»   » ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರ

ಬಾಲಿವುಡ್ ಟೈಗರ್ ಸಲ್ಮಾನ್ ಖಾನ್ ಸಕ್ಸಸ್ ಹಿಂದಿನ ಸೂತ್ರ

Posted By:
Subscribe to Filmibeat Kannada

ಎರಡು ದಶಕಗಳಿಂದ ಬಾಲಿವುಡ್ ನಲ್ಲಿ ಚಲ್ತಿ ಕಾ ನಾಮ್ ಗಾಡಿಯಾಗಿದ್ದರೂ ಸಲ್ಮಾನ್ ಖಾನ್ 'ಸೂಪರ್ ಸ್ಟಾರ್' ಪಟ್ಟಕ್ಕೇರಿದ್ದು ಕೇವಲ ಆರು ವರ್ಷಗಳ ಹಿಂದೆ. ಅಂದ್ರೆ 2009 ರಲ್ಲಿ.

1989ರಲ್ಲಿ 'ಮೈನೇ ಪ್ಯಾರ್ ಕಿಯಾ' ಚಿತ್ರದ ಮೂಲಕ ಬಾಲಿವುಡ್ ನ ಬ್ರ್ಯಾಂಡ್ ನ್ಯೂ ಹೀರೋ ಆಗಿ ಸಲ್ಮಾನ್ ಖಾನ್ ಎಂಟ್ರಿಕೊಟ್ಟಿದ್ದರೂ, ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಘರ್ಜಿಸುವುದಕ್ಕೆ ಶುರುಮಾಡಿದ್ದು 2009ರಲ್ಲಿ ರಿಲೀಸ್ ಆದ 'ವಾಂಟೆಡ್' ಚಿತ್ರದಿಂದ.

ರಂಜಾನ್ ಹಬ್ಬದ ಶುಭ ಸಂದರ್ಭದಲ್ಲಿ ರಿಲೀಸ್ ಆದ 'ವಾಂಟೆಡ್' ಸಲ್ಮಾನ್ ಖಾನ್ ವೃತ್ತಿಬದುಕ್ಕನ್ನೇ ಬದಲಿಸಿದ ಸಿನಿಮಾ. ಅಲ್ಲಿಂದ, ಈದ್ ಗೂ ಸಲ್ಮಾನ್ ಗೂ ಒಂಥರಾ ಬಿಡಿಸಲಾರದ ನಂಟು. ರಂಜಾನ್ ಸಂದರ್ಭದಲ್ಲಿ ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆಯ್ತು ಅಂದ್ರೆ, ಸಿನಿಮಾ ಬ್ಲಾಕ್ ಬಸ್ಟರ್ ಅಂತಲೇ ಲೆಕ್ಕ. [ಅಶಕ್ತರಿಗೆ ಸಲ್ಮಾನ್ 'ಈದ್' ಮಹಾನ್ ಕೊಡುಗೆ]

ಈ ಸಕ್ಸಸ್ ಫಾರ್ಮುಲಾ ಕಂಡುಕೊಂಡಿರುವ ಸಲ್ಮಾನ್ ಖಾನ್ ಈ ವರ್ಷ ಕೂಡ ರಂಜಾನ್ ಹಬ್ಬದ ಸಮಯದಲ್ಲೇ 'ಭಜರಂಗಿ ಭಾಯ್ ಜಾನ್' ಆಗಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ನಸೀಬು ಈ ಬಾರಿಯೂ ವರ್ಕೌಟ್ ಆಗುತ್ತಾ? ರಂಜಾನ್ ಹಬ್ಬಕ್ಕೂ ಸಲ್ಲು ಭಾಯ್ ಗೂ ಇರುವ ನಂಟು ಎಂಥದ್ದು ಅಂತ ನಾವ್ ಹೇಳ್ತೀವಿ ಮುಂದೆ ಓದಿ....

