For Quick Alerts
  ALLOW NOTIFICATIONS  
  For Daily Alerts

  ಮತ್ತೆ ಶುರುವಾಯ್ತು ಹೃತಿಕ್-ಕಂಗನಾ ವಾರ್: ಸಾಮಾಜಿಕ ಜಾಲತಾಣದಲ್ಲಿ ರೊಚ್ಚಿಗೆದ್ದ ರಂಗೋಲಿ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಸಹೋದರಿ ರಂಗೋಲಿ ಈಗ ಅಲಿಯಾ ಭಟ್ ಮತ್ತು ಅವರ ಕುಟುಂಬದವರನ್ನು ಬಿಟ್ಟು ಮತ್ತೆ ಹೃತಿಕ್ ರೋಷನ್ ಹಿಂದೆ ಬಿದ್ದಿದ್ದಾರೆ. ಮೊನ್ನೆ ಮೊನ್ನೆವರೆಗೂ ಅಲಿಯಾ ಭಟ್ ಮತ್ತು ಅವರ ಕುಟುಂಬದವರ ವಿರುದ್ಧ ಕೆಂಡಕಾರುತ್ತಿದ್ದರು ರಂಗೋಲಿ.

  ಬಿ ಟೌನ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಕಂಗನಾ ಮತ್ತು ಹೃತಿಕ್ ವಿವಾದಾತ್ಮಕ ಸಂಬಂಧ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಇಬ್ಬರ ನಡುವಿನ ಕೆಸರೆರೆಚಾಟ ಬಾಲಿವುಡ್ ಮಂದಿಯನ್ನು ಬೆರಗುಗೊಳಿಸಿತ್ತು. ಇಬ್ಬರ ನಡುವೆ ಬುಗಿಲೆದ್ದಿದ್ದ ವಿವಾದ ಸದ್ಯ ತಕ್ಕ ಮಟ್ಟಿಗೆ ತಣ್ಣಗಾಗಿತ್ತು.

  ಕಂಗನಾ ಮೇಲೆ ಚಪ್ಪಲಿ ಎಸೆದಿದ್ರಾ ಅಲಿಯಾ ಭಟ್ ತಂದೆ?

  ಆದ್ರೀಗ ಮತ್ತೆ ಕಂಗನಾ ಸಹೋದರಿ ರಂಗೋಲಿ, ಹೃತಿಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ಕಂಗನಾ ಅಭಿನಯದ 'ಮೆಂಟಲ್ ಹೈ ಕ್ಯಾ' ಮತ್ತು ಹೃತಿಕ್ ಅಭಿನಯದ 'ಸೂಪರ್ 30' ಸಿನಿಮಾಗಳು. ಹೌದು ಈ ಎರಡು ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.

  ಜುಲೈ 26ಕ್ಕೆ ಮಾಜಿ ಸ್ನೇಹಿತರ ಸಿನಿಮಾಗಳು ಒಟ್ಟಿಗೆ ತೆರೆಗೆ ಬರುತ್ತಿದೆ. ಹೃತಿಕ್ ಅಭಿನಯದ 'ಸೂಪರ್ 30' ಸಿನಿಮಾ ಜುಲೈ 26ಕ್ಕೆ ರಿಲೀಸ್ ಆಗುತ್ತೆ ಎಂದು ಮೊದಲೆ ಅನೌನ್ಸ್ ಆಗಿತ್ತು. ಆ ನಂತರ ಕಂಗನಾ ಅಭಿನಯ 'ಮೆಂಟಲ್ ಹೈ ಕ್ಯಾ' ಸಿನಿಮಾ ರಿಲೀಸ್ ಡೇಟ್ ಬಹಿರಂಗಮಾಡಿದೆ ಚಿತ್ರತಂಡ. ಇದು ಈಗ ಇಬ್ಬರ ನಡುವಿನ ವಾರ್ ಗೆ ಕಾರಣವಾಗಿದೆ.

  ಹೃತಿಕ್ ಸಿನಿಮಾ ರಿಲೀಸ್ ದಿನವೆ ಕಂಗನಾ ಸಿನಿಮಾ ರಿಲೀಸ್ ಆಗುತ್ತಿರುವುದು, ಬೇಕು ಅಂತಾನೆ ಕಂಗನಾ ರಿಲೀಸ್ ಮಾಡುತ್ತಿದ್ದಾರೆ. ಇದಕ್ಕೆ ಕಂಗನಾನೆ ಕಾರಣ ಎಂದು ಹೃತಿಕ್ ಕಡೆಯವರು ಆರೋಪ ಮಾಡುತ್ತಿದ್ದಾರಂತೆ. ಇದರಿಂದ ರೊಚ್ಚಿಗೆದ್ದ ರಂಗೋಲಿ ಸಾಮಾಜಿಕ ಜಾಲತಾಣದಲ್ಲಿ ಹೃತಿಕ್ ವಿರುದ್ಧ ಸಿಡಿದೆದ್ದಿದ್ದಾರೆ.

  ಮತ್ತೆ ಕಂಕನಾ ವಿರುದ್ಧ ಹೃತಿಕ್ ಕೆಟ್ಟದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ 'ಮೆಂಟಲ್ ಹೈ ಕ್ಯಾ' ಚಿತ್ರದ ನಿರ್ಮಾಪಕಿ ಏಕ್ತಾ ಕಪೂರ್ "ಇದು ನನ್ನ ನಿರ್ಮಾಣದಲ್ಲಿ ಮೂಡಿ ಬಂದ ಸಿನಿಮಾ. ನಾನೆ ಚಿತ್ರದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದು. ಇದರಲ್ಲಿ ಯಾರ ಹಸ್ತಕ್ಷೇಪವು ಇಲ್ಲ. ನನ್ನ ನಿರ್ಧಾರವಿದು, ಬೇರೆಯಾರದ್ದು ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

  ಸಿನಿಮಾ ರಿಲೀಸ್ ಗೆ ಇನ್ನು ತಿಂಗಳುಗಳಿವೆ, ಈಗಲೆ ಇಬ್ಬರ ನಡುವೆ ವಾರ್ ಶುರುವಾಗಿದೆ. ಇನ್ನು ಸಿನಿಮಾ ರಿಲೀಸ್ ಆಗುವಷ್ಟರಲ್ಲಿ ಇಬ್ಬರ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೊ ಕಾದು ನೋಡಬೇಕು.

  English summary
  Bollywood actress Kangana Ranaut 'Mental Hai Kya' and Hrithik Roshan's 'Super 30' are all set to clash at box-office on July 26.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X