»   » ಪ್ರೇಕ್ಷಕರ ಕೃಪೆ, ರಾಮ್ ಲೀಲಾ ಗಲ್ಲಾಪೆಟ್ಟಿಗೆ ಫುಲ್

ಪ್ರೇಕ್ಷಕರ ಕೃಪೆ, ರಾಮ್ ಲೀಲಾ ಗಲ್ಲಾಪೆಟ್ಟಿಗೆ ಫುಲ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಅವರ ಬಹು ನಿರೀಕ್ಷಿತ ಚಿತ್ರ ನೋಡಲೇ ಬೇಕು ಎಂದು ಕೆಲ ವಿಮರ್ಶಕರು ಪ್ರಶಂಸಿಸಿದರೆ, ಮತ್ತೆ ಕೆಲವರು ಇದು ಜಸ್ಟ್ ಟೈಮ್ ಪಾಸ್ ಚಿತ್ರ ಎಂದಿದ್ದಾರೆ.

ವಿಲಿಯಂ ಷೇಕ್ಸ್ ಪಿಯರ್ ರೋಮಿಯೋ ಹಾಗೂ ಜೂಲಿಯಟ್ ಕಥೆಯನ್ನು ಭಾರತೀಯರ ರುಚಿಗೆ ತಕ್ಕಂತೆ ಉಣಬಡಿಸಿರುವ ಬನ್ಸಾಲಿಗಂತೂ ಚಿತ್ರದ ಬಗ್ಗೆ ಬಂದಿರುವ ಪ್ರತಿಕ್ರಿಯೆ ತೃಪ್ತಿ ತಂದಿದೆಯಂತೆ. ಪ್ರೇಕ್ಷಕರು ಕೂಡಾ ಒಟ್ಟಾರೆಯಾಗಿ ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದಿದ್ದಾರೆ. ಯಾರೂ ಏನೇ ಹೇಳಿದರೂ ಪ್ರೇಕ್ಷಕ ಪ್ರಭುಗಳು ಮಾತ್ರ ರಾಮ್ ಹಾಗೂ ಲೀಲಾ ಕೈ ಭದ್ರವಾಗಿ ಹಿಡಿದಿದ್ದಾರೆ.

ವಿವಾದಗಳನ್ನು ಮೈಮೇಲೆ ಹೊತ್ತು ತಿರುಗಿದ ಬನ್ಸಾಲಿ ಕೊನೆಗೂ ಗೆದ್ದಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ವಾರದಲ್ಲಿ ಚಿತ್ರ ಭರ್ಜರಿ ಗಳಿಕೆ ಮಾಡಿದೆ. ಚಿತ್ರ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲೇ 50 ಕೋಟಿ ರು ಗಳಿಸಿ ಮುನ್ನುಗ್ಗುತ್ತಿದೆ. 2013ರ ಹೆಚ್ಚು ಗಳಿಕೆ ಮಾಡಿದ ಬಾಲಿವುಡ್ ಚಿತ್ರಗಳ ಪೈಕಿ ಗಲಿಯೋಂಕಿ ರಾಸ್ ಲೀಲಾ ರಾಮ್ ಲೀಲಾ ಟಾಪ್ 5 ರೊಳಗೆ ಸ್ಥಾನ ಪಡೆದಿದೆ. ಭಾರತೀಯ ಮಾರುಕಟ್ಟೆಯಲ್ಲಿ ರಾಮ್ ಲೀಲಾ ಚಿತ್ರ ಗಳಿಕೆ ವಿವರ ಮುಂದೆ ಓದಿ...

ಪ್ರೇಕ್ಷಕರ ಮನಗೆದ್ದ ಚಿತ್ರ

ರೋಮಿಯೋ ಹಾಗೂ ಜೂಲಿಯಟ್ ಪಾತ್ರದಲ್ಲಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದೇಸಿ ರೋಮಿಯೋ-ಜೂಲಿಯಟ್ ನಲಿದಾಟ, ಪ್ರಣಯ ಚೇಷ್ಟೆಗಳು ಈ ಚಿತ್ರಕ್ಕೆ ಕೃಷ್ಣಲೀಲೆ ಎಂದು ಹೆಸರಿಡಬೇಕಿತ್ತು ಎಂದು ಪ್ರೇಕ್ಷಕರಿಂದ ಪ್ರತಿಕ್ರಿಯೆ ಪಡೆದಿತ್ತು.ಆದರೆ, ಚಿತ್ರ ಉತ್ಪ್ರೇಕ್ಷೆಗೆ ತಕ್ಕಂತೆ ಮೂಡಿ ಬಂದಿರುವುದರಿಂದ ಪ್ರೇಕ್ಷಕರ ಮನ ಗೆದ್ದಿದೆ. ಹೀಗಾಗಿ ಆರಂಭದ ದಿನವೇ ಚಿತ್ರದ ಗಲ್ಲಾಪೆಟ್ಟಿಗೆ ತುಂಬತೊಡಗಿತು. ವಿಮರ್ಶಕರ ವಿಮರ್ಶೆ ಇಲ್ಲಿ ಓದಿ