ಸಲ್ಮಾನ್ ಕೆರಿಯರ್ ಗೆ ಟ್ವಿಸ್ಟ್ ಕೊಟ್ಟ 'ವಾಂಟೆಡ್'

ಬಾಲಿವುಡ್ ನಲ್ಲಿ ಭದ್ರ ನೆಲೆ ಕಂಡುಕೊಳ್ಳುವುದಕ್ಕೆ ಸಲ್ಮಾನ್ ಖಾನ್ ಒದ್ದಾಡುತ್ತಿದ್ದ ಸಮಯದಲ್ಲಿ ರಿಲೀಸ್ ಆದ ಸಿನಿಮಾ 'ವಾಂಟೆಡ್'. ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಹಿಟ್ ಆಗಿದ್ದ 'ಪೋಕಿರಿ' ಚಿತ್ರದ ಹಿಂದಿ ವರ್ಷನ್ನೇ 'ವಾಂಟೆಡ್'.

ದಾಖಲೆಗಳ ಸರಮಾಲೆ ಸೃಷ್ಟಿಸಿದ 'ವಾಂಟೆಡ್'

ಬಿಟೌನ್ ನಲ್ಲಿ ಸಲ್ಮಾನ್ ಖಾನ್ ಮೋಸ್ಟ್ ವಾಂಟೆಡ್ ಹೀರೋ ಆಗೋ ಹಾಗೆ ಮಾಡಿದ್ದು ಇದೇ 'ವಾಂಟೆಡ್' ಸಿನಿಮಾ. ರಿಲೀಸ್ ಆದ ಕೆಲವೇ ದಿನಗಳಲ್ಲಿ ಬರೋಬ್ಬರಿ 100 ಕೋಟಿ ರೂಪಾಯಿ ಬಾಚಿ ಬಾಲಿವುಡ್ ನಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾ ಈ 'ವಾಂಟೆಡ್'.

'ಈದ್' ನಿಂದ ಸಲ್ಮಾನ್ ನಸೀಬು ಬದಲಿಸಿದ 'ವಾಂಟೆಡ್'

ಇಂಟ್ರೆಸ್ಟಿಂಗ್ ಅಂದ್ರೆ 'ವಾಂಟೆಡ್' ರಿಲೀಸ್ ಆಗಿದ್ದು ರಂಜಾನ್ ಟೈಮ್ ನಲ್ಲಿ. ಸಲ್ಮಾನ್ ಖಾನ್ ವೃತ್ತಿ ಬದುಕ್ಕಲ್ಲೇ ಈದ್ ಸಂದರ್ಭದಲ್ಲಿ ಬಿಡುಗಡೆ ಆದ ಮೊದಲ ಸಿನಿಮಾ 'ವಾಂಟೆಡ್'. ಈ ಬ್ಲಾಕ್ ಬಸ್ಟರ್ ಚಿತ್ರದಿಂದ ಸಲ್ಮಾನ್ ಅದೃಷ್ಟ ಖುಲಾಯಿಸಿತು. [ಅಗ್ರಸ್ಥಾನದಿಂದ ಶಾರುಖ್ ಕೆಳಕ್ಕೆ ತಳ್ಳಿದ ಸಲ್ಮಾನ್]

2010ರಲ್ಲಿ ಬಂದ 'ದಬಂಗ್'

ಒಂದು ವರ್ಷದ ಗ್ಯಾಪ್ ನಲ್ಲಿ ಮತ್ತದೇ ಈದ್ ಸಂದರ್ಭದಲ್ಲೇ ತೆರೆಗೆ ಬಂದ ಸಿನಿಮಾ 'ದಬಂಗ್'. ಖಾಕಿ ತೊಟ್ಟು ಚುಲ್ ಬುಲ್ ಪಾಂಡೆ ಗೆಟಪ್ ನಲ್ಲಿ ಮಿಂಚಿದ ಸಲ್ಮಾನ್ ಖಾನ್ 'ದಬಂಗ್' ಪರ್ಫಾಮೆನ್ಸ್ ನಿಂದ 138 ಕೋಟಿ ರೂಪಾಯಿ ಬಾಚಿ 'ಬಾಕ್ಸ್ ಆಫೀಸ್ ಸುಲ್ತಾನ್' ಆದರು.

