For Quick Alerts
  ALLOW NOTIFICATIONS  
  For Daily Alerts

  ಕಪೂರ್ ಕುಟುಂಬದಲ್ಲಿ 10ನೇ ತರಗತಿ ಪಾಸಾದ ಮೊದಲ ಹುಡುಗ ರಣ್‌ಬೀರ್: ಅಂಕವೆಷ್ಟು?

  By Bhagya.s
  |

  ಬಾಲಿವುಡ್ ಸಿನಿಮಾರಂಗದಲ್ಲಿ ನಟ ರಣ್ಬೀರ್ ಕಪೂರ್ ತಮ್ಮದೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ಬಾಲಿವುಡ್‌ನ ಪ್ರಮುಖ ನಾಯಕರಲ್ಲಿ ರಣ್ಬೀರ್ ಕಪೂರ್ ಹೆಸರು ಕೂಡ ಒಂದು. ರಣ್ಬೀರ್ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗ ಒಂದು ಸ್ವಾರಸ್ಯಕರ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

  ಇತ್ತೀಚೆಗೆ ನಟಿ ಆಲಿಯಾ ಭಟ್ ಜೊತೆಗೆ ರಣ್ಬೀರ್ ಕಪೂರ್ ಮದುವೆ ಆಗಿದೆ. ಶೀಘ್ರದಲ್ಲಿಯೇ ತಂದೆಯಾಗುವ ಸುದ್ದಿಯನ್ನು ಕೂಡ ಕೊಟ್ಟಿದ್ದಾರೆ. ಇದೇ ವಿಚಾರಕ್ಕೆ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಇಬ್ಬರೂ ಕೂಡ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಅವರ ಮದುವೆ ಮತ್ತು ಮಗು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು.

  ಈಗ ರಣ್ಬೀರ್ ಕಪೂರ್ ಎಸ್‌ಎಸ್‌ಎಲ್‌ಸಿ ಮಾರ್ಕ್ಸ್‌ ಕಾರ್ಡ್‌ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ನಟ ರಣಬೀರ್ ಕಪೂರ್ ಹತ್ತನೇ ತರಗತಿ ಪಾಸಾಗಿದ್ದು. ಹತ್ತನೇ ತರಗತಿ ಪಾಸ್ ಆಗಿರುವ ಬಗ್ಗೆ ರಣ್ಬೀರ್ ಕಪೂರ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

  ರಣ್ಬೀರ್ ಕಪೂರ್ 10ನೇ ತರಗತಿ ಕಥೆ!

  ರಣ್ಬೀರ್ ಕಪೂರ್ 10ನೇ ತರಗತಿ ಕಥೆ!

  ನಟ ರಣ್ಬೀರ್ ಕಪೂರ್ ಸಂದರ್ಶನವೊಂದರಲ್ಲಿ ತಾವು 10ನೇ ತರಗತಿ ಪಾಸ್ ಆದ ಬಗ್ಗೆ ಹೇಳಿಕೊಂಡಿದ್ದಾರೆ. ರಣ್ಬೀರ್ ಕಪೂರ್ 10ನೇ ತರಗತಿ ಪಾಸ್ ಆದ ಬಗ್ಗೆ ಕುತೂಹಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಇಡೀ ಕಪೂರ್ ಕುಟುಂಬವೇ ರಣ್ಬೀರ್ ಕಪೂರ್ 10ನೇ ತರಗತಿ ಪಾಸ್ ಆಗುವುದನ್ನು ನಿರೀಕ್ಷೆ ಮಾಡುತ್ತಿದ್ದಂತೆ. ರಣ್ಬೀರ್ ಕಪೂರ್ ಹತ್ತನೇ ತರಗತಿಯನ್ನು ಪಾಸ್ ಆಗಿದ್ದಾರೆ ಎಂದು ತಿಳಿದ ಕೂಡಲೇ ಕುಟುಂಬವೇ ಖುಷಿಯಲ್ಲಿ ಮಿಂದೆದ್ದಿತ್ತಂತೆ. ಆಗ ರಣ್ಬೀರ್ ಕಪೂರ್‌ಗಾಗಿ ದೊಡ್ಡ ಪಾರ್ಟಿಯನ್ನೇ ಆಯೋಜಿಸಲಾಗಿತ್ತಂತೆ.

  ಕಪೂರ್ ಕಾಂದಾನ್‌ನಲ್ಲಿ ಸಿಹಿ ಸುದ್ದಿ!

  ಕಪೂರ್ ಕಾಂದಾನ್‌ನಲ್ಲಿ ಸಿಹಿ ಸುದ್ದಿ!