ಮೊದಲ ದಿನದ ಗಳಿಕೆ

ರಾಮ್ ಲೀಲಾ ಚಿತ್ರದ ಮೊದಲ ದಿನ ಗಳಿಕೆಯಲ್ಲಿ ಮುಂಗಡ ಬುಕ್ಕಿಂಗ್ ಮಹತ್ವದ ಪಾತ್ರ ವಹಿಸಿದೆ. ಶೇ80 ರಷ್ಟು ಟಿಕೆಟ್ ಗಳು ಅಡ್ವಾನ್ಸ್ ಬುಕ್ಕಿಂಗ್ ಕಂಡಿದ್ದರೆ, ಮೊದಲ ದಿನ ಚಿತ್ರಮಂದಿರಗಳು ಶೇ 90 ರಷ್ಟು ತುಂಬಿತ್ತು. ಸಚಿನ್ ಅವರ ವಿದಾಯ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಜನ ಬರುವುದು ಕಡಿಮೆ ಎನ್ನಲಾಗಿತ್ತು. ಆದರೆ, ಸಂಜೆ ವೇಳೆಗೆ ಜನ ಚಿತ್ರಮಂದಿರದತ್ತ ಧಾವಿಸಿ ಬಂದರು.

ರಣವೀರ್- ದೀಪಿಕಾ ಜೋಡಿ

ರಣವೀರ್ ಹಾಗೂ ದೀಪಿಕಾ ಜೋಡಿಯ ಮೊದಲ ಚಿತ್ರ ಇದಾಗಿದ್ದು, ಮೊದಲ ಚಿತ್ರದಲ್ಲೇ ಕಮಾಲ್ ಮಾಡಿದ್ದಾರೆ. ರಣವೀರ್ ಅವರ ಈ ವರೆಗಿನ ಅತ್ಯುತ್ತಮ ಗಳಿಕೆ ತಂದುಕೊಟ್ಟ ಚಿತ್ರ ಎನಿಸಿದೆ. ಮೊದಲ ದಿನ ಬಾಕ್ಸಾಫೀಸ್ ನಲ್ಲಿ 16 ಕೋಟಿ ರು ಗಳಿಕೆ ಕಂಡು ಬಂದಿದೆ. 2013ರ ಅತ್ಯಂತ ಹೆಚ್ಚು ಗಳಿಕೆ ಚಿತ್ರಗಳ ಪೈಕಿ 5ನೇ ಸ್ಥಾನದಲ್ಲಿರುವ ರಾಮ್ ಲೀಲಾ ಚಿತ್ರ ರಣವೀರ್ ಅವರ ಉತ್ತಮ ಗಳಿಕೆ ಚಿತ್ರವೂ ಹೌದು.

ದೀಪಿಕಾ ಲಕ್ಕಿ

ದೀಪಿಕಾ ಪಡುಕೋಣೆ ಈಗಾಗಲೇ 100 ಕೋಟಿ ರು, 200 ಕೋಟಿ ರು ಕ್ಲಬ್ ಸೇರಿರುವ ನಟಿ ಎನಿಸಿದ್ದು, ಯೇ ಜವಾನಿ ಹೈ ದಿವಾನಿ ಹಾಗೂ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಮೂಲಕ ನಿರ್ಮಾಪಕರ ಪಾಲಿಗೆ ಗಲ್ಲಾ ಪೆಟ್ಟಿಗೆ ತುಂಬಿಸುವ ಲಕ್ಷ್ಮಿ ದೇವಿ ಎನಿಸಿದ್ದಾರೆ.

ಮೊದಲ ವಾರ ಒಟ್ಟಾರೆ ಗಳಿಕೆ

ಸಂಜಯ್ ಲೀಲಾ ಬನ್ಸಾಲಿ ಚಿತ್ರ ಮೊದಲ ದಿನ 16 ಕೋಟಿ ರು ಗಳಿಸಿದ ಮೇಲೆ ಶನಿವಾರ 17.5 ಕೋಟಿ ರು ಬಾಚಿತ್ತು. ಭಾನುವಾರ 19 ಕೋಟಿ ರು ಗಳಿಸಿ ಉತ್ತಮ ನಿರೀಕ್ಷೆ ಹುಟ್ಟಿಸಿದೆ.


ಒಟ್ಟಾರೆ ಮೊದಲ ವಾರದ ಮೂರು ದಿನಗಳಲ್ಲಿ ದೇಶಿ ಬಾಕ್ದಾಫೀಸ್ ನಲ್ಲಿ 52.5 ಕೋಟಿ ರು ನಿವ್ವಳ ಗಳಿಕೆ ಮಾಡಿದೆ. ಮೊದಲ ವಾರ ಗಳಿಕೆಯಲ್ಲಿ ಇತ್ತೀಚಿನ ಚಿತ್ರಗಳ ಪೈಕಿ ನಾಲ್ಕನೇ ಸ್ಥಾನ ಪಡೆದಿದೆ. ಗ್ರಾಂಡ್ ಮಸ್ತಿ (40.18 ಕೋಟಿ ರು), ರೇಸ್ 2(51.35 ಕೋಟಿ ರು) ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Getting superb opening, this week's new release Goliyon Ki Raasleela Ram Leela, directed by Sanjay Leela Bhansali, has gone super strong in the domestic market over the weekend. The Ranveer Singh and Deepika Padukone starrer has surpassed Rs 50 crore mark at the Indian Box Office in just three days. It has become one of the top five highest grossers in non-holiday weekend in 2013.
Please Wait while comments are loading...