2011ರಲ್ಲಿ 'ಬಾಡಿಗಾರ್ಡ್'

ರೀಮೇಕ್ ಚಿತ್ರವೇ ಆದರೂ, ಟಾಲಿವುಡ್ ಮತ್ತು ಕಾಲಿವುಡ್ ಗಿಂತ 'ಬಾಡಿಗಾರ್ಡ್' ಹೆಚ್ಚು ಸೌಂಡ್ ಮಾಡಿದ್ದು ಬಾಲಿವುಡ್ ನಲ್ಲಿ. ಬರೋಬ್ಬರಿ 148 ರೂಪಾಯಿ ಕೊಳ್ಳೆ ಹೊಡೆದ 'ಬಾಡಿಗಾರ್ಡ್' ಸಿನಿಮಾ ಕೂಡ ರಿಲೀಸ್ ಆಗಿದ್ದು ರಂಜಾನ್ ಟೈಮ್ ನಲ್ಲೇ.

2012ರಲ್ಲಿ 'ಏಕ್ ಥಾ ಟೈಗರ್'

ಹ್ಯಾಟ್ರಿಕ್ ಗೆಲುವು ಸಾಧಿಸಿದ ಸಲ್ಮಾನ್ ಖಾನ್ 2012ರಲ್ಲೂ 'ಏಕ್ ಥಾ ಟೈಗರ್' ಚಿತ್ರದ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಘರ್ಜಿಸಿದರು. ಇಲ್ಲೂ ವರ್ಕೌಟ್ ಆಗಿದ್ದು ಸಲ್ಮಾನ್ ಖಾನ್ 'ರಂಜಾನ್' ಫಾರ್ಮುಲಾ.

2014ರಲ್ಲಿ 'ಕಿಕ್'

'ಕಿಕ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಕಲೆಕ್ಷನ್ ನಲ್ಲಿ ಸಿನಿಮಾ ಬ್ಲಾಕ್ ಬಸ್ಟರ್. 200 ಕೋಟಿ ಕ್ಲಬ್ ಸೇರಿದ ಸಲ್ಮಾನ್ ಖಾನ್ ಅಭಿನಯದ 'ಕಿಕ್' ತೆರೆಕಂಡಿದ್ದು ಕಳೆದ ವರ್ಷದ ಈದ್ ಹಬ್ಬದಂದು. [ಯಾರೇನೇ ಅಂದರೂ ಸಲ್ಲೂ ಕಿಕ್ ಗಳಿಕೆ ಬೊಂಬಾಟ್]

ಸಲ್ಲುಗೆ ಲಕ್ಕಿಯಾಗಿದ್ದು 'ರಂಜಾನ್'

'ವಾಂಟೆಡ್' ನಂತರ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಟ್ಟ ಸಲ್ಲು ಗಲ್ಲಪೆಟ್ಟಿಗೆಯನ್ನ ಚಿಂದಿ ಉಡಾಯಿಸಿದರು. ಅದಕ್ಕೆಲ್ಲಾ ಕಾರಣ ಈದ್. ಅಲ್ಲಾ ಆಶೀರ್ವಾದದ ಪವಾಡವೋ ಏನೋ ರಂಜಾನ್ ಸಂದರ್ಭದಲ್ಲಿ ರಿಲೀಸ್ ಆದ ಸಲ್ಲುನ ಎಲ್ಲಾ ಚಿತ್ರಗಳೂ ಸೂಪರ್ ಹಿಟ್. [ಅಮೀರ್, ಸಲ್ಮಾನ್, ಶಾರುಖ್ ಈದ್ ಆಚರಣೆ ಸಂಭ್ರಮ]

ರಂಜಾನ್ ಅಷ್ಟೆ.! ಬಾಕಿ ಟೈಮ್ ಅಷ್ಟಕಷ್ಟೆ.!

