬಹಳ ನಿಷ್ಠೆಯಿಂದ ಕೂಡಿರುತ್ತೆ. ಆದ್ರೆ, ರಾಜಕೀಯವಲ್ಲದ ಕಾಲ್ಪನಿಕ ಕಥೆಗೆ ಸಂಬಂಧವಿರಲ್ಲ. ಶಶಿಕಲಾ ಅವರು ರಾಜಕೀಯದಿಂದ ದೂರವುಳಿದ ಕಾಲ್ಪನಿಕ ಸ್ಥಿತಿಗೂ, ಜಯಲಲಿತಾ ಬಗ್ಗೆ ನಂಬಲಾರ್ಹ ಅಸತ್ಯಗಳಿಗೂ ಮೂಲತಃ ವಿರೋಧಾಭಾಸಗಳಿವೆ" ಎಂದು ಕೂಡ ವರ್ಮ ಬರೆದಿದ್ದಾರೆ.

ಪ್ರಾಮಾಣಿಕವಾಗಿರುತ್ತಂತೆ 'ಶಶಿಕಲಾ' ಸಿನಿಮಾ!

"ಶಶಿಕಲಾ ಕಣ್ಣಲ್ಲಿ ಜಯಲಲಿತಾ ಅವರನ್ನು ನೋಡುವುದು, ಜಯಲಲಿತಾ ಮೂಲಕ ಜಯಲಲಿತಾ ಅವರನ್ನು ನೋಡುವುದಕ್ಕಿಂತಲೂ ಹೆಚ್ಚು ಕಾವ್ಯಾತ್ಮಕ ಮತ್ತು ಪ್ರಾಮಾಣಿಕವಾಗಿರಲಿದೆ" ಎಂದು ಕೂಡ ವರ್ಮ ಹೇಳಿದ್ದಾರೆ.

'ಶಶಿಕಲಾ' ಬಗ್ಗೆ ವರ್ಮನೇ ಕ್ಲಾರಿಟಿ ಕೊಡ್ಬೇಕು?

ತಾವು ನಿರ್ಮಿಸಲು ಹೊರಟಿರುವ 'ಶಶಿಕಲಾ' ಸಿನಿಮಾ ಕಾಲ್ಪನಿಕ. ವ್ಯಕ್ತಿಗಳ ನಿಜ ಜೀವನಕ್ಕೆ ಸಂಬಂಧಿಸಿದ್ದಲ್ಲ ಎಂದು ವರ್ಮಾ ಹೇಳಿಕೊಂಡರುವ ವರ್ಮಾ ಅವರ 'ಶಶಿಕಲಾ' ಎಷ್ಟು ಕಾಲ್ಪನಿಕವಾಗಿರುತ್ತೆ...? ಎಷ್ಟರ ಮಟ್ಟಿಗೆ ಜಯಲಲಿತಾ - ಶಶಿಕಲಾರ ಜೀವನವನ್ನು ಹೋಲಿರುತ್ತೆ ಎಂಬುದನ್ನ ವರ್ಮ ಸಾಹೆಬ್ರೇ ಹೇಳಬೇಕಿದೆ.

English summary
Bollywood Director Ram Gopal Varma is making a movie on controversial couple Jayalalithaa-Sasikala relationship. The film is titled As 'Sasikala'. RGV is known for picking up controversial subjects for his movies.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X