  ಅಷ್ಟಕ್ಕೂ ನಟ ರಣ್ಬೀರ್ ಕಪೂರ್ ಹತ್ತನೇ ತರಗತಿ ಪಾಸ್ ಹಾಕಿದ್ದು, ಆ ಕುಟುಂಬಕ್ಕೆ ಯಾಕೆ ವಿಶೇಷ ಎನ್ನುವುದಕ್ಕೆ ಕಾರಣವಿದೆ. ಹೌದು, ಕಪೂರ್ ಕುಟುಂಬದಲ್ಲಿ ಮೊದಲು ಹತ್ತನೇ ತರಗತಿ ಪಾಸಾದ ಹುಡುಗ ಎಂದರೆ ರಣ್ಬೀರ್ ಕಪೂರ್ ಅಂತೆ. ರಣ್ಬೀರ್ ಕಪೂರ್‌ಗಿಂತಲೂ ಮೊದಲು ರಣ್ಬೀರ್ ಕಪೂರ್ ಕುಟುಂಬದಲ್ಲಿ ಯಾರೊಬ್ಬರೂ ಹತ್ತನೇ ತರಗತಿಯನ್ನು ಪಾಸ್ ಮಾಡಿರಲಿಲ್ಲವಂತೆ. ಹಾಗಾಗಿ ರಣ್ಬೀರ್ ಕಪೂರ್ 10ನೇ ತರಗತಿ ಪಾಸ್ ಆಗುವುದು ಅವರ ಕುಟುಂಬಕ್ಕೆ ಅತಿ ಮುಖ್ಯವಾಗಿತ್ತು. ಈ ವಿಚಾರವನ್ನು ಅತ್ಯಂತ ಸಂತಸದಿಂದಲೇ ಹಂಚಿಕೊಂಡಿದ್ದಾರೆ.

  ಹೆಣ್ಣು ಮಕ್ಕಳದ್ದೇ ಮೇಲುಗೈ!

  ಹೆಣ್ಣು ಮಕ್ಕಳದ್ದೇ ಮೇಲುಗೈ!

  ಕಪೂರ್ ಕುಟುಂಬದಲ್ಲಿ ಯಾರೂ 10ನೇ ತರಗತಿ ಪಾಸ್ ಮಾಡಿಲ್ಲ ಎಂದಲ್ಲ. ರಣ್ಬೀರ್ ಕಪೂರ್ ಸಹೋದರಿ ರಿಧಿಮಾ ಕಪೂರ್ ವಿದ್ಯಾವಂತೆ. ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ಅಲ್ಲದೆ ಇವರ ಕುಟುಂಬದಲ್ಲಿ ಹೆಣ್ಣು ಮಕ್ಕಳೇ ವಿದ್ಯಾಭ್ಯಾಸದಲ್ಲಿ ಮುಂದೆ ಇರುವುದು. ಗಂಡು ಮಕ್ಕಳಲ್ಲಿ ಮೊದಲ ಬಾರಿಗೆ 10ನೇ ತರಗತಿ ಪಾಸಾಗಿದ್ದು ರಣ್ಬೀರ್ ಕಪೂರ್ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ.

  ಕಪೂರ್ ಕುಟುಂಬದಲ್ಲಿ ಹೆಣ್ಣು ಸ್ಟ್ರಾಂಗ್!

  ಕಪೂರ್ ಕುಟುಂಬದಲ್ಲಿ ಹೆಣ್ಣು ಸ್ಟ್ರಾಂಗ್!

  ರಣ್ಬೀರ್ ಕಪೂರ್ ಕುಟುಂಬದಲ್ಲಿ ಯಾರೂ 10ನೇ ತರಗತಿ ಪಾಸ್ ಮಾಡಿಲ್ಲ ಎಂದಲ್ಲ. ರಣ್ಬೀರ್ ಕಪೂರ್ ಸಹೋದರಿಯರು ರಿಧಿಮಾ ಕಪೂರ್ ವಿದ್ಯಾವಂತೆ. ಪದವಿಯನ್ನು ಕೂಡ ಪಡೆದುಕೊಂಡಿದ್ದಾರೆ. ಅಲ್ಲದೆ ಇವರ ಕುಟುಂಬದಲ್ಲಿ ಹೆಣ್ಣು ಮಕ್ಕಳೇ ಹೆಚ್ಚು ವಿದ್ಯಾಭ್ಯಾಸದಲ್ಲಿ ಮುಂದೆ ಇರುವುದು. ಗಂಡು ಮಕ್ಕಳಲ್ಲಿ ಮೊದಲ ಬಾರಿಗೆ 10ನೇ ತರಗತಿ ಪಾಸಾಗಿದ್ದು, ರಣ್ಬೀರ್ ಕಪೂರ್ ಎಂಬ ವಿಚಾರವನ್ನು ಇತ್ತೀಚೇಗಷ್ಟೇ ರಿವೀಲ್ ಮಾಡಿದ್ದಾರೆ.

  English summary
  Ranbir Kapoor 10th Marks Is 53 Percentage, He Is First Boy To Pass 10th, Know More,
  Monday, July 11, 2022, 8:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X