ಅಚ್ಚರಿ ಅಂದ್ರೆ, ರಂಜಾನ್ ಬಿಟ್ಟು ಬಾಕಿ ಸಂದರ್ಭದಲ್ಲಿ ರಿಲೀಸ್ ಆದ ಸಲ್ಲು ಚಿತ್ರಗಳು ಅಷ್ಟೇನು ಸದ್ದು ಮಾಡಿಲ್ಲ. ಸಲ್ಮಾನ್ ಖಾನ್ ಅಭಿನಯದ 'ರೆಡಿ' ಅಂಥ ಕಮಾಲ್ ಮಾಡ್ಲಿಲ್ಲ. 2011 ಜೂನ್ ನಲ್ಲಿ ರಿಲೀಸ್ ಆದ 'ರೆಡಿ' ಕಲೆಕ್ಷನ್ ಲೆಕ್ಕಾಚಾರದಲ್ಲಿ ಅಷ್ಟಕಷ್ಟೆ. ಇನ್ನೂ 2012ರ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ತೆರೆಕಂಡ 'ದಬ್ಬಂಗ್ 2' ಕೂಡ ಸೂಪರ್ ಅನಿಸಿಕೊಳ್ಳಲಿಲ್ಲ. 2014 ಜನವರಿಯಲ್ಲಿ ರಿಲೀಸ್ ಆದ 'ಜೈ ಹೋ' ಚಿತ್ರಕ್ಕೆ ಸಿಕ್ಕ ಜೈಕಾರದ ಬಗ್ಗೆ ನಿಮಗೆ ಗೊತ್ತು. ಅಲ್ಲಿಗೆ, ಸಲ್ಮಾನ್ ಖಾನ್ ಚಿತ್ರಕ್ಕೆ ರಂಜಾನ್ ಹಬ್ಬದ ಸೀಸನ್ನೇ ಬೆಸ್ಟ್ ಅಂದ್ಹಾಗಾಗಿದೆ. [ರಂಜಾನ್ ಮುನ್ನ ಸಲ್ಮಾನ್ ಖಾನ್ ಮಹತ್ವದ ನಿರ್ಧಾರ]

ನಾಳೆ ರಿಲೀಸ್ ಆಗ್ತಿದೆ 'ಭಜರಂಗಿ ಭಾಯ್ ಜಾನ್'

ಈ ವರ್ಷದ ಈದ್ ಸಂದರ್ಭದಲ್ಲಿ ಸಲ್ಮಾನ್ ಖಾನ್ 'ಭಜರಂಗಿ ಭಾಯ್ ಜಾನ್' ಆಗಿ ತೆರೆಗೆ ಬರ್ತಿದ್ದಾರೆ. ಸಲ್ಮಾನ್ ಟ್ರ್ಯಾಕ್ ರೆಕಾರ್ಡ್ ನೋಡಿದಾಗ, ರಂಜಾನ್ ಹಬ್ಬ ಸಲ್ಮಾನ್ ನ ಎಂದೂ ಕೈಬಿಟ್ಟಿಲ್ಲ. ಅಂದ್ಮೇಲೆ 'ಭಜರಂಗಿ ಭಾಯ್ ಜಾನ್' ಬ್ಲಾಕ್ ಬಸ್ಟರ್ ಆಗುವುದರಲ್ಲಿ ಡೌಟ್ ಇಲ್ಲ ಅನ್ನೋದು ಬಿಟೌನ್ ಪಂಡಿತರ ಮಾತು.

English summary
Ever since his first Eid release 'Wanted' in 2009, the festival is booked for Bollywood Actor Salman Khan. And every film of Salman Khan that releases on Ramzan is proved to be a Block Buster. This year too, Salman Khan has 'Bajrangi Bhaijaan' on hand.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada